Skin Care: ನಿಮ್ಮ ಈ ಹವ್ಯಾಸಗಳೇ ಚರ್ಮದ ಆರೋಗ್ಯಕ್ಕೆ ಮುಳುವಾಗಬಹುದು; ಏನೇನದು? ಇಲ್ಲಿದೆ ನೋಡಿ

Skin Care Tips: ನಿಮ್ಮ ತ್ವಚೆಯನ್ನು ಹಾಳು ಮಾಡುವುದು ಕೇವಲ ಸೂರ್ಯ ಅಥವಾ ವಾತಾವರಣದ ಏರುಪೇರಲ್ಲ. ನಿಮ್ಮ ದೈನಂದಿನ ಅಭ್ಯಾಸಗಳೂ ಇದಕ್ಕೆ ಕಾರಣವಾಗುತ್ತವೆ. ಅವು ಏನೇನು? ನಮ್ಮ ಯಾವೆಲ್ಲಾ ಅಭ್ಯಾಸಗಳ ಬಗ್ಗೆ ನಾವು ಜಾಗೃತರಾಗಿರಬೇಕು? ಯಾವ ಅಭ್ಯಾಸಗಳನ್ನು ಮಾರ್ಪಾಡು ಮಾಡಿಕೊಳ್ಳಬೇಕು? ಇಲ್ಲಿದೆ ಉತ್ತರ.

Skin Care: ನಿಮ್ಮ ಈ ಹವ್ಯಾಸಗಳೇ ಚರ್ಮದ ಆರೋಗ್ಯಕ್ಕೆ ಮುಳುವಾಗಬಹುದು; ಏನೇನದು? ಇಲ್ಲಿದೆ ನೋಡಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on: May 01, 2022 | 1:19 PM

ಹೊಸದಿಲ್ಲಿ: ಚರ್ಮದ ಆರೋಗ್ಯವು (Skin Care) ಪರಿಸರ, ಆಹಾರ, ಜೀವನಶೈಲಿ ಇತ್ಯಾದಿಗಳಿಂದ ಹಿಡಿದು ವಿವಿಧ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಅದರಲ್ಲೂ ಈ ಸಂದರ್ಭದಲ್ಲಿ ಅಂದರೆ ಬೇಸಿಗೆಯ ಸಂದರ್ಭದಲ್ಲಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದು ಹಲವರ ಚಿಂತೆ. ಇದಕ್ಕೆ ನಾವು ಈಗಾಗಲೇ ಹಲವು ಸಲಹೆಗಳನ್ನು ನೀಡಿದ್ದೇವೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಓದಬಹುದು. ಆದರೆ ನಿಮ್ಮ ತ್ವಚೆಯನ್ನು ಹಾಳು ಮಾಡುವುದು ಕೇವಲ ಸೂರ್ಯ ಅಥವಾ ವಾತಾವರಣದ ಏರುಪೇರಲ್ಲ. ನಿಮ್ಮ ದೈನಂದಿನ ಅಭ್ಯಾಸಗಳೂ ಇದಕ್ಕೆ ಕಾರಣವಾಗುತ್ತವೆ. ಅವು ಏನೇನು? ನಮ್ಮ ಯಾವೆಲ್ಲಾ ಅಭ್ಯಾಸಗಳ ಬಗ್ಗೆ ನಾವು ಜಾಗೃತರಾಗಿರಬೇಕು? ಯಾವ ಅಭ್ಯಾಸಗಳನ್ನು ಮಾರ್ಪಾಡು ಮಾಡಿಕೊಳ್ಳಬೇಕು? ಉತ್ತಮವಾದ ಚರ್ಮದ ಆರೋಗ್ಯವನ್ನು ಗಳಿಸಿ ಅದನ್ನು ಕಾಪಾಡಿಕೊಳ್ಳುವುದು ಹೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಚರ್ಮದ ಆರೋಗ್ಯಕ್ಕೆ ಹಾನಿ ಮಾಡುವ ಅಭ್ಯಾಸಗಳಿವು:

