Health Tips: ಬೆಳಗಿನ ವಾಕಿಂಗ್ ನಂತರ ಯಾವ ರೀತಿಯ ಆಹಾರ ಸೇವನೆ ಮಾಡಬೇಕು?

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 03, 2024 | 2:39 PM

ಒಂದು ಉತ್ತಮವಾದ ಆಹಾರ ಪದ್ಧತಿ ಅಭ್ಯಾಸ ಮಾಡಿಕೊಂಡರೆ ನಿಮಗಿಂತ ಸಿರಿವಂತರಿಲ್ಲ. ಅದರಂತೆ ಕೆಲವರು ಬೆಳಿಗ್ಗೆ ಸಣ್ಣ ನಡಿಗೆ, ಓಟ ಅಥವಾ ವ್ಯಾಯಾಮದಂತಹ ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಂಡಿರುತ್ತಾರೆ ಅಂತವರು ಬೆಳಿಗ್ಗೆ ಯಾವ ರೀತಿಯ ಉಪಹಾರವನ್ನು ಸೇವನೆ ಮಾಡಬೇಕು. ಕ್ಯಾಲರಿಗಳ ಸೇವನೆಯನ್ನು ಗಮನದಲ್ಲಿಟ್ಟುಕೊಂಡು ಅತ್ಯುತ್ತಮವಾದ ಆಹಾರ ಪದ್ಧತಿಯನ್ನು ಅಭ್ಯಾಸ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Health Tips: ಬೆಳಗಿನ ವಾಕಿಂಗ್ ನಂತರ ಯಾವ ರೀತಿಯ ಆಹಾರ ಸೇವನೆ ಮಾಡಬೇಕು?
Follow us on

ಪ್ರತಿದಿನ ಬೆಳಗ್ಗೆ ಆರೋಗ್ಯಕ್ಕೆ ಹಿತಕರವಾದ ಆಹಾರಗಳನ್ನು ಸೇವನೆ ಮಾಡುವುದರಿಂದ ಒಳ್ಳೆಯ ಜೀವನ ನಿಮ್ಮದಾಗುತ್ತದೆ. ಒಂದು ಉತ್ತಮವಾದ ಆಹಾರ ಪದ್ಧತಿ ಅಭ್ಯಾಸ ಮಾಡಿಕೊಂಡರೆ ನಿಮಗಿಂತ ಸಿರಿವಂತರಿಲ್ಲ. ಅದರಂತೆ ಕೆಲವರು ಬೆಳಿಗ್ಗೆ ಸಣ್ಣ ನಡಿಗೆ, ಓಟ ಅಥವಾ ವ್ಯಾಯಾಮದಂತಹ ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಂಡಿರುತ್ತಾರೆ ಅಂತವರು ಬೆಳಿಗ್ಗೆ ಯಾವ ರೀತಿಯ ಉಪಹಾರವನ್ನು ಸೇವನೆ ಮಾಡಬೇಕು. ಕ್ಯಾಲರಿಗಳ ಸೇವನೆಯನ್ನು ಗಮನದಲ್ಲಿಟ್ಟುಕೊಂಡು ಅತ್ಯುತ್ತಮವಾದ ಆಹಾರ ಪದ್ಧತಿಯನ್ನು ಅಭ್ಯಾಸ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

*ಬೆಳಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ರೀತಿ ಮಾಡುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ದೂರವಾಗುತ್ತವೆ. ನಿಮ್ಮ ದೇಹ ಆರೋಗ್ಯದಿಂದ ಕೂಡಿರುತ್ತದೆ. ಬೆಚ್ಚಗಿನ ನೀರು ಕುಡಿಯುವುದರಿಂದ ದೇಹದ ಜೀರ್ಣಾಂಗ ವ್ಯವಸ್ಥೆ ಸ್ವಚ್ಛವಾಗುತ್ತದೆ. ದೇಹದ ತೂಕ ಇದರಿಂದ ಸಾಕಷ್ಟು ಕಡಿಮೆಯಾಗುತ್ತದೆ. ಹಾಗಾಗಿ ಈ ಅಭ್ಯಾಸ ರೂಢಿಸಿಕೊಳ್ಳುವುದು ಒಳ್ಳೆಯದು.

