ಅನೇಕ ಜನರು ಹೊರಗೆ ಹೋಗುವಾಗ ಅಥವಾ ಇತರೆ ತಮ್ಮ ನಿತ್ಯದ ಚಟುವಟಿಕೆಗಳ ಸಮಯದಲ್ಲಿ ಮೂತ್ರ (urine) ವನ್ನು ಹೆಚ್ಚು ಹೊತ್ತು ತಡೆಹಿಡಿಯುತ್ತಾರೆ. ಆದರೆ, ಇದರಿಂದ ಹಲವು ರೋಗಗಳು ತಗಲುವ ಅಪಾಯವಿದೆ ಎನ್ನುತ್ತಾರೆ ಸಂಶೋಧಕರು. ಮೂತ್ರ ವಿಸರ್ಜನೆ ಮಾಡದೇ ತಡೆ ಹಿಡಿದರೆ ಗಂಭೀರ ಕಾಯಿಲೆಗಳಿಗೆ ಆಹ್ವಾನ ನೀಡಿದಂತೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹಾಗಾದರೆ ಮೂತ್ರವನ್ನು ತಡೆ ಹಿಡಿಯುವುದರಿಂದ ಉಂಟಾಗುವ ತೊಂದರೆಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಮುಂದೆ ಓದಿ.
ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ವಾಸ್ತವವಾಗಿ, ದೇಹದಿಂದ ವಿಷವನ್ನು ಮೂತ್ರದ ಮೂಲಕ ಹೊರಹಾಕಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮೂತ್ರವನ್ನು ನಾವು ದೀರ್ಘಕಾಲದವರೆಗೆ ತಡೆಯುವುದರಿಂದ pH ಮಟ್ಟವು ತೊಂದರೆಗೊಳಗಾಗುತ್ತದೆ. ಇದು ಯುಟಿಐ ಸೋಂಕಿನ ಅಪಾಯವನ್ನೂ ಹೆಚ್ಚಿಸುತ್ತದೆ.
ಇದನ್ನೂ ಓದಿ: ತಾಮ್ರದ ಪಾತ್ರೆಯಿಂದ ನೀರು ಕುಡಿಯುವುದರ ಆಯುರ್ವೇದ ಪ್ರಯೋಜನಗಳು
ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಫಿಲ್ಟರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ದೀರ್ಘಕಾಲದ ಮೂತ್ರ ಧಾರಣವು ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗಬಹುದು. ಅಷ್ಟೇ ಅಲ್ಲದೇ ಮೂತ್ರವನ್ನು ದೀರ್ಘಕಾಲ ನಿಯಂತ್ರಣದಲ್ಲಿಟ್ಟುಕೊಂಡರೆ ಕಿಡ್ನಿ ವೈಫಲ್ಯವಾಗುವ ಸಂಭವವಿರುತ್ತದೆ.
ನಮ್ಮ ದೇಹದಲ್ಲಿ ಸಂಗ್ರಹವಾದ ಸೋಡಿಯಂ ಮೂತ್ರದ ಮೂಲಕ ಹೊರಹಾಕಲ್ಪಡುತ್ತದೆ. ಮೂತ್ರವನ್ನು ದೀರ್ಘಕಾಲದವರೆಗೆ ತಡೆಹಿಡಿದಾಗ ದೇಹದಲ್ಲಿ ಸೋಡಿಯಂ ಪ್ರಮಾಣವು ಹೆಚ್ಚಾಗುತ್ತದೆ. ಇದು ದೇಹದಲ್ಲಿ ಉರಿಯೂತ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಅಂಡಾಶಯದ ಕ್ಯಾನ್ಸರ್ನ ಆರಂಭಿಕ ಪತ್ತೆಹಚ್ಚುವಿಕೆ ಕುರಿತು ಮಾಹಿತಿ ಇಲ್ಲಿದೆ
ಹೆಚ್ಚು ಹೊತ್ತು ಮೂತ್ರವನ್ನು ತಡೆಹಿಡಿಯುವುದರಿಂದ ಮೂತ್ರಕೋಶದ ಮೇಲೆ ಒತ್ತಡ ಬೀಳುತ್ತದೆ. ಕೆಲವೊಮ್ಮೆ ಇದು ನೋವಿಗೆ ಕಾರಣವಾಗುತ್ತದೆ. ಕೆಳ ಹೊಟ್ಟೆ ಮತ್ತು ಜನನಾಂಗಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳಬಹುದು.
ಮೂತ್ರವನ್ನು ದೀರ್ಘಕಾಲ ತಡೆಹಿಡಿದರೆ, ಮೂತ್ರಕೋಶದ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ ಮೂತ್ರಕೋಶ ಛಿದ್ರವಾಗುವ ಅಪಾಯವೂ ಇದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಮತ್ತಷ್ಟು ಆರೋಗ್ಯ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.