Health Tips: ಮಸಾಲೆಯುಕ್ತ ಆಹಾರ ಅನಾರೋಗ್ಯಕರವೇ? ಅಲ್ಲ ಎನ್ನುತ್ತಾರೆ ಆಹಾರ ತಜ್ಞರು

| Updated By: ಅಕ್ಷತಾ ವರ್ಕಾಡಿ

Updated on: Sep 05, 2024 | 11:51 AM

ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಆಹಾರ ಕ್ರಮಗಳನ್ನು ಅನುಸರಿಸುತ್ತೇವೆ. ನಮ್ಮ ಪ್ರಕಾರ ಅವು ದೇಹಕ್ಕೆ ಒಳ್ಳೆಯದು. ಜೊತೆಗೆ ಫಿಟ್ನೆಸ್ ಕಾಪಾಡಿಕೊಳ್ಳಲು ಹಲವಾರು ರೀತಿಯ ಆಹಾರಗಳನ್ನು ವಿವಿಧ ರೀತಿಯಲ್ಲಿ ತಿನ್ನುತ್ತೇವೆ. ಅದರಂತೆ ಮಸಾಲೆಯುಕ್ತ ಆಹಾರವು ಅನಾರೋಗ್ಯಕರ ಎಂಬ ಕಲ್ಪನೆ ನಮ್ಮಲ್ಲಿ ಇದೆ. ಆದರೆ ಆಹಾರ ತಜ್ಞೆ ಶೈಲಾ ಅವರು ಹೇಳುವ ಪ್ರಕಾರ ಮಸಾಲೆಯುಕ್ತ ಆಹಾರಗಳು ನಾವು ತಿಳಿದುಕೊಂಡ ಮಟ್ಟಿಗೆ ಕೆಟ್ಟದ್ದಲ್ಲ. ಅದು ಹೇಗೆ? ಇಲ್ಲಿದೆ ಮಾಹಿತಿ.

Health Tips: ಮಸಾಲೆಯುಕ್ತ ಆಹಾರ ಅನಾರೋಗ್ಯಕರವೇ? ಅಲ್ಲ ಎನ್ನುತ್ತಾರೆ ಆಹಾರ ತಜ್ಞರು
Follow us on

ನಾವು ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಆಹಾರ ಕ್ರಮಗಳನ್ನು ಅನುಸರಿಸುತ್ತೇವೆ. ನಮ್ಮ ಪ್ರಕಾರ ಅವು ದೇಹಕ್ಕೆ ಒಳ್ಳೆಯದು. ಜೊತೆಗೆ ಫಿಟ್ನೆಸ್ ಕಾಪಾಡಿಕೊಳ್ಳಲು ಹಲವಾರು ರೀತಿಯ ಆಹಾರಗಳನ್ನು ವಿವಿಧ ರೀತಿಯಲ್ಲಿ ತಿನ್ನುತ್ತೇವೆ. ಅದರಂತೆ ಮಸಾಲೆಯುಕ್ತ ಆಹಾರವು ಅನಾರೋಗ್ಯಕರ ಎಂಬ ಕಲ್ಪನೆ ನಮ್ಮಲ್ಲಿ ಇದೆ. ಆದರೆ ಆಹಾರ ತಜ್ಞೆ ಶೈಲಾ ಅವರು ಹೇಳುವ ಪ್ರಕಾರ ಮಸಾಲೆಯುಕ್ತ ಆಹಾರಗಳು ನಾವು ತಿಳಿದುಕೊಂಡ ಮಟ್ಟಿಗೆ ಕೆಟ್ಟದ್ದಲ್ಲ. ಅದು ಹೇಗೆ? ಇಲ್ಲಿದೆ ಮಾಹಿತಿ.

