Urine Colour: ಮೂತ್ರದ ಬಣ್ಣದಲ್ಲಿ ಅಡಗಿದೆ ಆರೋಗ್ಯದ ಗುಟ್ಟು

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 07, 2024 | 3:08 PM

ನಿಮ್ಮ ಮೂತ್ರದ ಬಣ್ಣದ ಆಧಾರದ ಮೇಲೆ ಆರೋಗ್ಯ ಸ್ಥಿತಿಯನ್ನು ಸಹ ನಿರ್ಧರಿಸಬಹುದು ಎಂದು ತಜ್ಞರು ಹೇಳುತ್ತಾರೆ. ಮೂತ್ರದ ಬಣ್ಣ ಅವಲಂಬಿಸಿ, ನಿಮ್ಮ ದೇಹದಲ್ಲಿ ಯಾವ ರೀತಿಯ ಆರೋಗ್ಯ ಸಮಸ್ಯೆಗಳಿವೆ ಎಂದು ತಿಳಿಯಲು ಸಾಧ್ಯವಿದೆ. ಮೂತ್ರದ ಕ್ಯಾನ್ಸರ್, ಮೂತ್ರಪಿಂಡದ ಕಲ್ಲುಗಳು, ಮೂತ್ರದ ಸೋಂಕು, ಪ್ರಾಸ್ಟೇಟ್ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳನ್ನು ಇದರಿಂದ ಕಂಡು ಹಿಡಿಯಬಹುದಾಗಿದೆ. ತಜ್ಞರ ಪ್ರಕಾರ, ಈ ರೀತಿ ಸಮಸ್ಯೆಗಳು ಇದ್ದರೆ ಮೂತ್ರದ ಬಣ್ಣ ವಿಭಿನ್ನವಾಗಿ ಕಾಣುತ್ತದೆ. ಅದೂ ಅಲ್ಲದೆ ನಿಮ್ಮ ದೇಹವು ಎಷ್ಟು ಹೈಡ್ರೇಟ್ ಆಗಿದೆ ಎಂಬುದನ್ನು ಮೂತ್ರದ ಬಣ್ಣದಿಂದ ನಿರ್ಧರಿಸಬಹುದು. ಆರೋಗ್ಯವಂತ ವ್ಯಕ್ತಿಯ ಮೂತ್ರದ ಬಣ್ಣವು ನೀರಿನಂತೆ ಸ್ಪಷ್ಟವಾಗಿರುತ್ತದೆ. ಇದು ಯುರೋಕ್ರೋಮ್ ಎಂಬ ರಾಸಾಯನಿಕದಿಂದ ಉಂಟಾಗುತ್ತದೆ. ಹಾಗಾದರೆ ಈ ಬಣ್ಣ ಬದಲಾದರೆ ಅದಕ್ಕೆ ಕಾರಣವೇನು? ಯಾವ ಬಣ್ಣ ಏನನ್ನು ಸೂಚಿಸುತ್ತದೆ? ಇಲ್ಲಿದೆ ಮಾಹಿತಿ.

