AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Brain Food: ನಿಮ್ಮ ಮಕ್ಕಳ ಜ್ಞಾಪಕ ಶಕ್ತಿ ಸುಧಾರಿಸಬೇಕೆ? ಇಲ್ಲಿದೆ ಕೆಲವು ಸಲಹೆಗಳು

ರಾತ್ರಿ ಪೂರ್ತಿ ನಿದ್ದೆಗೆಟ್ಟು ಮಕ್ಕಳು ಓದಿರುತ್ತಾರೆ. ಆದರೆ ಬೆಳಿಗ್ಗೆ ಪರೀಕ್ಷೆಗೆ ಕುಳಿತಾಗ ಓದಿದ ಒಂದಕ್ಷರವೂ ನೆನಪೇ ಆಗಲಿಲ್ಲ ಎಂದು ಹೇಳುವುದನ್ನು ಕೇಳಿಯೇ ಇರ್ತೀರಿ. ಹಾಗಿದ್ದಾಗ ಇದಕ್ಕೆ ಪರಿಹಾರವೇನು?

Brain Food: ನಿಮ್ಮ ಮಕ್ಕಳ ಜ್ಞಾಪಕ ಶಕ್ತಿ ಸುಧಾರಿಸಬೇಕೆ? ಇಲ್ಲಿದೆ ಕೆಲವು ಸಲಹೆಗಳು
ಸಾಂದರ್ಭಿಕ ಚಿತ್ರ
TV9 Web
| Updated By: Skanda|

Updated on: Jun 15, 2021 | 8:58 AM

Share

ಅದೆಷ್ಟೋ ಸಣ್ಣ-ಪುಟ್ಟ ವಿಷಯಗಳನ್ನು ನಾವು ಮರೆತು ಬಿಡುತ್ತೇವೆ. ಮುಖ್ಯವಾದ ಕೆಲಸವನ್ನು ಇಂದು ಮಾಡಬೇಕು ಎಂದು ನಿರ್ಧರಿಸುತ್ತೇವೆ ಆದರೆ ಅದು ಗಮನದಲ್ಲಿಯೇ ಇರುವುದಿಲ್ಲ. ಹಾಗಾದರೆ ಈ ಮರೆವು ಹೇಗೆ ಸಾಧ್ಯ ಎಂಬುದರ ಕುರಿತಾಗಿ ತಲೆ ಕೆಡಿಸಿಕೊಂಡಿದ್ದೇ ಆಯಿತು. ಮರೆವಿನ ಖಾಯಿಲೆಗೆ ಪರಿಹಾರವನ್ನು ಹುಡುಕುವತ್ತ ಪ್ರಯತ್ನಿಸಲೇ ಇಲ್ಲ. ಹಾಗಿದ್ದಾಗ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ಎಂಬುದರ ಕುರಿತಾಗಿ ತಿಳಿಯೋಣ.

ತಜ್ಞರ ಪ್ರಕಾರ ಆಹಾರದಲ್ಲಿನ ಪೌಷ್ಟಿಕಾಂಶದ ಕೊರತೆಯಿಂದಾಗಿ ವಿಷಯಗಳನ್ನು ನೆನಪಿನಲ್ಲಿಡಲು ಸಾಧ್ಯವಾಗುವುದಿಲ್ಲ. ಪೌಷ್ಟಿಕ ಆಹಾರ ಸೇವಿಸದೇ ಇರುವುದರಿಂದ ಮೆದುಳು ಕೆಲಸ ಮಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಹೀಗಿರುವಾಗ ನಮ್ಮ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ.

ರಾತ್ರಿ ಪೂರ್ತಿ ನಿದ್ದೆಗೆಟ್ಟು ಮಕ್ಕಳು ಓದಿರುತ್ತಾರೆ. ಆದರೆ ಬೆಳಿಗ್ಗೆ ಪರೀಕ್ಷೆಗೆ ಕುಳಿತಾಗ ಓದಿದ ಒಂದಕ್ಷರವೂ ನೆನಪೇ ಆಗಲಿಲ್ಲ ಎಂದು ಹೇಳುವುದನ್ನು ಕೇಳಿಯೇ ಇರ್ತೀರಿ. ಹಾಗಿದ್ದಾಗ ಇದಕ್ಕೆ ಪರಿಹಾರವೇನು? ಆಹಾರ ವಿಧಾನ ಬದಲಾಗಬೇಕೆ? ನಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವೊಂದಿಷ್ಟು ಆಹಾರ ಪದಾರ್ಥಗಳು ಹೀಗಿವೆ.  ಇವುಗಳಿಂದ ನಿಮ್ಮ ಮಕ್ಕಳು ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ.

