Health Tips: ಮೊಟ್ಟೆಗೂ, ಹೃದಯದ ಆರೋಗ್ಯಕ್ಕೂ ಇದೆ ಸಂಬಂಧ; ಹೊಸ ಅಧ್ಯಯನದಲ್ಲಿ ಬಯಲು

|

Updated on: Feb 08, 2023 | 11:20 AM

ಮೊಟ್ಟೆಯಲ್ಲಿರುವಂತಹ ಪ್ರೋಟೀನ್‌ಗಳು ನೈಸರ್ಗಿಕವಾಗಿ ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿವೆ. ಒಂದು ಮೊಟ್ಟೆಯು ಸರಿಸುಮಾರು 6 ಗ್ರಾಂ ಪ್ರೋಟೀನ್ ನೀಡುತ್ತದೆ.

Health Tips: ಮೊಟ್ಟೆಗೂ, ಹೃದಯದ ಆರೋಗ್ಯಕ್ಕೂ ಇದೆ ಸಂಬಂಧ; ಹೊಸ ಅಧ್ಯಯನದಲ್ಲಿ ಬಯಲು
ಮೊಟ್ಟೆ
Follow us on

ಮೊಟ್ಟೆಯ (Eggs) ಸೇವನೆಯಿಂದ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಪ್ರಯೋಜನಗಳಿವೆ ಎಂಬುದು ಹಲವರಿಗೆ ಗೊತ್ತಿರುವ ವಿಚಾರ. ಈ ಮೊಟ್ಟೆಗೂ, ಹೃದಯದ ಆರೋಗ್ಯಕ್ಕೂ (Heart Health) ಸಂಬಂಧ ಇದೆಯೇ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ನ್ಯೂಟ್ರಿಯೆಂಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯು ಹೆಚ್ಚು ಮೊಟ್ಟೆಗಳನ್ನು ತಿನ್ನುವುದು ನಿಮ್ಮ ಹೃದಯಕ್ಕೆ ಒಳ್ಳೆಯದು ಎಂದು ಕಂಡುಹಿಡಿದಿದೆ. ಬೋಸ್ಟನ್ ವಿಶ್ವವಿದ್ಯಾನಿಲಯದ ಸಂಶೋಧಕರು 2,300ಕ್ಕೂ ಹೆಚ್ಚು ವಯಸ್ಕರ ಡೇಟಾವನ್ನು ಅಧ್ಯಯನ ಮಾಡಿದ್ದಾರೆ.

ವಾರಕ್ಕೆ 5 ಅಥವಾ ಅದಕ್ಕಿಂತ ಹೆಚ್ಚಿನ ಮೊಟ್ಟೆಗಳನ್ನು ತಿನ್ನುವುದರಿಂದ ಕಡಿಮೆ ರಕ್ತದೊತ್ತಡ, ರಕ್ತದಲ್ಲಿ ಕಡಿಮೆ ಸಕ್ಕರೆ ಪ್ರಮಾಣ ಮತ್ತು ಟೈಪ್ 2 ಮಧುಮೇಹದ ಅಪಾಯ ಕಡಿಮೆಯಾಗುತ್ತದೆ ಎಂಬುದು ದೃಢಪಟ್ಟಿದೆ. ಮೊಟ್ಟೆಗಳನ್ನು ತಿನ್ನುವುದು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: Egg: ಗುಣಮಟ್ಟದ ಮೊಟ್ಟೆಗಳನ್ನು ಆರಿಸುವುದು ಹೇಗೆ ?

ಒಂದು ಮೊಟ್ಟೆಯು ಸರಿಸುಮಾರು 6 ಗ್ರಾಂ ಪ್ರೋಟೀನ್ ನೀಡುತ್ತದೆ ಎಂದು ಫೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್‌ಸ್ಟಿಟ್ಯೂಟ್, ಓಖ್ಲಾ, ನವದೆಹಲಿಯ ಎಲೆಕ್ಟ್ರೋಫಿಸಿಯಾಲಜಿ ಮತ್ತು ಕಾರ್ಡಿಯಾಕ್ ಪೇಸಿಂಗ್ ನಿರ್ದೇಶಕಿ ಡಾ. ಅಪರ್ಣಾ ಜಸ್ವಾಲ್ ಹೇಳಿದ್ದಾರೆ. ಸಾಮಾನ್ಯ ಆರೋಗ್ಯವಂತ ವಯಸ್ಕರಿಗೆ ಪ್ರತಿ ಕಿಲೋಗ್ರಾಂಗೆ ದಿನಕ್ಕೆ 0.8 ರಿಂದ 1 ಗ್ರಾಂ ತೂಕದ ಪ್ರೋಟೀನ್ ಅಗತ್ಯವಿದೆ. ಇದರರ್ಥ, ನೀವು 60 ಕೆಜಿ ಇದ್ದರೆ, ನಿಮಗೆ 40-60 ಗ್ರಾಂ ಪ್ರೋಟೀನ್ ಅಗತ್ಯವಿರುತ್ತದೆ.

ಮೊಟ್ಟೆಯಲ್ಲಿರುವಂತಹ ಪ್ರೋಟೀನ್‌ಗಳು ನೈಸರ್ಗಿಕವಾಗಿ ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿವೆ ಎಂದು ತಿಳಿದುಬಂದಿದೆ. ಅವು ನೈಸರ್ಗಿಕ ಶಕ್ತಿಯುತ ಎಸಿಇ ಪ್ರತಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಶಾರದಾ ಆಸ್ಪತ್ರೆಯ ಎಂಡಿ (ಇಂಟರ್ನಲ್ ಮೆಡಿಸಿನ್) ಡಾ. ಶ್ರೇಯ ಶ್ರೀವಾಸ್ತವ್ ಹೇಳಿದ್ದಾರೆ.

ಇದನ್ನೂ ಓದಿ: ದಿನಕ್ಕೆ 1 ಕೋಟಿ ಮೊಟ್ಟೆಗಳ ಕೊರತೆ ಎದುರಿಸುತ್ತಿದೆ ಮಹಾರಾಷ್ಟ್ರ!

“ಎಸಿಇ ಪ್ರತಿರೋಧಕಗಳು ನಿಮ್ಮ ರಕ್ತನಾಳಗಳನ್ನು ವಿಶ್ರಾಂತಿ ಮಾಡುವ ಮೂಲಕ ಮತ್ತು ನಿಮ್ಮ ರಕ್ತದ ಹರಿವನ್ನು ಸುಧಾರಿಸುವ ಮೂಲಕ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುವ ಸಂಯುಕ್ತಗಳಾಗಿವೆ. ಪ್ರೋಟೀನ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವುದು ಮಾತ್ರವಲ್ಲ, ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ನೀವು ಮಧುಮೇಹದ ಸಮಸ್ಯೆ ಹೊಂದಿದ್ದರೆ ಇದು ತುಂಬಾ ಉಪಯುಕ್ತವಾಗಿದೆ ಎಂದು ಡಾ. ಶ್ರೀವಾಸ್ತವ್ ಇಂಡಿಯನ್ ಎಕ್ಸ್​ಪ್ರೆಸ್​​ಗೆ ತಿಳಿಸಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