Health Tips: ಮೈಗ್ರೇನ್, ಕೋಪದ ಸಮಸ್ಯೆ ಇದ್ದರೆ ಪೌಷ್ಟಿಕತಜ್ಞೆ ಪೂಜಾ ಗಣೇಶ್ ಹೇಳಿರುವ ಈ ಸಲಹೆಯನ್ನು ಪಾಲಿಸಿ

ಒತ್ತಡದ ಜೀವನಶೈಲಿಯಿಂದಾಗಿ ನಮ್ಮ ಆರೋಗ್ಯ ಹಾಳಾಗುತ್ತಿದೆ. ಅಲ್ಲದೆ ಇದರಿಂದ ಮೈಗ್ರೇನ್ ನಂತಹ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ರೀತಿಯ ಒತ್ತಡದಲ್ಲಿ ನಮಗೆ ಕೋಪ ಬೇಗ ಬರುತ್ತದೆ. ಹಾಗಾಗಿ ಇದನ್ನು ತಡೆಯಲು ನಾವು ನಮ್ಮ ಆಹಾರ ಕ್ರಮಗಳ ಜೊತೆಗೆ ಜೀವನ ಕ್ರಮವನ್ನು ಸರಿದೂಗಿಸಿಕೊಳ್ಳಬೇಕಾಗುತ್ತದೆ. ನಿಮಗೂ ಪದೇ ಪದೇ ತಲೆನೋವು ಕಂಡು ಬರುತ್ತಿದ್ದು, ಕೋಪ ತಕ್ಷಣ ಬರುತ್ತಿದ್ದರೆ ಇದಕ್ಕೆ ಮಾತ್ರೆ ತಿನ್ನುವ ಬದಲು ಪೌಷ್ಟಿಕತಜ್ಞೆ ಪೂಜಾ ಗಣೇಶ್ ಅವರು ತಿಳಿಸಿರುವ ಈ ಸುಲಭ ಮತ್ತು ಸರಳ ಮಾಹಿತಿಗಳನ್ನು ಪಾಲನೆ ಮಾಡಬಹುದಾಗಿದೆ.

Health Tips: ಮೈಗ್ರೇನ್, ಕೋಪದ ಸಮಸ್ಯೆ ಇದ್ದರೆ ಪೌಷ್ಟಿಕತಜ್ಞೆ ಪೂಜಾ ಗಣೇಶ್ ಹೇಳಿರುವ ಈ ಸಲಹೆಯನ್ನು ಪಾಲಿಸಿ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Sep 05, 2024 | 12:33 PM

ಇತ್ತೀಚಿನ ದಿನಗಳಲ್ಲಿ ನಮ್ಮ ಒತ್ತಡದ ಜೀವನಶೈಲಿಯಿಂದಾಗಿ ನಮ್ಮ ಆರೋಗ್ಯ ಹಾಳಾಗುತ್ತಿದೆ. ಅಲ್ಲದೆ ಇದರಿಂದ ಮೈಗ್ರೇನ್ ನಂತಹ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ರೀತಿಯ ಒತ್ತಡದಲ್ಲಿ ನಮಗೆ ಕೋಪ ಬೇಗ ಬರುತ್ತದೆ. ಹಾಗಾಗಿ ಇದನ್ನು ತಡೆಯಲು ನಾವು ನಮ್ಮ ಆಹಾರ ಕ್ರಮಗಳ ಜೊತೆಗೆ ಜೀವನ ಕ್ರಮವನ್ನು ಸರಿದೂಗಿಸಿಕೊಳ್ಳಬೇಕಾಗುತ್ತದೆ. ನಿಮಗೂ ಪದೇ ಪದೇ ತಲೆನೋವು ಕಂಡು ಬರುತ್ತಿದ್ದು, ಕೋಪ ತಕ್ಷಣ ಬರುತ್ತಿದ್ದರೆ ಇದಕ್ಕೆ ಮಾತ್ರೆ ತಿನ್ನುವ ಬದಲು ಪೌಷ್ಟಿಕತಜ್ಞೆ ಪೂಜಾ ಗಣೇಶ್ ಅವರು ತಿಳಿಸಿರುವ ಈ ಸುಲಭ ಮತ್ತು ಸರಳ ಮಾಹಿತಿಗಳನ್ನು ಪಾಲನೆ ಮಾಡಬಹುದಾಗಿದೆ.

ಪೂಜಾ ಗಣೇಶ್ ಅವರು ಮೈಗ್ರೇನ್, ತಲೆನೋವು, ಕೋಪದ ಸಮಸ್ಯೆಗಳಿಗೆ ನಿಜವಾದ ಕಾರಣಗಳು ಮತ್ತು ಅವುಗಳಿಗೆ ಯಾವ ರೀತಿಯ ಪರಿಹಾರಗಳಿವೆ ಎಂಬುದನ್ನು ತಿಳಿಸಿದ್ದು ಇದನ್ನು ನಿಮ್ಮ ದಿನನಿತ್ಯದ ಜೀವನಶೈಲಿಯಲ್ಲಿ ತಪ್ಪದೆ ಅಳವಡಿಸಿಕೊಳ್ಳಬೇಕಾಗಿದೆ. ಇದರಿಂದ ನಿಮಗೆ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಮೈಗ್ರೇನ್ ಸಮಸ್ಯೆಗೆ ಕಾರಣಗಳೇನು?