ಬೀಟ್ರೂಟ್ ಬೀಟ್ರೂಟ್​ ಸೇವಿಸುವದರಿಂದ ಯಾವುದೇ ಒಂದು ವಿಷಯದ ಕುರಿತಾಗಿ ಗಮನ ಹರಿಸಲು ಸಹಾಯಕವಾಗುತ್ತದೆ. ನೆನಪಿನ ಶಕ್ತಿಯು ಹೆಚ್ಚುತ್ತದೆ. ಹಾಗೂ ಇದರಲ್ಲಿರುವ ಪೌಷ್ಟಿಕಾಂಶಯುಕ್ತ ಪ್ರೊಟೀನ್​ಗಳು ಆರೋಗ್ಯವನ್ನು ಸುಧಾರಿಸುತ್ತದೆ. ದೇಹದಲ್ಲಿ ರಕ್ತದ ಕೊರತೆಯಿರುವುದಿಲ್ಲ ಹಾಗೂ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.

ನೀರು ನಮ್ಮ ದೇಹಕ್ಕೆ ನೀರು ಬಹಳ ಮುಖ್ಯ. ಮನಸ್ಸು ಕೆಂದ್ರೀಕರಿಸಲು ನೀರು ಸಹಾಯ ಮಾಡುತ್ತದೆ. ಪ್ರತಿನಿತ್ಯ  2 ರಿಂದ 3 ಲೀಟರ್​ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ.

ಸೊಪ್ಪು ಪಾಲಾಕ್​ ಸೊಪ್ಪು, ಒಂದೆಲಗದಂತಹ ಸೊಪ್ಪಿನ ಪದಾರ್ಥಗಳನ್ನು ಹೆಚ್ಚು ಸೇವಿಸಿ. ಇವು ನಿಮ್ಮ ಮೆದುಳಿನ ಕಾರ್ಯವನ್ನು ಚುರುಕುಗೊಳಿಸುತ್ತದೆ. ಈ ಮೂಲಕ ನಿಮ್ಮ ನೆನಪಿನ ಶಕ್ತಿ ಹೆಚ್ಚುತ್ತದೆ. ಯಾವುದೇ ಕೆಲಸ ಮಾಡಲು ಮನಸ್ಸು ಚುರುಕಾಗಿರಬೇಕು. ಹಾಗಾಗಿ ಹಸಿರು ಸೊಪ್ಪುಗಳನ್ನು ತಿನ್ನುವುದರಿಂದ ಮರೆಯುವ ಖಾಯಿಲೆಯಿಂದ ದೂರವಿರಬಹುದು.

ಬಾಳೆಹಣ್ಣು ಬಾಳೆಹಣ್ಣು ವಿಟಮಿನ್​ ಮತ್ತು ಪೋಷಕಾಂಶಗಳಿಂದ ತುಂಬಿದ ಸಮೃದ್ಧವಾದ ಹಣ್ಣು. ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಬಾಳೆಹಣ್ಣಿನಲ್ಲಿರುವ ಪೊಟ್ಯಾಷಿಯಮ್​ ಪ್ರಮಾಣವು ದೇಹಕ್ಕೆ ಒಳ್ಳೆಯದು. ಮೆದುಳಿನ ವ್ಯವಸ್ಥಿತ ಕಾರ್ಯನಿರ್ವಹಣೆಗೆ ಬಾಳೆಹಣ್ಣು ಸಹಾಯ ಮಾಡುತ್ತದೆ. ಪ್ರತಿನಿತ್ಯ ಬಾಳೆಹಣ್ಣನ್ನು ಸೇವಿಸುವದರಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ.

ಇದನ್ನೂ ಓದಿ:

Health Tips: ಆಸಿಡಿಟಿ ನಿವಾರಣೆಗೆ ಯೋಗಾಭ್ಯಾಸ; ಯಾವ ಯೋಗ ಭಂಗಿ ಸೂಕ್ತ?

Health Tips: ನೀವು ಮೈಗ್ರೇನ್​ನಿಂದ ಬಳಲುತ್ತಿದ್ದೀರಾ? ಚಿಂತೆ ಬೇಡ