Health Tips: ಒಬ್ಬ ವ್ಯಕ್ತಿಗೆ ಎಷ್ಟು ಬಾರಿ ಡೆಂಗ್ಯೂ ಜ್ವರ ಬರಬಹುದು ಎಂದು ತಿಳಿದಿದೆಯೇ!

ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳಿನಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಹೆಚ್ಚಿನ ಗಮನಹರಿಸಲಾಗುತ್ತಿದೆ. ಡೆಂಗ್ಯೂ ಬಂದರೆ ಸಾಮಾನ್ಯವಾಗಿ ಕೆಲವು ದಿನಗಳಲ್ಲಿ ಗುಣವಾಗುತ್ತದೆ. ಆದರೆ, ಕೆಲವರಲ್ಲಿ ಡೆಂಗ್ಯೂದಿಂದಾಗಿ, ದೇಹದಲ್ಲಿನ ಪ್ಲೇಟ್ಲೆಟ್ಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಇದು ಕೆಲವೊಮ್ಮೆ ಮಾರಣಾಂತಿಕವಾಗಬಹುದು. ಆದರೆ ಒಬ್ಬ ವ್ಯಕ್ತಿಗೆ ಜೀವನದಲ್ಲಿ ಎಷ್ಟು ಬಾರಿ ಡೆಂಗ್ಯೂ ಬರುವ ಸಾಧ್ಯತೆ ಇರುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಈ ಪ್ರಶ್ನೆಗೆ ತಜ್ಞರ ಉತ್ತರ ಇಲ್ಲಿದೆ.

Health Tips: ಒಬ್ಬ ವ್ಯಕ್ತಿಗೆ ಎಷ್ಟು ಬಾರಿ ಡೆಂಗ್ಯೂ ಜ್ವರ ಬರಬಹುದು ಎಂದು ತಿಳಿದಿದೆಯೇ!
Dengue
Follow us
| Updated By: ಅಕ್ಷತಾ ವರ್ಕಾಡಿ

Updated on: Sep 05, 2024 | 3:48 PM

ಡೆಂಗ್ಯೂ ಒಂದು ಅಪಾಯಕಾರಿ ರೋಗವಾಗಿದ್ದು, ಸೊಳ್ಳೆ ಕಡಿತದಿಂದ ಉಂಟಾಗುತ್ತದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಅಲ್ಲದೆ ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳಿನಿಂದ ಡೆಂಗ್ಯೂ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಹೆಚ್ಚಿನ ಗಮನಹರಿಸಲಾಗುತ್ತಿದೆ. ಡೆಂಗ್ಯೂ ಬಂದರೆ ಸಾಮಾನ್ಯವಾಗಿ ಕೆಲವು ದಿನಗಳಲ್ಲಿ ಗುಣವಾಗುತ್ತದೆ. ಆದರೆ, ಕೆಲವರಲ್ಲಿ ಡೆಂಗ್ಯೂದಿಂದಾಗಿ, ದೇಹದಲ್ಲಿನ ಪ್ಲೇಟ್ಲೆಟ್ಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಇದು ಕೆಲವೊಮ್ಮೆ ಮಾರಣಾಂತಿಕವಾಗಬಹುದು. ಆದರೆ ಒಬ್ಬ ವ್ಯಕ್ತಿಗೆ ಜೀವನದಲ್ಲಿ ಎಷ್ಟು ಬಾರಿ ಡೆಂಗ್ಯೂ ಬರುವ ಸಾಧ್ಯತೆ ಇರುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಈ ಪ್ರಶ್ನೆಗೆ ತಜ್ಞರ ಉತ್ತರ ಇಲ್ಲಿದೆ.

