Nita Ambani : ಗುಜರಾತಿನ ಪಟೋಲ ಸೀರೆಗೆ ಆಕರ್ಷಕ ಬ್ಲೌಸ್ ವಿನ್ಯಾಸ, ನೀತಾ ಅಂಬಾನಿ ಫ್ಯಾಷನ್ ಸೆನ್ಸ್ ಗೆ ಫಿದಾ ನೆಟ್ಟಿಗರು

ಮುಂಬೈಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪತಿ ಮುಖೇಶ್ ಅಂಬಾನಿ ಜೊತೆಗೆ ನೀತಾ ಅಂಬಾನಿ ಭಾಗವಹಿಸಿದ್ದರು. ಈ ವೇಳೆಯಲ್ಲಿ ಗುಜರಾತಿನ ಪ್ರಸಿದ್ಧ ಪಟೋಲ ಸೀರೆ ಧರಿಸಿದ್ದ ನೀತಾ ಅಂಬಾನಿಯರ ಬ್ಲೌಸ್ ವಿನ್ಯಾಸದಿಂದಲೇ ಮತ್ತೆ ಸುದ್ದಿಯಾಗಿದ್ದಾರೆ. ಗುಜರಾತಿನ ಸಾಂಪ್ರದಾಯಿಕ ಶೈಲಿಯಲ್ಲಿ ಕೆಂಪು ಬಣ್ಣ ಪಟೋಲ ಸೀರೆಯನ್ನು ಧರಿಸಿದ್ದು ಬ್ಲೌಸ್ ಹಿಂಭಾಗದಲ್ಲಿ 'ರಾಧಾ-ಕೃಷ್ಣ' ವಿನ್ಯಾಸವು ಆಕರ್ಷಕವಾಗಿದ್ದು ಎಲ್ಲರ ಗಮನ ಸೆಳೆದಿದೆ.

Nita Ambani : ಗುಜರಾತಿನ ಪಟೋಲ ಸೀರೆಗೆ ಆಕರ್ಷಕ ಬ್ಲೌಸ್ ವಿನ್ಯಾಸ, ನೀತಾ ಅಂಬಾನಿ ಫ್ಯಾಷನ್ ಸೆನ್ಸ್ ಗೆ ಫಿದಾ ನೆಟ್ಟಿಗರು
ನೀತಾ ಅಂಬಾನಿ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 06, 2024 | 5:15 PM

ನೀತಾ ಅಂಬಾನಿ ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿದ್ದು, ಆಗಾಗ ತಮ್ಮ ಬೆರಗುಗೊಳಿಸುವ ಫ್ಯಾಷನ್ ಸೆನ್ಸ್‌ನ್ನು ಹೊಂದಿದ್ದಾರೆ. ತನ್ನ ಫ್ಯಾಶನ್ ಸೆನ್ಸ್‌ನಿಂದ ಎಲ್ಲರ ಗಮನ ಸೆಳೆಯುವ ನೀತಾ ಅಂಬಾನಿ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ನಂತರ ನೀತಾ ಅಂಬಾನಿ ಸೀರೆಯೂ ಮತ್ತೊಮ್ಮೆ ಎಲ್ಲರ ಮನಸ್ಸನ್ನು ಕದ್ದಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸಾಂಪ್ರಾದಾಯಿಕ ಶೈಲಿಯಲ್ಲಿ ಸೀರೆಯುಟ್ಟಿದ್ದ ನೀತಾ ಅಂಬಾನಿ ಎಲ್ಲರ ಗಮನ ಸೆಳೆದಿದ್ದಾರೆ.

ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಕುಟುಂಬ ಸಮೇತ ಶ್ರೀಕೃಷ್ಣನನ್ನು ಆಧರಿಸಿದ ವಿಶ್ವದ ಮೊದಲ ಭವ್ಯ ಸಂಗೀತ ನಾಟಕ ‘ರಾಜಾಧಿರಾಜ್: ಲವ್ ಲೈಫ್ ಲೀಲಾ’ ಅಂತಿಮ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಮುಂಬೈನ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನ ಹಲವು ತಾರೆಯರು ಭಾಗವಹಿಸಿದ್ದರು. ಈ ವೇಳೆಯಲ್ಲಿ ನೀತಾ ಅಂಬಾನಿಯೂ ಪಟೋಲ ಸೀರೆಯಲ್ಲಿ ಮಿಂಚಿದ್ದು ಎಲ್ಲರ ಗಮನ ಸೆಳೆದಿದ್ದಾರೆ.