Urine Colour: ಮೂತ್ರದ ಬಣ್ಣದಲ್ಲಿ ಅಡಗಿದೆ ಆರೋಗ್ಯದ ಗುಟ್ಟು
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಜನರು ನಾನಾ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹಾಗಾದರೆ ನಾವು ಆರೋಗ್ಯವಾಗಿ ಇದ್ದೆವೋ, ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ಕೆಲವೊಮ್ಮೆ ನಮ್ಮ ದೇಹ, ಅನಾರೋಗ್ಯದ ಮುನ್ಸೂಚನೆಗಳನ್ನು ನೀಡುತ್ತದೆ. ಆದರೆ ಅದನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಮೂತ್ರದ ಬಣ್ಣದ ಆಧಾರದ ಮೇಲೆ ಆರೋಗ್ಯ ಸ್ಥಿತಿಯನ್ನು ಸಹ ನಿರ್ಧರಿಸಬಹುದು ಎಂದು ತಜ್ಞರು ಹೇಳುತ್ತಾರೆ. ಮೂತ್ರದ ಬಣ್ಣ ಅವಲಂಬಿಸಿ, ನಿಮ್ಮ ದೇಹದಲ್ಲಿ ಯಾವ ರೀತಿಯ ಆರೋಗ್ಯ ಸಮಸ್ಯೆಗಳಿವೆ ಎಂದು ತಿಳಿಯಲು ಸಾಧ್ಯವಿದೆ. ಮೂತ್ರದ ಕ್ಯಾನ್ಸರ್, ಮೂತ್ರಪಿಂಡದ ಕಲ್ಲುಗಳು, ಮೂತ್ರದ ಸೋಂಕು, ಪ್ರಾಸ್ಟೇಟ್ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳನ್ನು ಇದರಿಂದ ಕಂಡು ಹಿಡಿಯಬಹುದಾಗಿದೆ. ತಜ್ಞರ ಪ್ರಕಾರ, ಈ ರೀತಿ ಸಮಸ್ಯೆಗಳು ಇದ್ದರೆ ಮೂತ್ರದ ಬಣ್ಣ ವಿಭಿನ್ನವಾಗಿ ಕಾಣುತ್ತದೆ. ಅದೂ ಅಲ್ಲದೆ ನಿಮ್ಮ ದೇಹವು ಎಷ್ಟು ಹೈಡ್ರೇಟ್ ಆಗಿದೆ ಎಂಬುದನ್ನು ಮೂತ್ರದ ಬಣ್ಣದಿಂದ ನಿರ್ಧರಿಸಬಹುದು. ಆರೋಗ್ಯವಂತ ವ್ಯಕ್ತಿಯ ಮೂತ್ರದ ಬಣ್ಣವು ನೀರಿನಂತೆ ಸ್ಪಷ್ಟವಾಗಿರುತ್ತದೆ. ಇದು ಯುರೋಕ್ರೋಮ್ ಎಂಬ ರಾಸಾಯನಿಕದಿಂದ ಉಂಟಾಗುತ್ತದೆ. ಹಾಗಾದರೆ ಈ ಬಣ್ಣ ಬದಲಾದರೆ ಅದಕ್ಕೆ ಕಾರಣವೇನು? ಯಾವ ಬಣ್ಣ ಏನನ್ನು ಸೂಚಿಸುತ್ತದೆ? ಇಲ್ಲಿದೆ ಮಾಹಿತಿ.

ತಿಳಿ ಹಳದಿ: ಮೂತ್ರದ ಬಣ್ಣ ತಿಳಿ ಹಳದಿಯಾಗಿದ್ದರೆ ದಿನನಿತ್ಯ ನೀವು ಕುಡಿಯುವ ನೀರು, ನಿಮ್ಮ ದೇಹಕ್ಕೆ ಸಾಕಾಗುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ, ನೀವು ಸಾಕಷ್ಟು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಇದಲ್ಲದೆ, ಮೂತ್ರಪಿಂಡದ ಕಾಯಿಲೆ ಅಥವಾ ಮಧುಮೇಹದಿಂದಾಗಿಯೂ ಮೂತ್ರದ ಬಣ್ಣವು ತಿಳಿ ಹಳದಿ ಬಣ್ಣಕ್ಕೆ ತಿರುಗಬಹುದು ಎಂದು ತಜ್ಞರು ಹೇಳುತ್ತಾರೆ.