ವಿಶ್ವಾದ್ಯಂತ ಸರಾಸರಿ 400 ಮಿಲಿಯನ್ ಡೆಂಗ್ಯೂ ಪ್ರಕರಣಗಳು ಮತ್ತು ಭಾರತದಲ್ಲಿ 2.5 ಲಕ್ಷ ಪ್ರಕರಣಗಳು ಇವೆ ಎಂದು ಅಂಕಿ ಅಂಶಗಳು ತೋರಿಸುತ್ತವೆ. ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರಿಗೆ ಮೊದಲಿಗೆ ಹೆಚ್ಚಿನ ರೋಗಲಕ್ಷಣಗಳನ್ನು ಕಂಡುಬರುವುದಿಲ್ಲ. ಅದರ ನಂತರ, ಹೆಚ್ಚಿನ ಜ್ವರ, ತಲೆನೋವು, ಚರ್ಮದ ಮೇಲೆ ಕೆಂಪು ದದ್ದುಗಳು ಅಥವಾ ರಕ್ತಸ್ರಾವ, ವಾಂತಿ, ವಾಕರಿಕೆ, ಸ್ನಾಯು ನೋವು, ಕೀಲು ನೋವು ಕಾಣಿಸಿಕೊಳ್ಳಬಹುದು. ಆದರೆ ತೀವ್ರವಾದ ಡೆಂಗ್ಯೂ ಜ್ವರ ಇರುವವರಿಗೆ ರಕ್ತಸ್ರಾವವಾಗುವುದಿಲ್ಲ. ಆದರೆ ಇದು ರಕ್ತಪರಿಚಲನಾ ವ್ಯವಸ್ಥೆಯ ವೈಫಲ್ಯ, ಆಘಾತ ಮತ್ತು ಸಾವಿಗೆ ಕಾರಣವಾಗಬಹುದು.

ಡೆಂಗ್ಯೂನಲ್ಲಿ ನಾಲ್ಕು ವಿಧ:

ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ನಾಲ್ಕು ಬಾರಿ ಡೆಂಗ್ಯೂಗೆ ತುತ್ತಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಸಾಮಾನ್ಯವಾಗಿ ಡೆಂಗ್ಯೂನಲ್ಲಿ ನಾಲ್ಕು ವಿಧಗಳಿವೆ ಎಂದು ವೈದ್ಯರು ಹೇಳುತ್ತಾರೆ. ಅವುಗಳನ್ನು D1, D2, D3, D4 ಎಂದು ವಿಂಗಡಿಸಲಾಗಿದೆ. ಇದು ವ್ಯಕ್ತಿಯ ಜೀವಿತಾವಧಿಯಲ್ಲಿ ಬರಬಹುದು ಅಥವಾ ಬರದಿರಬಹುದು. ಡೆಂಗ್ಯೂಗಳಲ್ಲಿ ಡಿ 2 ಡೆಂಗ್ಯೂ ಹೆಚ್ಚು ಅಪಾಯಕಾರಿ ಎಂದು ವೈದ್ಯರು ಹೇಳುತ್ತಾರೆ. ಇದರಲ್ಲಿ ಪ್ಲೇಟ್ಲೆಟ್ಗಳು ವೇಗವಾಗಿ ಕಡಿಮೆಯಾಗುತ್ತವೆ. ಹಾಗಾಗಿ ಇದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಆಗಬಹುದು.

ಇದನ್ನೂ ಓದಿ: ಮೈಗ್ರೇನ್, ಕೋಪದ ಸಮಸ್ಯೆ ಇದ್ದರೆ ಪೌಷ್ಟಿಕತಜ್ಞೆ ಪೂಜಾ ಗಣೇಶ್ ಹೇಳಿರುವ ಈ ಸಲಹೆಯನ್ನು ಪಾಲಿಸಿ

ಡೆಂಗ್ಯೂ ತಡೆಯುವುದು ಹೇಗೆ?

ಡೆಂಗ್ಯೂ ಬಗ್ಗೆ ಎಚ್ಚರಿಕೆ ವಹಿಸುವುದು ಅನಿವಾರ್ಯ. ಅದಲ್ಲದೆ ಇದನ್ನು ತಡೆಗಟ್ಟಲು ಸ್ವಚ್ಛತೆಯನ್ನು ಅನುಸರಿಸಬೇಕು. ರಾತ್ರಿ ಮಲಗುವಾಗ ಮತ್ತು ಬೆಳಗಿನ ಸಮಯದಲ್ಲಿ ಸೊಳ್ಳೆಗಳು ಕಚ್ಚದಂತೆ ಕಾಳಜಿ ಮಾಡಬೇಕು. ಮಳೆಗಾಲದಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ನಿಂತ ನೀರಿನಲ್ಲಿ ಡೆಂಗ್ಯೂ ಸೊಳ್ಳೆಗಳು ಬೆಳೆಯುತ್ತವೆ. ಡೆಂಗ್ಯೂ ಕಡಿಮೆಯಾದ ನಂತರವೂ ಸುಸ್ತು, ದಣಿವು ಇದ್ದು, ಸ್ನಾಯು ನೋವು ಹಾಗೂ ಕೀಲು ನೋವು ಪದೇ ಪದೇ ಕಂಡು ಬರುತ್ತಿದ್ದರೆ, ನೀವು ತಕ್ಷಣ ತಪಾಸಣೆಗೆ ಒಳಗಾಗಬೇಕು.

ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