ಮನೆಯಿಂದ ಕುಳಿತುಕೊಂಡಲ್ಲಿಯೇ ಕೆಲಸ ಮಾಡುವುದು ಅನಾರೋಗ್ಯಕರ ಪರಿಸ್ಥಿತಿಗೆ ಹೆಚ್ಚು ಕಾರಣವಾಗಿದೆ. ದೈಹಿಕ ಚಟುವಟಿಕೆಗಳು ಹೆಚ್ಚು ಕಡಿಮೆಯಾಗುತ್ತಿದೆ. ಜೀವನ ಶೈಲಿಯ ಬದಲಾವಣೆಯು ಯಕೃತ್ತಿನ ಮೇಲೆ ಹೆಚ್ಚು ಪರಿಣಾಮವನ್ನು ಉಂಟು ಮಾಡುತ್ತಿದೆ. ಹೀಗಿರುವಾಗ ಕೆಲವು ಆಹಾರ ಪದಾರ್ಥಗಳನ್ನು ನಮ್ಮ ಅಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ದೇಹದಲ್ಲಿ ಕಾರ್ಬೋಹೈಡ್ರೇಟ್, ಕೊಬ್ಬು ಮತ್ತು ಪ್ರೋಟೀನ್ ಸೇವನೆಯನ್ನು ನಿಯಂತ್ರಿಸುವ ಕಾರ್ಯವನ್ನು ಯಕೃತ್ತು ನಿರ್ವಹಿಸುತ್ತದೆ. ದೇಹದಲ್ಲಿನ ಹಾನಿಕಾರಕ ಜೀವಾಣುಗಳನ್ನು ಹೊರಹಾಕಲು ಇದು ಸಹಾಯ ಮಾಡುತ್ತದೆ. ಹಾಗಿರುವಾಗ ಯಕೃತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಇದಕ್ಕಾಗಿ ಕೆಲವು ಟಿಪ್ಸ್ಗಳು ಈ ಕೆಳಗಿನಂತಿವೆ.
ಬೆಳ್ಳುಳ್ಳಿ
ಬೆಳ್ಳುಳ್ಳಿಯು ಸೆಲೆನಿಯಮ್ ಎಂಬ ಖನಿಜವನ್ನು ಹೊಂದಿರುತ್ತದೆ. ಇದು ಯಕೃತ್ತನ್ನು ಶುದ್ದೀಕರಿಸಲು ಸಹಾಯ ಮಾಡುತ್ತದೆ. ಲಿವರ್ ಕಿಣ್ವಗಳು, ಜೀವಾಣುಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಅಲ್ಲಿಸಿನ್, ವಿಟಮಿನ್ ಸಿ ಮತ್ತು ಬಿ6 ಅಂಶಗಳು ಸಮೃದ್ಧವಾಗಿರುತ್ತದೆ. ಲಿವರ್ ಆರೋಗ್ಯ ಕಾಪಾಡಲು ಬೆಳ್ಳುಳ್ಳಿ ಉತ್ತಮ ಆಹಾರ ಪದಾರ್ಥವಾಗಿದೆ.
ಬೀಟ್ರೂಟ್
ಬೀಟ್ರೂಟ್ನಲ್ಲಿರುವ ಆ್ಯಂಟಿ- ಆಕ್ಸಿಡೆಂಟ್ಗಳು ಪಿತ್ತಜನಕಾಂಗವನ್ನು ಆಕ್ಸಿಡೇಟಿವ್ ಹಾನಿ ಮತ್ತು ಉರಿಯೂತ ಸಮಸ್ಯೆಯಿಂದ ತಡೆಯುತ್ತದೆ. ಇದು ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.
ಹಸಿರು ತರಕಾರಿಗಳು
ನಮ್ಮ ಪ್ರತಿನಿತ್ಯದ ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇವಿಸುವುದು ಮುಖ್ಯ. ಹಸಿರು ತರಕಾರಿಗಳಲ್ಲಿ ಹೆಚ್ಚು ಪೌಷ್ಟಿಕ ಗುಣಗಳಿರುತ್ತದೆ. ಪೊಟ್ಯಾಷಿಯಂ, ಮೆಗ್ನೀಶಿಯಂ ಮತ್ತು ಮ್ಯಾಂಗನೀಸ್ಅನ್ನು ಹೊಂದಿರುತ್ತದೆ. ಇದು ದೇಹದಲ್ಲಿರುವ ವಿಷಕಾರಿ ಪದಾರ್ಥಗಳನ್ನು ತೆಗೆದು ಹಾಕಲು ಬೇಕಾಗಿರುವ ಯಕೃತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಸಿಟ್ರಸ್ ಹಣ್ಣುಗಳು
ಸಿಟ್ರಸ್ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಸಿಟ್ರಿಕ್ ಆಸಿಡ್, ಪೊಟ್ಯಾಷಿಯಂ ಮತ್ತು ವಿಟಮಿನ್ ಸಿ ಅಂಶವನ್ನು ಹೊಂದಿರುತ್ತದೆ. ಇದು ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ. ಉತ್ಕರ್ಷಕ ನಿರೋಧಕಗಳನ್ನು ಹೊಂದಿರುವ ಸಿಟ್ರಸ್ ಹಣ್ಣುಗಳು ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ.
ಇದನ್ನೂ ಓದಿ:
Brain Food: ನಿಮ್ಮ ಮಕ್ಕಳ ಜ್ಞಾಪಕ ಶಕ್ತಿ ಸುಧಾರಿಸಬೇಕೆ? ಇಲ್ಲಿದೆ ಕೆಲವು ಸಲಹೆಗಳು
Health Tips: ಕಬ್ಬಿನ ಜ್ಯೂಸ್ ಕುಡಿದ್ರೆ ಸಿಗುವ ಪ್ರಯೋಜನಗಳು ಏನೆಲ್ಲಾ ಗೊತ್ತಾ?
(Health tips These foods can boost your liver health )