ಆ್ಯಂಟಿಆಕ್ಸಿಡೆಂಟ್ಗಳು ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯಕಾರಿ. ಪ್ರಸ್ತುತದಲ್ಲಿ ಹುಡುಗಿಯರು ಹೆಚ್ಚು ತೆಳ್ಳಗಾಗಿರಲು ಇಷ್ಟಪಡುತ್ತಾರೆ. ಸ್ಲಿಮ್ಆಗಿ ಫಿಟ್ನೆಸ್ ಕಾಪಾಡಿಕೊಂಡು ಹೋಗಲು ಹಲವು ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ. ದೇಹದಲ್ಲಿನ ಕ್ಯಾಲೊರಿ ಹಾಗೂ ಕೊಬ್ಬನ್ನು ಕರಗಿಸುವ ಮೂಲಕ ದೇಹದಲ್ಲಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಗ್ರೀನ್ ಟೀ
ಗ್ರೀನ್ ಟೀ ದೇಹದ ತೂಕ ಇಳಿಸಿಕೊಳ್ಳಲು ಅತ್ಯಂತ ಒಳ್ಳೆಯದು. ಹಸಿರು ಚಹದಲ್ಲಿ ಕ್ಯಾಟೆಚಿನ್ಸ್ ಎಂಬ ಆರೋಗ್ಯಕರ ಸಂಯುಕ್ತಗಳಿರುತ್ತದೆ. ಇವು ದೇಹದ ತೂಕ ನಷ್ಟಕ್ಕೆ ಸಹಾಯ ಮಾಡುತ್ತವೆ. ಇದು ಚಯಾಪಚಯವನ್ನು ಸುಧಾರಿಸುತ್ತದೆ. ಗ್ರೀನ್ ಟೀ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯಕವಾಗಿದೆ. ಹಾಗಾಗಿ ಗ್ರೀನ್ ಟೀ ಸೇವನೆ ಆರೋಗ್ಯ ಪ್ರಯೋಜನಕಾರಿ.
ತರಕಾರಿ ಜ್ಯೂಸ್
ತರಕಾರಿಗಳಿಂದ ತಯಾರಿಸಿದ ಜ್ಯೂಸ್ ಫೈಬರ್ ಸಮೃದ್ಧವಾಗಿದೆ. ಇದು ನಿಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಬಿಟ್ರೂಟ್, ಕ್ಯಾರೆಟ್, ಟೊಮ್ಯಾಟೊ ತರಕಾರಿಗಳ ಜ್ಯೂಸ್ ಮಡಿ ಕುಡಿಯುವ ಮೂಲಕ ನಿಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದಾಗಿದೆ. ಇದು ನಿಮ್ಮ ದೇಹಕ್ಕೆ ಖನಿಜಗಳು ಮತ್ತು ವಿಟಮಿನ್ ಒದಗಿಸುತ್ತದೆ.
ಬೆರಿ ಹಣ್ಣುಗಳು
ಹಣ್ಣುಗಳಲ್ಲಿ ಕಾರ್ಬೊಹೈಡ್ರೇಟ್, ಫೈಬರ್ ಮತ್ತು ವಿಟಮಿನ್ ಸಿ ಮತ್ತು ಕೆ ಅಂಶವಿರುತ್ತದೆ. ಇದರಲ್ಲಿ ಕ್ಯಾಲೊರಿ ಅಂಶ ಕೂಡಾ ಕಡಿಮೆ. ದೇಹದಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಕಡಿಮೆ ಮಾಡಲು ಇದು ಸಹಾಯಕವಾಗಿದೆ. ಮಧುಮೆಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೆರಿಗಣ್ಣುಗಳು ಸಹಾಯಕವಾಗಿದೆ.
ಇದನ್ನೂ ಓದಿ:
Health Tips: ನೀವು ಕೆಚಪ್ ಪ್ರಿಯರಾ?; ಅತಿಯಾಗಿ ಕೆಚಪ್ ಸೇವಿಸಿದರೆ ಆಗುವ 7 ಶಾಕಿಂಗ್ ಅಡ್ಡ ಪರಿಣಾಮಗಳಿವು!
Health Tips: ಹೃದಯಾಘಾತದಿಂದ ಪಾರಾಗಲು 10 ಮಾರ್ಗಗಳು; ಆಯುರ್ವೇದ ತಜ್ಞರ ಸಲಹೆ ಇಲ್ಲಿದೆ
(Health Tips These tips for weight loss check in kannada)