ಪಟೋಲ ಸೀರೆಯಲ್ಲಿ ಮಿಂಚಿದ್ದ ನೀತಾ ಅಂಬಾನಿ

ಮುಕೇಶ್ ಅಂಬಾನಿ ಜೊತೆಗೆ ಕಾರ್ಯಕ್ರಮಕ್ಕೆ ಬಂದಿದ್ದ ನೀತಾ ಅಂಬಾನಿ ಅವರು ಕೆಂಪು ಬಣ್ಣದ ಗುಜರಾತಿ ಶೈಲಿಯಲ್ಲಿ ಪಟೋಲ ಸೀರೆಯನ್ನು ಧರಿಸಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಸೀರೆಯ ಬಾರ್ಡರ್ ಹಾಗೂ ಸೆರಗಿನಲ್ಲಿ ಸಾಂಪ್ರದಾಯಿಕ ಪಟೋಲಾ ವಿನ್ಯಾಸವಿದ್ದು ಉಳಿದಂತೆ ಈ ಸೀರೆಯೂ ಸಿಂಪಲ್ ಆಗಿದೆ. ಇವರು ಧರಿಸಿದ್ದ ಬ್ಲೌಸ್ ಹಿಂಭಾಗದಲ್ಲಿ ‘ರಾಧಾ-ಕೃಷ್ಣ’ ಪ್ರಿಂಟೆಡ್ ವಿನ್ಯಾಸವು ಆಕರ್ಷಕವಾಗಿತ್ತು.

ಇದನ್ನೂ ಓದಿ: ಯೌವನದಲ್ಲಿ ಮಾಡುವ ಈ ತಪ್ಪುಗಳಿಂದಲೇ ವೃದ್ಧಾಪ್ಯದಲ್ಲಿ ಸಮಸ್ಯೆಗಳು ಬರುವುದು ಖಚಿತ

ಸಿಂಪಲ್ ಆಗಿ ಮೇಕಪ್ ಮಾಡಿಕೊಂಡಿದ್ದ ನೀತಾ ಅಂಬಾನಿ ಸೀರೆಗೆ ಮ್ಯಾಚ್ ಆಗುವ ಬಳೆ, ಉಂಗುರ ಮತ್ತು ಸ್ಟಡ್ ನಿಂದ ಕೂಡಿದ ಕಿವಿಯೋಲೆಯನ್ನು ಧರಿಸಿದ್ದರು. ಸಾಂಪ್ರಾದಾಯಿಕ ಸೀರೆಗೆ ಹೊಂದುವಂತೆ ಬನ್ ಹೇರ್ ಸ್ಟೈಲ್ ಮಾಡಿ ಅದಕ್ಕೆ ಬಿಳಿ ಬಣ್ಣದ ಹೂವುಗಳಿರುವ ಕ್ಲಿಪ್ ಗಳನ್ನು ಹಾಕಿದ್ದು, ಮತ್ತಷ್ಟು ಆಕರ್ಷಕ ನೋಟವನ್ನು ನೀಡಿತ್ತು. ಗುಜರಾತ್‌ನಲ್ಲಿ ತಯಾರಿಸಲಾಗುವ ಈ ಪಟೋಲಾ ಸೀರೆಯೂ ಲಕ್ಷಗಳಲ್ಲಿ ಮಾರಾಟವಾಗುತ್ತದೆ. ಯಶಸ್ವಿ ಉದ್ಯಮಿ ನೀತಾ ಅಂಬಾನಿಯವರು ಧರಿಸಿದ್ದ ಈ ಸೀರೆಯ ಬೆಲೆ ಒಂದು ಲಕ್ಷ ರೂಪಾಯಿಗೂ ಅಧಿಕವಿರಬಹುದು ಎನ್ನಲಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