2 ಮಕ್ಕಳ ತಾಯಿಯಾದರೂ ಅನುಷ್ಕಾ ಹೇಗಿದ್ದಾರೆ ನೋಡಿ; ಕೊನೆಗೂ ರಿವೀಲ್‌ ಆಯ್ತು ಬ್ಯೂಟಿ ಸೀಕ್ರೆಟ್​​

ಸದ್ಯ ಅನುಷ್ಕಾ ಶರ್ಮಾ ತಮ್ಮ ಕುಟುಂಬದ ಸಮೇತ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚಿಗಷ್ಟೇ ಸ್ಲರ್ಪ್‌ ಫರ್ಮಾದ (Slurrp Farm) ಕಾರ್ಯಕ್ರಮವೊಂದರ ಸಲುವಾಗಿ ಅನುಷ್ಕಾ ಮುಂಬೈಗೆ ಆಗಮಿಸಿದ್ದರು. ಮಗುವಾದ ಕೇವಲ ಆರು ತಿಂಗಳಲ್ಲಿ ಅನುಷ್ಕಾ ಫಿಟ್​​ ಆ್ಯಂಡ್​​ ಫೈನ್​​ ಆಗಿ ಕಾಣಿಸಿಕೊಂಡಿದ್ದು, ಇವರ ಬ್ಯೂಟಿ​​​ ಕಂಡು ಅಭಿಮಾನಿಗಳು ಶಾಕ್​ ಆಗಿದ್ದಾರೆ.

2 ಮಕ್ಕಳ ತಾಯಿಯಾದರೂ ಅನುಷ್ಕಾ ಹೇಗಿದ್ದಾರೆ ನೋಡಿ; ಕೊನೆಗೂ ರಿವೀಲ್‌ ಆಯ್ತು ಬ್ಯೂಟಿ ಸೀಕ್ರೆಟ್​​
Anushka Sharma
Follow us
|

Updated on:Sep 06, 2024 | 11:35 AM

ಗರ್ಭಧಾರಣೆ, ಹೆರಿಗೆ ಮತ್ತು ನವಜಾತ ಶಿಶುವಿನ ಆರೈಕೆಯಿಂದಾಗಿ ಮಹಿಳೆಯರು ತಮ್ಮ ಆರೋಗ್ಯ ಹಾಗೂ ಸೌಂದರ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಮಗು ಜನಿಸಿದ ನಂತರ ತನ್ನ ಸೌಂದರ್ಯ ಹಾಳಾಯಿತು ಎನ್ನುವವರು, ಇದರಿಂದಾಗಿ ಗರ್ಭಧರಿಸಲು ಹಿಂದೇಟು ಹಾಕುವವರು ಹಲವರಿದ್ದಾರೆ. ಕೆಲವರು ಮಗುವಾಗುವ ಮೊದಲಿದ್ದ ಸೌಂದರ್ಯ ಮರಳುವುದೇ ಇಲ್ಲ ಎಂದು ಬೇಸರಿಸುವುದನ್ನು ನೀವು ಕೇಳಿರಬಹುದು. ಆದರೆ  ಅನುಷ್ಕಾ ಶರ್ಮಾ ಮಗುವಾದ ಕೇವಲ ಆರು ತಿಂಗಳಲ್ಲಿ ಫಿಟ್​​ ಆ್ಯಂಡ್​​ ಫೈನ್​​ ಆಗಿ ಕಾಣಿಸಿಕೊಂಡಿದ್ದು, ಇವರ ಬ್ಯೂಟಿ​​​ ಕಂಡು ನೆಟ್ಟಿಗರು ಶಾಕ್​ ಆಗಿದ್ದಾರೆ.

ಸದ್ಯ ವಿರಾಟ್ ಕೊಹ್ಲಿ ತಮ್ಮ ಕುಟುಂಬದ ಸಮೇತ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚಿಗಷ್ಟೇ ಸ್ಲರ್ಪ್‌ ಫರ್ಮಾದ (Slurrp Farm) ಕಾರ್ಯಕ್ರಮವೊಂದರ ಸಲುವಾಗಿ ಅನುಷ್ಕಾ ಶರ್ಮಾ ಮುಂಬೈಗೆ ಆಗಮಿಸಿದ್ದರು. ಈ ವೇಳೆ ಸಂದರ್ಶನದಲ್ಲಿ ಮಾತನಾಡಿದ ಅನುಷ್ಕಾ ತಮ್ಮ ಲೈಫ್‌ಸ್ಟೈಲ್ ಮಕ್ಕಳ ಪಾಲನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನಾನು ನನ್ನ ಮಗಳು ವಾಮಿಕಾ ಜೊತೆ ಸಂಜೆ 5 .30ಕ್ಕೆ ಊಟ ಮಾಡಿ ಮುಗಿಸುತ್ತೇನೆ. ಮಗಳಿಗೆ ಸಂಜೆ ಬೇಗನೇ ಹಸಿವಾಗುವುದರಿಂದ ಅವಳ ಜೊತೆಯಲ್ಲೇ ನಾನು ಊಟ ಮಾಡಲು ಪ್ರಾರಂಭಿಸಿದೆ. ಇದರಿಂದ ನನಗೆ ಸಾಕಷ್ಟು ಪ್ರಯೋಜನ ಸಿಕ್ಕಿದೆ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಒಬ್ಬ ವ್ಯಕ್ತಿಗೆ ಎಷ್ಟು ಬಾರಿ ಡೆಂಗ್ಯೂ ಜ್ವರ ಬರಬಹುದು ಎಂದು ತಿಳಿದಿದೆಯೇ!

ಸಂಜೆ ಬೇಗ ಊಟ ಮಾಡುವುದರಿಂದಾಗುವ ಪ್ರಯೋಜನಗಳು:

ಸಾಧ್ಯವಾದರೆ ಪ್ರತಿದಿನ ರಾತ್ರಿಯ ಊಟದ ಸಮಯವನ್ನು ಸಂಜೆ 7 ಗಂಟೆಯ ಒಳಗೆ ಇಟ್ಟುಕೊಂಡರೆ, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ಏಕೆಂದರೆ ಊಟ ಮಾಡಿದ ನಂತರದಲ್ಲಿ ನಮ್ಮ ದೇಹಕ್ಕೆ ಆಹಾರವನ್ನು ಜೀರ್ಣ ಮಾಡಲು ಸಮಯ ಬೇಕಾಗುತ್ತದೆ. ಈಗಾಗಿ ಬೇಗ ಊಟ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಕ್ಯಾಲೋರಿ ಬರ್ನ್‌ ಮಾಡಲು ಸಾಕಷ್ಟು ಸಮಯ ಸಿಗುತ್ತದೆ. ಇದಲ್ಲದೇ ಈ ಅಭ್ಯಾಸ ಹೃದ್ರೋಗ, ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್‌ಗಳಂತಹ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧನೆ ಸೂಚಿಸುತ್ತದೆ.

ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:33 am, Fri, 6 September 24

‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
Duleep Trophy 2024: 9 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್
Duleep Trophy 2024: 9 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್
'ಕಲ್ಕಿ' ಅವತಾರದಲ್ಲಿ ಗಣಪತಿ, ತಮಿಳುನಾಡಿನಲ್ಲಿ ಯಾಸ್ಕಿನ್ ಲೋಕ ಸೃಷ್ಟಿ
'ಕಲ್ಕಿ' ಅವತಾರದಲ್ಲಿ ಗಣಪತಿ, ತಮಿಳುನಾಡಿನಲ್ಲಿ ಯಾಸ್ಕಿನ್ ಲೋಕ ಸೃಷ್ಟಿ