ಎಳನೀರು ಎಲ್ಲ ಕಾಲದಲ್ಲೂ ಲಭ್ಯವಿರುವ ಜೀವಾಮೃತ. ತೆಂಗಿನಕಾಯಿಯ ಈ ನೀರು ಸಾಕಷ್ಟು ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತದೆ. ಎಳನೀರು ನಮಗೆ ಲಭ್ಯವಿರುವ ಅತ್ಯಂತ ಪೌಷ್ಟಿಕ ಪಾನೀಯಗಳಲ್ಲಿ ಒಂದಾಗಿದೆ. ಎಳನೀರು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ. ಹಾಗೇ, ಹೃದಯದ ಆರೋಗ್ಯಕ್ಕೆ ಸಹಾಯಕವಾಗಿದೆ. ಎಳನೀರು ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
ಎಳೆಯ ತೆಂಗಿನಕಾಯಿಯು ಜೆಲ್ಲಿಯಂತಹ ಪದಾರ್ಥವನ್ನು ಹೊಂದಿರುತ್ತದೆ. ಆದ್ದರಿಂದ ಇದನ್ನು ಕೋಮಲ ತೆಂಗಿನಕಾಯಿ (ಗಂಜಿ) ಎಂದು ಕರೆಯಲಾಗುತ್ತದೆ. ಇದರೊಳಗಿನ ನೀರನ್ನು ಎಳನೀರು ಎನ್ನಲಾಗುತ್ತದೆ. ಎಳನೀರಿನಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಆದ್ದರಿಂದ, ಇದು ಮಾನವನ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ.
ಇದನ್ನೂ ಓದಿ: ಚರ್ಮ, ಮುಖದ ಸೌಂದರ್ಯಕ್ಕೆ ಮೊಸರಿನಿಂದ ಆಗುವ 10 ಪ್ರಯೋಜನಗಳಿವು
1. ರಕ್ತದ ಕೊಲೆಸ್ಟ್ರಾಲ್‌ಗೆ ಎಳನೀರಿನ ಉಪಯೋಗಗಳು:
ಎಳನೀರು ರಕ್ತದಲ್ಲಿನ ಲಿಪಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ತಿಳಿಸಿವೆ. ಈ ಪರಿಣಾಮಗಳನ್ನು ಪ್ರಾಣಿಗಳ ಮಾದರಿಗಳಲ್ಲಿ ಗಮನಿಸಲಾಗಿದೆ. ಮಾನವನ ಆರೋಗ್ಯದಲ್ಲಿ ಇದರ ನಿಜವಾದ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆ ನಡೆಸಬೇಕಾಗಿದೆ.
2. ನೋವು ಮತ್ತು ಉರಿಯೂತಕ್ಕೆ ಎಳನೀರಿನ ಉಪಯೋಗಗಳು:
ಪ್ರಾಣಿಗಳ ಮೇಲೆ ನಡೆದ ಅಧ್ಯಯನಗಳಲ್ಲಿ ಎಳನೀರು ಉರಿಯೂತವನ್ನು ಮತ್ತು ನೋವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಡುಬಂದಿದೆ. ಎಳನೀರಿನಲ್ಲಿರುವ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಇದಕ್ಕೆ ಕಾರಣವಾಗಿರಬಹುದು.
ಇದನ್ನೂ ಓದಿ: ಹಾಟ್ ಆಯಿಲ್ ಮೆನಿಕ್ಯೂರ್ ಮಾಡಿಸಿಕೊಳ್ಳುವುದರಿಂದ ಏನು ಉಪಯೋಗ?
3. ಹೊಟ್ಟೆಗೆ ಎಳನೀರಿನ ಉಪಯೋಗ:
ಎಳನೀರು ಬಹಳಷ್ಟು ಸಕ್ರಿಯ ಜೀವಸತ್ವಗಳು, ಖನಿಜಗಳು ಮತ್ತು ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ಹೊಟ್ಟೆಯ ಅನಾರೋಗ್ಯವನ್ನು ಶಮನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ನೀರು ಮತ್ತು ಸೋಡಿಯಂನಂತಹ ಪ್ರಮುಖ ಲವಣಗಳ ಕೊರತೆಯಿಂದ ಉಂಟಾಗುವ ಅತಿಸಾರ ಮತ್ತು ಇತರ ಹೊಟ್ಟೆಯ ಸೋಂಕಿನಿಂದ ಬಳಲುತ್ತಿರುವ ಜನರಿಗೆ ಎಳನೀರು ಬೆಸ್ಟ್ ಆಯ್ಕೆ. ಎಳನೀರು ನಮ್ಮ ದೇಹದಿಂದ ಕಳೆದುಹೋದ ಈ ಲವಣಗಳನ್ನು ವಾಪಾಸ್ ನೀಡಿ, ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ.
ಇದಿಷ್ಟೇ ಅಲ್ಲದೆ, ಮೂತ್ರನಾಳದ ಸೋಂಕುಗಳಿಗೆ ಎಳನೀರು ಉತ್ತಮವಾಗಿದೆ. ಇದು ಶೀತ ಬಾರದಂತೆ ತಡೆಯುತ್ತದೆ. ಚಿಕನ್ ಪಾಕ್ಸ್, ದಡಾರದಿಂದ ಉಂಟಾಗುವ ದದ್ದುಗಳ ವಿರುದ್ಧ ಇದು ಸಹಾಯಕವಾಗಿದೆ. ಇದು ಮೂತ್ರವರ್ಧಕವಾಗಿದೆ. ಕಿಡ್ನಿ ಸ್ಟೋನ್ ಇದ್ದವರಿಗೆ ಎಳನೀರು ಸಹಾಯಕ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