ಗಾಢ ಹಳದಿ: ಮೂತ್ರ ಗಾಢ ಹಳದಿ ಬಣ್ಣದಲ್ಲಿದ್ದರೆ ನಿಮ್ಮ ದೇಹ ನಿರ್ಜಲೀಕರಣಗೊಳ್ಳುತ್ತಿದೆ ಎಂಬುದರ ಸಂಕೇತವಾಗಿದೆ. ಇದರರ್ಥ ದೇಹದಲ್ಲಿ ನೀರಿನ ಕೊರತೆ ಇದೆ. ನೀವು ಪ್ರತಿದಿನ ಕನಿಷ್ಠ 8 ರಿಂದ 10 ಲೋಟ ನೀರು ಕುಡಿಯಬೇಕು. ಹಾಲು, ನಿಂಬೆ ನೀರು ಮತ್ತು ಎಳನೀರು ಕುಡಿಯುವ ಮೂಲಕ, ನಿಮ್ಮ ದೇಹದಲ್ಲಿನ ಜಲಸಂಚಯನದ ಕೊರತೆಯನ್ನು ನಿಗಿಸಿಕೊಳ್ಳಬಹುದು.

ಕೆಂಪು: ಮೂತ್ರವು ಹಲವಾರು ಕಾರಣಗಳಿಗಾಗಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಮೊದಲನೆಯದಾಗಿ, ನೀವು ಆಹಾರದಲ್ಲಿ ಬೀಟ್ರೂಟ್ ಸೇವಿಸಿದರೆ ಅಥವಾ ಅದರ ರಸವನ್ನು ಕುಡಿದರೆ, ಮೂತ್ರದ ಕೆಂಪು ಬಣ್ಣಕ್ಕೆ ತಿರುಗುವ ಸಾಧ್ಯತೆಯಿದೆ. ಕೆಲವು ಬಾರಿ ಔಷಧಿಗಳ ಬಳಕೆಯಿಂದಾಗಿಯೂ ಕೆಂಪಾಗಬಹುದು ಅಥವಾ ಮೂತ್ರದೊಂದಿಗೆ ರಕ್ತ ಬರುತ್ತಿರಬಹುದು. ಹಾಗಾಗಿ ಇಂತಹ ಸಮಯದಲ್ಲಿ ನೀವು, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಇದು ಮೂತ್ರಪಿಂಡದ ಕಾಯಿಲೆ, ಸೋಂಕು, ಕ್ಯಾನ್ಸರ್ ಮುಂತಾದ ಗಂಭೀರ ಸಮಸ್ಯೆಗಳಿಂದ ಉಂಟಾಗಬಹುದು.

ಕಂದು ಬಣ್ಣ: ಪಿತ್ತಜನಕಾಂಗ ಅಥವಾ ಪಿತ್ತಕೋಶದ ಸೋಂಕಿನಿಂದಾಗಿ ಮೂತ್ರ ಕಂದು ಬಣ್ಣಕ್ಕೆ ಬರುತ್ತದೆ. ಅಲ್ಲದೆ, ಇದು ಪಿತ್ತರಸ ನಾಳದಲ್ಲಿ ತಡೆಯಾದಾಗ ಅಥವಾ ಗಾಯದಿಂದ ಉಂಟಾಗಬಹುದು. ಜೊತೆಗೆ ಮೂತ್ರಕೋಶದ ಸೋಂಕು ಕೂಡ ಇದಕ್ಕೆ ಕಾರಣವಾಗಬಹುದು.

ಹಸಿರು- ಕಂದು: ವಿಪರೀತ ಇಂಗ್ಲಿಷ್ ಔಷಧಿಗಳನ್ನು ತೆಗೆದುಕೊಳ್ಳುವುದು ಮತ್ತು ವಿವಿಧ ರೀತಿಯ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಈ ವಿಚಿತ್ರ ಬಣ್ಣದ ಮೂತ್ರಕ್ಕೆ ಕಾರಣವಾಗಬಹುದು. ನಿರಂತರವಾಗಿ ಹಸಿರು ಮತ್ತು ಕಂದು ಬಣ್ಣದ ಮೂತ್ರ ಹೋಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

(ಸೂಚನೆ: ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ. ನಿಮಗೆ ಯಾವುದೇ ರೀತಿಯ ಸಂದೇಹಗಳಿದ್ದರೂ, ತಜ್ಞರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