  • ಜೆನಿಟಿಕ್
  • ಹಾರ್ಮೋನ್ ಏರಿಳಿತ
  • ಅತಿಯಾದ ಒತ್ತಡ ಅಥವಾ ಚಿಂತೆ
  • ನಿದ್ದೆ ಸರಿಯಾಗಿ ಮಾಡದೆ ಇರುವುದು
  • ವಾತಾವರಣದಲ್ಲಿ ಬದಲಾವಣೆ
  • ಹೊರಗಿನ ತಂಪು ಪಾನೀಯ ಸೇವನೆ ಮಾಡುವುದು
  • ಬಲ್ಪ್, ಲೈಟ್ ಗಳಿಂದ ಟ್ರಿಗರ್ ಆಗುವುದು
  • ಕೂಗಾಟ ಅಥವಾ ಕಿರುಚಾಟ

ಮೈಗ್ರೇನ್  ಸಮಸ್ಯೆಗೆ ಪರಿಹಾರವೇನು?

  • ಆದಷ್ಟು ನಿದ್ದೆಯನ್ನು ಸರಿಯಾಗಿ ಮಾಡಿ
  • 30 ನಿಮಿಷ ವ್ಯಾಯಾಮ ಮಾಡಿ
  • ಪ್ರತಿ ದಿನ ಒಂದು ಚಮಚ ಅಗಸೆ ಬೀಜ ಸೇವಿಸಿ
  • ಸೌತೆಕಾಯಿ, ಹಸಿರು ಸೊಪ್ಪನ್ನು ಪ್ರತಿನಿತ್ಯ ಒಂದು ಕಪ್ ನಷ್ಟು ಸೇವಿಸಿ
  • ವಾರದಲ್ಲಿ ಮೂರು ಬಾರಿ ಬಾಳೆಹಣ್ಣು ಸೇವಿಸಿ (ಮಧುಮೇಹಿಗಳು ಇದನ್ನು ತ್ಯಜಿಸಿ)
  • ಅತಿಯಾದ ಕಾಫಿ, ಟೀ, ಹೊರ ಪ್ಯಾಕೆಟ್ ಆಹಾರವನ್ನು ತ್ಯಜಿಸಿ
  • ಚೀಸ್ ಸೇವಿಸಬೇಡಿ
  • ಬೆಳಗ್ಗಿನ ಹತ್ತು ನಿಮಿಷ ಸೂರ್ಯನ ಬಿಸಿಲನ್ನು ಪಡೆಯಿರಿ
  • ಸಂಜೆ ಶುಂಠಿ ನೀರನ್ನು ಸೇವಿಸಿ
  • ಹತ್ತು ನಿಮಿಷ ಧ್ಯಾನ ಮಾಡಿ
  • ಆಹಾರದಲ್ಲಿ ಅತಿಯಾದ ಮಸಾಲೆ ಪದಾರ್ಥಗಳನ್ನು ಸ್ವಲ್ಪ ದಿನಗಳ ಮಟ್ಟಿಗೆ ಕಡಿಮೆ ಮಾಡಿ

ಇದನ್ನೂ ಓದಿ: ಮೆದುಳಿನ ಕ್ಯಾನ್ಸರ್ ಗೆ ಚಿಕಿತ್ಸೆ ಈಗ ಸುಲಭ; ರಕ್ತ ಪರೀಕ್ಷೆ ಮೂಲಕ ಗಂಟೆಯೊಳಗೆ ಪತ್ತೆ

ಮೈಗ್ರೇನ್  ಸಮಸ್ಯೆಗೆ ಸರಳ ಮನೆಮದ್ದುಗಳು;

  • ಕೋಲ್ಡ್ ಕಂಪ್ರೆಸ್: ಕೋಲ್ಡ್ ಪ್ಯಾಕ್ ಅಥವಾ ಐಸ್ ತುಂಬಿದ ಬಟ್ಟೆಯನ್ನು ಹಣೆ ಮೇಲೆ ಇಡುವುದರಿಂದ ನೋವು ಕಡಿಮೆಯಾಗುತ್ತದೆ.
  • ಪುದೀನಾ ಎಣ್ಣೆ:ಪುದೀನಾ ಎಣ್ಣೆಯನ್ನು ಹಚ್ಚುವುದರಿಂದ ಇದರಲ್ಲಿರುವ ಒಳ್ಳೆಯ ಗುಣಗಳು ದೇಹ ತಂಪಾಗಿಸಿ ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತದೆ.
  • ಶುಂಠಿ ಚಹಾ: ಮೈಗ್ರೇನ್ ಸಮಯದಲ್ಲಿ ವಾಕರಿಕೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಶುಂಠಿ ಸಹಾಯ ಮಾಡುತ್ತದೆ.
  • ಲ್ಯಾವೆಂಡರ್ ಎಸೆನ್ಷಿಯಲ್ ಆಯಿಲ್: ಲ್ಯಾವೆಂಡರ್ ಎಣ್ಣೆಯ ಸುವಾಸನೆಯನ್ನು ತೆಗೆದುಕೊಳ್ಳುವುದರಿಂದ ಇದು ಮೈಗ್ರೇನ್ ದಾಳಿಯ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಸಾಕಷ್ಟು ನೀರು ಕುಡಿಯಿರಿ: ನಿರ್ಜಲೀಕರಣವು ಸಾಮಾನ್ಯ ಪ್ರಚೋದಕವಾಗಿದೆ, ಆದ್ದರಿಂದ ದಿನವಿಡೀ ಸಾಕಷ್ಟು ನೀರು ಕುಡಿಯಿರಿ.

ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