ಧೂಮಪಾನ: ಇದರಿಂದ ಹೃದಯ, ಮೂಳೆ, ಸಂತಾನೋತ್ಪತ್ತಿ ಮತ್ತು ದೇಹದ ಇತರ ಅಂಶಗಳ ಮೇಲೆ ಹಾನಿಕಾರಕ ಪರಿಣಾಮಗಳು ಬೀರುತ್ತವೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಚರ್ಮದ ಆರೋಗ್ಯಕ್ಕೂ ಇದು ಹಾನಿ ಮಾಡುತ್ತದೆ ಎಂದು ನಿಮಗೆ ಗೊತ್ತೇ? ಹೌದು, ಸಿಗರೇಟು ಮತ್ತು ಬೀಡಿಗಳು ನಿಮ್ಮ ಚರ್ಮದ ಆರೋಗ್ಯಕ್ಕೆ ದೀರ್ಘಕಾಲಿಕವಾಗಿ ದೊಡ್ಡ ಹಾನಿ ಮಾಡುತ್ತವೆ. ಹೀಗಾಗಿ ನೀವು ಉತ್ತಮ ತ್ವಚೆಯನ್ನು ಕಾಪಾಡಿಕೊಳ್ಳುವ ಬಯಕೆ ಹೊಂದಿದ್ದರೆ ಅವುಗಳಿಂದ ದೂರವಿರಿ.

ಪ್ರಖರ ಸೂರ್ಯನ ಕಿರಣಗಳಿಂದ ದೂರವಿರಿ: ಬೇಸಿಗೆಯೇ ಇರಲಿ ಅಥವಾ ಚಳಿಗಾಲವಾಗಿರಲಿ ಪ್ರಖರ ಸೂರ್ಯನ ಕಿರಣಗಳಿಂದ ಹಾಗೂ ಯುವಿ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳಬೇಕು. ಸಾಧ್ಯವಾದಷ್ಟು ಅಂತಹ ಕಿರಣಗಳಿಗೆ ಒಡ್ಡಿಕೊಳ್ಳುವುದುನ್ನು ತಡೆಯಿರಿ.

ಹೈಡ್ರೇಟೆಡ್ ಆಗಿರದೆ ಇರುವುದು: ನಿರ್ಜಲೀಕರಣವು ಮಲಬದ್ಧತೆ, ವಾಕರಿಕೆ, ತಲೆನೋವು, ಆಯಾಸ ಇತ್ಯಾದಿಗಳಂತಹ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ನಿಮ್ಮ ಚರ್ಮದ ಆರೋಗ್ಯಕ್ಕೆ ದೊಡ್ಡ ಮಟ್ಟದ ಹಾನಿ ಉಂಟುಮಾಡುತ್ತದೆ. ನೀರು ಕುಡಿದು ಹೈಡ್ರೇಟೆಡ್ ಆಗಿರದಿದ್ದರೆ ನಿಮ್ಮ ಚರ್ಮ ಒಣಗಿದಂತೆ ಕಾಣಬಹುದು ಅಥವಾ ಒಡೆಯಬಹುದು.

ರಾತ್ರಿಯ ಸಮಯದಲ್ಲಿ ಚರ್ಮದ ಆರೈಕೆ ಮಾಡುವ ಕೆಲವು ವಿಧಾನಗಳಿವೆ. ಅವುಗಳನ್ನು ಅನುಸರಿಸಿದರೆ ಹಗಲಿನ ಸಮಯದಲ್ಲಿ ಚರ್ಮವು ಕಾಂತಿಯಿಂದ ಹೊಳೆಯುವಂತೆ ಮಾಡಬಹುದು.

ಇನ್ನಷ್ಟು ಆರೋಗ್ಯದ ಕುರಿತ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

(ವಿ.ಸೂ.: ಈ ಬರಹವನ್ನು ಮಾಹಿತಿಯ ಉದ್ದೇಶದಿಂದ ನೀಡಲಾಗಿದೆ. ಅನುಸರಿಸುವ ಮುನ್ನ ಸೂಕ್ತ ತಜ್ಞರ ಸಲಹೆ ಪಡೆಯಿರಿ)

ಇದನ್ನೂ ಓದಿ: Skin Care Tips: ಬೇಸಿಗೆಯಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

Skin care: ಒತ್ತಡದಿಂದ ಮುಖ ಕಳೆಗುಂದಿದೆಯೇ? ಚರ್ಮದ ಆರೋಗ್ಯಕ್ಕೆ ಇಲ್ಲಿವೆ ಸಿಂಪಲ್ ಟಿಪ್ಸ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್