*ಬೆಳಗಿನ ಉಪಹಾರದ ಸಮಯದಲ್ಲಿ ಹಣ್ಣುಗಳನ್ನು ಸೇವನೆ ಮಾಡಬೇಕು ಎಂದು ಆಹಾರ ತಜ್ಞರು ಹೇಳುತ್ತಾರೆ. ಹಣ್ಣಿನ ಬದಲು ಹಣ್ಣಿನ ರಸಗಳನ್ನು ಸೇವನೆ ಮಾಡಬಹುದು. ಆದರೆ ಪ್ಯಾಕ್ ಮಾಡಿರುವ ಜ್ಯೂಸ್ ಗಳನ್ನು ಸೇವನೆ ಮಾಡಬೇಡಿ.

*ವ್ಯಾಯಾಮ ಮಾಡಿ ಬಂದು ಬಾಯಿಗೆ ರುಚಿಸುವ ಆಹಾರ ತಿನ್ನುವುದಲ್ಲ. ಬದಲಾಗಿ ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು ಅಂದರೆ ಖರ್ಜೂರ, ಮೊಸರು, ಹಾಲು ಅಥವಾ ಮೊಟ್ಟೆಗಳನ್ನು ಸೇವಿಸಬಹುದು.

*ನಿಮಗಿಷ್ಟವಾಗುವ ತರಕಾರಿಗಳನ್ನು ಸೇರಿಸಿ ಸಲಾಡ್ ಮಾದರಿಯಲ್ಲಿ ಸೇವಿಸಬಹುದು. ಇದು ಬೆಳಗ್ಗಿನ ಉಪಹಾರಕ್ಕೆ ತುಂಬಾ ಒಳ್ಳೆಯದು. ಹಣ್ಣು ಮತ್ತು ತರಕಾರಿಗಳನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ನೈಸರ್ಗಿಕವಾಗಿ ಬೇಕಾದ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಸಿಗುತ್ತವೆ.

ಇದನ್ನೂ ಓದಿ: ಬೆವರುವುದು ಆರೋಗ್ಯಕ್ಕೆ ಒಳ್ಳೆಯದು , ಯಾಕೆ ಗೊತ್ತಾ?

*ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ನೀವು ರಾಗಿ, ಓಟ್ಸ್, ಕ್ವಿನೋವಾ ಇತ್ಯಾದಿಗಳನ್ನು ಸೇವನೆ ಮಾಡಬೇಕು, ಮೊಳಕೆ ಕಟ್ಟಿದ ಕಾಳುಗಳು ಕೂಡ ಆರೋಗ್ಯಕ್ಕೆ ಒಳ್ಳೆಯದು.

*ಬೆಳಗಿನ ಸಮಯದಲ್ಲಿ ನೀವು ಪ್ರೊಟೀನ್ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಹೆಚ್ಚು ಶಕ್ತಿ ಸಿಗುತ್ತದೆ ಜೊತೆಗೆ ದೇಹದ ತೂಕವೂ ಕಡಿಮೆಯಾಗುತ್ತದೆ.

*ನೀವು ಬೆಳಿಗ್ಗಿನ ನಡಿಗೆ, ಓಟ ಅಥವಾ ವ್ಯಾಯಾಮ ಮುಗಿಸಿದ ಬಳಿಕ ಎಳನೀರನ್ನು ಕೂಡ ಕುಡಿಯಬಹುದು. ಇದು ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು.

*ಒಮೆಗಾ-3 ಹೊಂದಿರುವ ಆಹಾರಗಳನ್ನು ಸೇವನೆ ಮಾಡಿ ಅಂದರೆ ಸಾಲ್ಮನ್ ಮೀನು, ಆಲಿವ್ ಎಣ್ಣೆ, ಅಗಸೆಬೀಜ, ವಾಲ್ನಟ್ಸ್ ಮತ್ತು ಆವಕಾಡೊಗಳು ಒಮೆಗಾ -3 ನ ಮೂಲಗಳಾಗಿವೆ. ಸಾಧ್ಯವಾದಲ್ಲಿ ಇದನ್ನು ನಿಮ್ಮ ಉಪಹಾರದಲ್ಲಿ ಸೇರಿಸಿಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: