Health Tips: ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ 6 ಆರೋಗ್ಯಕರ ತರಕಾರಿಗಳು

| Updated By: shruti hegde

Updated on: Aug 23, 2021 | 1:22 PM

ಫೈಬರ್ ಮತ್ತು ಕ್ಯಾಲೊರಿ ಹೊಂದಿರುವ ತರಕಾರಿಗಳ ಅತಿಯಾದ ಸೇವನೆಯಿಂದ ತೂಕ ಹೆಚ್ಚಳವಾಗಬಹುದು. ಹಾಗಿರುವಾಗ ನಿಮ್ಮ ಡಯಟ್​ಗೆ ಹೊಂದುವ ಈ ತರಕಾರಿಗಳು ನಿಮ್ಮ ಆರೋಗ್ಯ ಸುರಕ್ಷತೆಯನ್ನು ಕಾಪಾಡುತ್ತದೆ.

Health Tips: ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ 6 ಆರೋಗ್ಯಕರ ತರಕಾರಿಗಳು
ಸಾಂದರ್ಭಿಕ ಚಿತ್ರ
Follow us on

ಅತ್ಯುತ್ತಮ ಆರೋಗ್ಯವನ್ನು ಪಡೆಯಲು ಪ್ರತಿನಿತ್ಯ ತರಕಾರಿಗಳನ್ನು ಸೇವಿಸುವುದು ಅತ್ಯಗತ್ಯ. ತರಕಾರಿಗಳು ಹೆಚ್ಚು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುತ್ತದೆ. ಪ್ರತಿಯೊಂದು ತರಕಾರಿಗಳಲ್ಲಿಯೂ ಸಹ ವಿವಿಧ ರೀತಿಯ ಪೋಷಕಾಂಶಗಳು ಕಂಡು ಬರುತ್ತವೆ. ಜತೆಗೆ ಖನಿಜಾಂಶದಿಂದ ಸಮೃದ್ಧವಾಗಿರುತ್ತದೆ. ಹೆಚ್ಚಿನ ಫೈಬರ್ ಮತ್ತು ಕ್ಯಾಲೊರಿ ಹೊಂದಿರುವ ತರಕಾರಿಗಳ ಅತಿಯಾದ ಸೇವನೆಯಿಂದ ತೂಕ ಹೆಚ್ಚಳವಾಗಬಹುದು. ಹಾಗಿರುವಾಗ ನಿಮ್ಮ ಡಯಟ್​ಗೆ ಹೊಂದುವ ಈ ತರಕಾರಿಗಳು ನಿಮ್ಮ ಆರೋಗ್ಯ ಸುರಕ್ಷತೆಯನ್ನು ಕಾಪಾಡುತ್ತದೆ.

ಪಾಲಾಕ್
ಆರೊಗ್ಯಕರ ಜೀವನಕ್ಕೆ ಹಸಿರು ಸೊಪ್ಪುಗಳು ಅಗ್ರಸ್ಥಾನದಲ್ಲಿದೆ. ಇದರಲ್ಲಿ ಪ್ರೋಟೀನ್, ಕಬ್ಬಿಣ, ಮೆಗ್ನೀಶಿಯಂ, ಪೊಟ್ಯಾಷಿಯಂ, ಫೋಲೇಟ್ ಮತ್ತು ಕ್ಯಾಲ್ಸಿಯಂ ಅಂಶಗಳಿರುತ್ತವೆ. ಸರಿಸುಮಾರು ಎಲ್ಲಾ ಪೋಷಕಾಂಶಗಳಿರುವ ಸೊಪ್ಪು ಇದಾಗಿದೆ. ವಿಟಮಿನ್ ಎ ಅಂಶ ಹೊಂದಿರುವ ಅತ್ಯುತ್ತಮ ಮೂಲವಾಗಿದೆ. ಇದು ದೃಷ್ಟಿ ಕಳೆದುಕೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಕೇವಲ 30 ಗ್ರಾಂ ಪಾಲಾಕ್ ಸೊಪ್ಪು ಸೆವನೆಯು ನಿಮ್ಮಲ್ಲಿ ಶೇ.56ರಷ್ಟು ವಿಟಮಿನ್ ಎ ಅಂಶವನ್ನು ಒದಗಿಸುತ್ತದೆ. ಪಾಲಾಕ್ಅನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್, ಟೈಪ್ 2 ಡಯಾಬಿಟಿಸ್, ಅಸ್ತಮಾ, ರಕ್ತದೊತ್ತಡದಂತಹ ಅಪಾಯವನ್ನು ತಡೆಗಟ್ಟಬಹುದಾಗಿದೆ. ಜತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಬ್ರೊಕೊಲಿ
ಇಂತಹ ತರಕಾರಿಗಳು ಕ್ಯಾನ್ಸರ್ ಮತ್ತು ಇತರ ದೀರ್ಘಕಾಲದ ಖಾಯಿಲೆಯಿಂದ ರಕ್ಷಿಸುತ್ತದೆ. ಇದಲ್ಲದೇ ಈ ತರಕಾರಿಯಲ್ಲಿ ವಿಟಮಿನ್ ಕೆ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಹಸಿಯಾದ ಬ್ರಿಕೊಲಿ ಹಾಗೂ ಬೇಯಿಸಿದ ಬ್ರೊಕೊಲಿ ಎರಡೂ ವಿಧಾನದಲ್ಲಿ ಸೇವಿಸಬಹುದು. ಹಿತಮಿತವಾಗಿ ಬಳಸಿ ನಿಮ್ಮ ಆರೋಗ್ಯದ ಸುರಕ್ಷತೆಯನ್ನು ಕಾಯ್ದುಕೊಳ್ಳಿ.

ಬೆಳ್ಳುಳ್ಳಿ
ಬೆಳ್ಳುಳ್ಳಿ ಕೇವಲ ರುಚಿಗಷ್ಟೇ ಅಲ್ಲ ಆರೋಗ್ಯಕ್ಕೂ ಕೂಡಾ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ಹ್ರದಯ ಆರೋಗ್ಯವನ್ನು ಕಾಪಾಡಲು ಬೆಳ್ಳುಳ್ಳಿ ಸೇವನೆ ಸಹಾಯಕ. ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ಅನ್ನು ಕಡಿಮೆ ಮಾಡಿ ಆರೋಗ್ಯವನ್ನು ಕಾಪಾಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ತಾಮ್ರ, ಪೊಟ್ಯಾಷಿಯಂ, ರಂಜಕ, ಕಬ್ಬಿಣ ಮತ್ತು ವಿಟಮಿನ್ ಬಿ1 ಸಮೃದ್ಧವಾಗಿರುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು, ರಕ್ರಸ್ರಾವದ ಅಪಾಯವನ್ನು ತಡೆಗಟ್ಟಲು ಇದು ಸಹಾಯ ಮಾಡುತ್ತದೆ. ಆದರೆ ಹೆಚ್ಚಾಗಿ ಬೆಳ್ಳುಳ್ಳಿ ಸೇವನೆಗಿಂತ ಹಿತಮಿತವಾಗಿ ಸೇವಿಸಿ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಬಟಾಣಿ
ಹಸಿರು ಬಟಾಣಿಯಲ್ಲಿ ಹೆಚ್ಚಿನ ಪೋಷಕಾಂಶಗಳಿರುತ್ತದೆ. ಒಂದು ಕಪ್ ಬಟಾಣಿಯಲ್ಲಿ 9 ಗ್ರಾಂ ಪ್ರೋಟೀನ್, ವಿಟಮಿನ್ ಎ, ಸಿ ಮತ್ತೆ ಕೆ, ರಿಬೋಫ್ಲಾವಿನ್, ಥಯಾಮಿನ್, ನಿಯಾಮಿನ್ ಮತ್ತು ಫೋಲೇಟ್​ನಂತಹ ಪೋಷಕಾಂಶಗಳಿರುತ್ತದೆ. ಇದರಲ್ಲಿರುವ ಫೈಬರ್ ಅಂಶದಿಂದ ಮಲಬದ್ಧತೆ ಅಪಾಯವನ್ನು ಕಡಿಮೆ ಮಾಡುತ್ತದೆ, ನಿಮ್ಮ ಹ್ರದಯದ ಆರೋಗ್ಯವನ್ನು ರಕ್ಷಿಸಲು ಹಾಗೂ ಮಧುಮೇಹ ಅಪಾಯವನ್ನು ಕಡಿಮೆ ಮಾಡಲು ಬಟಾಣಿ ಸೇವನೆ ಸಹಾಯಕವಾಗಿದೆ.

ಸಿಹಿ ಆಲೂಗಡ್ಡೆ
ಸಿಹಿ ಆಲೂಗಡ್ಡೆಯಲ್ಲಿ ಪಿಷ್ಟ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಗುಣಗಳಿವೆ. ಸೇವಿಸಲೂ ಸಹ ರುಚಿ ಜತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಪ್ರೋಟೀನ್, ವಿಟಮಿನ್ ಸಿ, ವಿಟಮಿನ್ ಬಿ6, ಪೊಟ್ಯಾಷಿಯಂ ಮತ್ತು ಮ್ಯಾಂಗನೀಸ್ ಇರುತ್ತದೆ. ಸ್ತನ ಮತ್ತು ಶ್ವಾಸಕೋಶ ಕ್ಯಾನ್ಸರ್ ಸೇರಿದಂತೆ ಅನೇಕ ರೋಗದ ಅಪಾಯವನ್ನು ತಡೆಗಟ್ಟಲು ಸಹಾಯಕವಾಗಿದೆ.

ಇದನ್ನೂ ಓದಿ:

Ginger Powder: ಶುಂಠಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ

Health Tips: ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ವಿಧಾನಗಳನ್ನು ಅನುಸರಿಸಿ

(Health Tips These vegetables include your diets check in kannada)