Chanakya Niti : ಯೌವನದಲ್ಲಿ ಮಾಡುವ ಈ ತಪ್ಪುಗಳಿಂದಲೇ ವೃದ್ಧಾಪ್ಯದಲ್ಲಿ ಸಮಸ್ಯೆಗಳು ಬರುವುದು ಖಚಿತ

ಜೀವನವು ಸಂತೋಷಕರವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವರ ಬದುಕಿನಲ್ಲಿ ಖುಷಿಗಿಂತ ಕಷ್ಟವೇ ತುಂಬಿರುತ್ತದೆ. ಇದಕ್ಕೆ ಕಾರಣ ದಲ್ಲಿ ಯೌವನದಲ್ಲಿ ಮಾಡುವ ಈ ತಪ್ಪುಗಳಂತೆ. ಚಾಣಕ್ಯನು ತನ್ನ ನೀತಿಯಲ್ಲಿ ಸಣ್ಣ ವಯಸ್ಸಿನಲ್ಲಿ ಮಾಡುವ ಕೆಲವು ತಪ್ಪುಗಳಿಂದ ಜೀವನ ಪರ್ಯಂತ ನರಳಬೇಕಾಗುತ್ತದೆ. ಹಾಗಾದ್ರೆ ಯಾವ ತಪ್ಪುಗಳನ್ನು ಮಾಡದಂತೆ ಜೀವನದಲ್ಲಿ ಎಚ್ಚರವಹಿಸಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Chanakya Niti : ಯೌವನದಲ್ಲಿ ಮಾಡುವ ಈ ತಪ್ಪುಗಳಿಂದಲೇ ವೃದ್ಧಾಪ್ಯದಲ್ಲಿ ಸಮಸ್ಯೆಗಳು ಬರುವುದು ಖಚಿತ
ಚಾಣಕ್ಯನ ನೀತಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 06, 2024 | 4:13 PM

ವಯಸ್ಸಿರುವಾಗ ಪುರುಷರು ಹಾಗೂ ಮಹಿಳೆಯರು ಈ ಕೆಲವು ತಪ್ಪುಗಳನ್ನು ಮಾಡುವುದು ಸಹಜ. ಆದರೆ ಕೆಲವು ಗೊತ್ತಿದ್ದು ಎಡವಿ ಬೀಳುತ್ತಾರೆ. ಆದರೆ ಯೌವನದಲ್ಲಿ ಮಾಡುವ ಇಂತಹ ಕೆಲವು ತಪ್ಪುಗಳು ನಿಮ್ಮ ಆಯುಷ್ಯವನ್ನು ಕುಗ್ಗಿಸುತ್ತದೆ. ವಯಸ್ಸು ಇಪ್ಪತ್ತು ತುಂಬಿದ ನಂತರದಲ್ಲಿ ನಿಮ್ಮಿಂದ ಇಂತಹ ತಪ್ಪುಗಳು ಆಗದೇ ಇರಲಿ ಎಂದು ಎಚ್ಚರಿಸಿದ್ದಾರೆ. ಒಂದು ವೇಳೆ ಈ ತಪ್ಪುಗಳಿಂದ ವೃದ್ಧಾಪ್ಯದಲ್ಲಿ ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎನ್ನುವುದು ಚಾಣಕ್ಯನ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

* ಸಮಯ ವ್ಯರ್ಥ: ಸಮಯವು ಬಹಳ ಮೌಲ್ಯಯುತವಾಗಿದ್ದು, ಒಮ್ಮೆ ಕಳೆದುಹೋದರೆ ಮತ್ತೆ ಆ ಸಮಯವು ಮರಳಿ ಬರುವುದಿಲ್ಲ. ಹೀಗಾಗಿ ವಯಸ್ಸಿರುವಾಗಲೇ ಎಲ್ಲಾ ಕೆಲಸಗಳಿಗೆ ಮಾಡಿಬಿಡಬೇಕು. ಸಮಯವನ್ನು ವ್ಯರ್ಥ ಮಾಡಿದರೆ ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಸಮಯವನ್ನು ಪಾಲನೆ ಮಾಡಿ ಯಶಸ್ಸಿನ ಸಾಗುವುದು ತಿಳಿದಿರಬೇಕು.

