Health Tips: ಕಬ್ಬಿನ ಜ್ಯೂಸ್ ಕುಡಿದ್ರೆ ಸಿಗುವ ಪ್ರಯೋಜನಗಳು ಏನೆಲ್ಲಾ ಗೊತ್ತಾ?
health benefits of sugarcane juice: ಕಬ್ಬಿನಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು, ಇದು ದೇಹ ತೂಕವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಹಾನಿಕಾರಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಿ, ದೇಹ ತೂಕವನ್ನು ಕಡಿಮೆ ಮಾಡುತ್ತದೆ.
ಜ್ಯೂಸ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಪ್ರತಿ ಸೀಸನ್ನಲ್ಲೂ ಸಿಗುವ ವಿವಿಧ ರೀತಿಯ ಹಣ್ಣಿನ ಜ್ಯೂಸ್ ಕುಡಿಯುವಾಗ ಸಿಗೋ ಖುಷಿಯೇ ಬೇರೆ. ಆದರೆ ಅಂತಹ ಹಣ್ಣಿನ ರಸವನ್ನು ಕುಡಿಯುವ ಮುನ್ನ ಸ್ವಲ್ಪ ಎಚ್ಚರವಹಿಸಿದರೆ, ನಿಮ್ಮ ಆರೋಗ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಏಕೆಂದರೆ ಕೆಲವೊಂದು ಸೀಸನ್ನಲ್ಲಿ ಕೆಲ ಹಣ್ಣುಗಳು ದೇಹ ಮೇಲೆ ಪರಿಣಾಮ ಬೀರುತ್ತವೆ. ಮುಖ್ಯವಾಗಿ ಉಷ್ಣಾಂಶವಿರುವ ಸಮಯದಲ್ಲಿ ದೇಹವನ್ನು ತಂಪಾಗಿಸುವ ಜ್ಯೂಸ್ಗಳತ್ತ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಇದೀಗ ಮಳೆಗಾಲ ಶುರುವಾಗಿದೆ. ಮಳೆ ಜೊತೆ ಚಳಿ ಕೂಡ ಆವರಿಸಿರುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕಬ್ಬಿನ ರಸವನ್ನು ಕುಡಿಯುವ ಮೂಲ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಈ ಮೂಲಕ ಅನೇಕ ಕಾಯಿಲೆಗಳಿಂದ ಪಾರಾಗಬಹುದು.
ಅಂದರೆ, ಕಬ್ಬಿನಲ್ಲಿ ನಾರಿನ ಪ್ರಮಾಣವೂ ತುಂಬಾ ಹೆಚ್ಚಾಗಿರುತ್ತವೆ. ತಾಜಾ ಕಬ್ಬಿನ ರಸವು ಕಾಮಾಲೆ, ರಕ್ತಹೀನತೆ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಬ್ಬಿನ ಜ್ಯೂಸ್ನ್ನು ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡ ದೂರ ಮಾಡಬಹುದು. ಹಾಗಿದ್ರೆ ಕಬ್ಬಿನ ರಸ ಕುಡಿಯುವುದರಿಂದ ಸಿಗುವ ಇನ್ನಿತರ ಪ್ರಯೋಜನಗಳೇನು ನೋಡೋಣ.
ಮಧುಮೇಹಕ್ಕೆ ಪರಿಹಾರ: ಕಬ್ಬು ನಮ್ಮ ದೇಹದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಸಮತೋಲನಗೊಳಿಸುತ್ತದೆ. ಇದೇ ಕಾರಣದಿಂದ ಮಧುಮೇಹಿ ರೋಗಿಗಳು ಇದನ್ನು ಕುಡಿಯುವುದು ಉತ್ತಮ. ನೈಸರ್ಗಿಕ ಸಿಹಿಕಾರಕಗಳಿಂದ ತುಂಬಿರುವ ಕಾರಣ ಕಬ್ಬಿನ ರಸವು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಪಿತ್ತಜನಕಾಂಗದ ಸಮಸ್ಯೆಗೆ ರಾಮಬಾಣ: ಕಬ್ಬಿನ ರಸವನ್ನು ಒಬ್ಬ ವ್ಯಕ್ತಿಗೆ ಕಾಮಾಲೆ ಇದ್ದಾಗ ನೀಡಲಾಗುತ್ತದೆ. ಕಬ್ಬಿನ ರಸವು ಪಿತ್ತಜನಕಾಂಗಕ್ಕೆ (ಲಿವರ್) ತುಂಬಾ ಒಳ್ಳೆಯದು. ಇದು ಲಿವರ್ಗೆ ಸಂಬಂಧಿಸಿದ ರೋಗಗಳನ್ನು ದೂರ ಮಾಡುತ್ತದೆ. ಹಾಗೆಯೇ ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಕಬ್ಬಿನ ರಸವನ್ನು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಬಹುದು . ಬಲವಾದ ರೋಗನಿರೋಧಕ ಶಕ್ತಿಯಿಂದಾಗಿ, ದೇಹವು ಅನೇಕ ರೀತಿಯ ವೈರಲ್ ರೋಗಗಳಿಂದ ಪಾರಾಗಬಹುದು.
ತೂಕವನ್ನು ಕಡಿಮೆ ಮಾಡುತ್ತದೆ: ಕಬ್ಬಿನಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು, ಇದು ದೇಹ ತೂಕವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಹಾನಿಕಾರಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಿ, ದೇಹ ತೂಕವನ್ನು ಕಡಿಮೆ ಮಾಡುತ್ತದೆ. ಅದರ ಜೊತೆಗೆ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.
ಮೊಡವೆ ಮತ್ತು ಕಲೆಗಳನ್ನು ದೂರ ಮಾಡುತ್ತೆ: ಕಬ್ಬಿನ ರಸವನ್ನು ಕುಡಿಯುವುದರಿಂದ ಮೊಡವೆಗಳ ಸಮಸ್ಯೆ ದೂರವಾಗುತ್ತವೆ. ಕಬ್ಬಿನಲ್ಲಿ ಸುಕ್ರೋಸ್ ಅಂಶ ಸಮೃದ್ಧವಾಗಿದ್ದು, ಯಾವುದೇ ಗಾಯಗಳು ಬೇಗನೆ ವಾಸಿಯಾಗಲು ಇದು ಸಹಾಯ ಮಾಡುತ್ತದೆ. ಹಾಗೆಯೇ ನಿಯಮಿತವಾಗಿ ಕಬ್ಬಿನ ಜ್ಯೂಸ್ ಕುಡಿಯುವುದರಿಂದ ದೇಹದ ಕೆಟ್ಟ ರಕ್ತವನ್ನು ಶುದ್ಧೀಕರಿಸಿಕೊಳ್ಳಬಹುದು. ಇದರಿಂದ ಮುಖದಲ್ಲಿರುವ ಕಲೆಗಳು ನಿವಾರಣೆಯಾಗಿ ಚರ್ಮಗಳು ಹೊಳೆಪಿನಿಂದ ಕೂಡಿರುತ್ತದೆ.
ಮೂಳೆಗಳನ್ನು ಬಲಪಡಿಸುತ್ತದೆ: ಕಬ್ಬಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಐರನ್ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಇದು ದೇಹದ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕಡಿಮೆ ಬೆಲೆಯ ಪವರ್ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್ಟಾಪ್ನ್ನು ಚಾರ್ಜ್ ಮಾಡಬಹುದು
ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ
(health benefits of sugarcane juice)