ಕೆಲವರು ಸಾಕಷ್ಟು ಮಸಾಲೆ ಇರುವಂತಹ ಆಹಾರವನ್ನು ಸೇವನೆ ಮಾಡುತ್ತಾರೆ. ಅದು ಅವರ ಕಣ್ಣುಗಳಲ್ಲಿ ನೀರು ತರುವಷ್ಟು, ಮುಖ ಕೆಂಪಾಗುವಷ್ಟು ಖಾರವಿರುತ್ತದೆ. ಇಂತಹ ಆಹಾರ ಪದ್ಧತಿ ಒಳ್ಳೆಯದಲ್ಲ ಎಂದು ಆಹಾರ ತಜ್ಞರು ಹೇಳುತ್ತಾರೆ. ಆದರೆ ನಾವು ಮಸಾಲೆಯುಕ್ತ ಆಹಾರವನ್ನು ಸೇವಿಸುವಾಗ ತಿಳಿದುಕೊಳ್ಳಬೇಕಾಗಿರುವುದು ನಮ್ಮ ದೇಹಕ್ಕೆ ಎಷ್ಟು ಸಹಿಷ್ಣುತೆ ಇದೆ ಎಂದು. ಅಂದರೆ ನಾವು ಆ ರೀತಿಯ ಆಹಾರಗಳನ್ನು ಎಷ್ಟರ ಮಟ್ಟಿಗೆ ತಡೆದುಕೊಳ್ಳಬಹುದು ಎಂಬುದನ್ನು ತಿಳಿದು ಅದಕ್ಕೆ ಅನುಗುಣವಾಗಿ ಆಹಾರವನ್ನು ಸೇವನೆ ಮಾಡಬೇಕು.

ಇದನ್ನೂ ಓದಿ: ಮೆದುಳಿನ ಕ್ಯಾನ್ಸರ್ ಗೆ ಚಿಕಿತ್ಸೆ ಈಗ ಸುಲಭ; ರಕ್ತ ಪರೀಕ್ಷೆ ಮೂಲಕ ಗಂಟೆಯೊಳಗೆ ಪತ್ತೆ

ಮಸಾಲೆಯುಕ್ತ ಆಹಾರವನ್ನು ಸೇವಿಸಿದಾಗ ದೇಹಕ್ಕೆ ಏನಾಗುತ್ತದೆ?

ಮೆಣಸಿನಲ್ಲಿರುವ ಕ್ಯಾಪ್ಸೈಸಿನ್, ನಾಲಿಗೆಯ ಮೇಲೆ ಸುಡುವ ಸಂವೇದನೆ ಅಥವಾ ಕಿರಿಕಿರಿಯನ್ನು ಉಂಟುಮಾಡುವ ಸಂಯುಕ್ತವಾಗಿದೆ. ಆದರೆ ಸೌಮ್ಯ ಮಸಾಲೆ ಇರುವ ಖಾದ್ಯ ಸೇವನೆ ಮಾಡುವುದರಿಂದ ಕಿರಿಕಿರಿ ಆಗುವುದಿಲ್ಲ ಜೊತೆಗೆ ರುಚಿಯೂ ಸಿಗುತ್ತದೆ. ಹಾಗಾಗಿ ಮಸಾಲೆಯುಕ್ತ ಆಹಾರವನ್ನು ನಿಯಮಿತವಾಗಿ ಸೇವನೆ ಮಾಡುವುದು ಅನಾರೋಗ್ಯಕರವಲ್ಲ ಎಂದು ಆಹಾರ ತಜ್ಞರು ಹೇಳುತ್ತಾರೆ. ಆದರೆ ನಾವು ಅರ್ಥಮಾಡಿಕೊಳ್ಳಬೇಕಾದದ್ದು ನಮ್ಮ ಆದ್ಯತೆಯ ಮಸಾಲೆ ಮಟ್ಟ. ಅಂದರೆ ನಾವು ನಮ್ಮ ಆಹಾರದಲ್ಲಿ ಹೆಚ್ಚಿನ ಮಸಾಲೆಯನ್ನು ಸೇರಿಸಲು ಯೋಚಿಸುತ್ತಿದ್ದರೆ, ಅದನ್ನು ಆದಷ್ಟು ನಿಧಾನವಾಗಿ ಮಾಡಬೇಕು. ಜೊತೆಗೆ ನಿಮ್ಮ ದೇಹವು ಮಸಾಲೆಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.

ಸೂಚನೆ: ಇದು ನಿಮ್ಮ ಮಾಹಿತಿಗಾಗಿ ನೀಡಲಾಗಿದ್ದು, ಈ ಬಗ್ಗೆ ಯಾವುದೇ ಪ್ರಶ್ನೆಗಳಿದ್ದರೂ ವೈದ್ಯರ ಸಲಹೆಯನ್ನು ಪಡೆಯಿರಿ.

ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