* ಸೋಮಾರಿತನ : ಪ್ರತಿಯೊಬ್ಬ ವ್ಯಕ್ತಿಯೂ ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಬೇಕು. ಪ್ರತಿಯೊಂದು ಕಾರ್ಯಕ್ಕೂ ಸಿದ್ಧರಾಗಿರಬೇಕು. ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿದರೆ ಯಶಸ್ಸು ಕಾಣಬಹುದು. ನಾಳೆ ಮಾಡಿದರೆ ಆಯಿತೆಂದರೆ ಯಶಸ್ಸು ಎನ್ನುವುದು ದೂರ ಮಾತಾಗುತ್ತದೆ.

* ದುಂದುವೆಚ್ಚ: ಕೆಲವರು ಕೈಯಲ್ಲಿ ದುಡ್ಡಿದೆ ಎಂದು ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಾರೆ. ಆದರೆ ಹಣವನ್ನು ಎಷ್ಟು ಬುದ್ಧಿವಂತಿಕೆಯಿಂದ ಖರ್ಚು ಮಾಡುತ್ತೇವೆ ಅಷ್ಟು ಒಳ್ಳೆಯದು. ಹೀಗಾಗಿ ಯೌವನದಲ್ಲಿ ಹಣವು ಎಷ್ಟು ಮುಖ್ಯ ಎನ್ನುವ ಅರಿವಿರಬೇಕು. ಹಣವನ್ನು ಸ್ವಲ್ಪ ಮಟ್ಟಿಗೆ ಉಳಿತಾಯ ಮಾಡದೇ ಹೋದಲ್ಲಿ ವೃದ್ಧಾಪ್ಯದಲ್ಲಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ.

ಇದನ್ನೂ ಓದಿ: ಯುವಕರೇ ಸ್ಟೈಲಿಶ್ ಆಗಿ ಕಾಣಲು ಬಟ್ಟೆಗಳ ಆಯ್ಕೆ ಹೀಗಿರಲಿ

* ಕೋಪ: ಮೈಯಲ್ಲಿ ಬಿಸಿರಕ್ತ ಹರಿಯುತ್ತಿರುವ ವಯಸ್ಸಿನಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಾರೆ. ಈ ಸಿಟ್ಟು ಎನ್ನುವುದು ಮನುಷ್ಯನ ಆಲೋಚನೆ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಸಿದುಕೊಳ್ಳುತ್ತದೆ. ಈ ಯೌವನದಲ್ಲಿ ಕೋಪದಲ್ಲಿ ಯಾವುದಕ್ಕೂ ಪ್ರತಿಕ್ರಿಯಿಸಿದೇ ಇರುವುದು ಒಳ್ಳೆಯದು. ಇದರಿಂದಾಗುವ ಮುಂಬರುವ ದಿನಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ತಡೆಯಬಹುದಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು; ಶೋಯೆಬ್ ಅಖ್ತರ್
ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು; ಶೋಯೆಬ್ ಅಖ್ತರ್
ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದು ಹೇಳಿರುವ ಡಿಕೆ ಶಿವಕುಮಾರ್
ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದು ಹೇಳಿರುವ ಡಿಕೆ ಶಿವಕುಮಾರ್
ಸಿದ್ದರಾಮಯ್ಯ, ಮೋದಿ ಹಣ ಹಾಕ್ತಾರೆಂದು ಅಂಚೆ ಕಚೇರಿಯಲ್ಲಿ ಜನವೋ ಜನ..!
ಸಿದ್ದರಾಮಯ್ಯ, ಮೋದಿ ಹಣ ಹಾಕ್ತಾರೆಂದು ಅಂಚೆ ಕಚೇರಿಯಲ್ಲಿ ಜನವೋ ಜನ..!