Corona Vaccine: ಕೊರೊನಾ ಲಸಿಕೆ ಪಡೆಯುವ ಮೊದಲು ಮತ್ತು ನಂತರ ಪಾಲಿಸಬೇಕಾದ ಅಂಶಗಳೇನು? ಇಲ್ಲಿದೆ ವಿವರ

| Updated By: ganapathi bhat

Updated on: Jun 05, 2021 | 9:54 PM

ಕೊರೊನಾ ವಿರುದ್ಧದ ಲಸಿಕೆ ಪಡೆದ ಬಳಿಕ ಏನು ಮಾಡಬೇಕು? ಅಥವಾ ಲಸಿಕೆ ಪಡೆಯುವ ಮುನ್ನ ಏನು ಸಿದ್ಧತೆ ಮಾಡಿಕೊಳ್ಳಬೇಕು? ಇತ್ಯಾದಿ ಗೊಂದಲ ಈಗ ಜನರ ಮುಂದಿರುವುದು ಸಹಜ. ಈ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

Corona Vaccine: ಕೊರೊನಾ ಲಸಿಕೆ ಪಡೆಯುವ ಮೊದಲು ಮತ್ತು ನಂತರ ಪಾಲಿಸಬೇಕಾದ ಅಂಶಗಳೇನು? ಇಲ್ಲಿದೆ ವಿವರ
ಕೊರೊನಾ ಲಸಿಕೆ
Follow us on

ಕೊರೊನಾ ಎರಡನೇ ಅಲೆ ಆರಂಭವಾಗುತ್ತಿದ್ದಂತೆ ಭಾರತದಲ್ಲಿ ಲಸಿಕೆ ಬೇಡಿಕೆಯೂ ಅಧಿಕವಾಗಿದೆ. ಲಸಿಕಾ ಅಭಿಯಾನವೂ ಚುರುಕಾಗಿದೆ. ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಯನ್ನು ಭಾರತದಾಂದ್ಯಂತ ನೀಡಲಾಗುತ್ತಿದೆ. ಕೊರೊನಾ ಲಸಿಕೆ ಪಡೆದುಕೊಂಡವರಿಗೆ ಕೊವಿಡ್ ಕಾಣಿಸಿಕೊಂಡಾಗ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಬಹಳ ಕಡಿಮೆ ಎಂದು ಈಗಾಗಲೇ ಹಲವು ಮಾಹಿತಿ ಲಭ್ಯವಾಗಿದೆ. 60 ವರ್ಷ ಮೇಲ್ಪಟ್ಟವರು, 40 ವರ್ಷ ದಾಟಿದವರು ಹಾಗೂ 18 ವರ್ಷ ಮೇಲ್ಪಟ್ಟ ಮುಂಚೂಣಿಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ.

ಕೊರೊನಾ ಲಸಿಕೆಯಿಂದ ಸಾಮಾನ್ಯ ಅಡ್ಡಪರಿಣಾಮಗಳು ಕಂಡುಬರಬಹುದು. ಲಸಿಕೆ ಪಡೆದುಕೊಂಡ ಬಳಿಕ ಜ್ವರ ಬರುವುದು, ಕೈ ನೋವು ಇತ್ಯಾದಿ. ಆದರೆ, ಲಸಿಕೆಯಿಂದ ಯಾವುದೇ ಗಂಭೀರ ಅಡ್ಡಪರಿಣಾಮಗಳು ಇಲ್ಲ ಎಂದು ತಿಳಿದುಬಂದಿದೆ. ಕೊರೊನಾ ವಿರುದ್ಧದ ಲಸಿಕೆ ಪಡೆದ ಬಳಿಕ ಏನು ಮಾಡಬೇಕು? ಅಥವಾ ಲಸಿಕೆ ಪಡೆಯುವ ಮುನ್ನ ಏನು ಸಿದ್ಧತೆ ಮಾಡಿಕೊಳ್ಳಬೇಕು? ಇತ್ಯಾದಿ ಗೊಂದಲ ಈಗ ಜನರ ಮುಂದಿರುವುದು ಸಹಜ. ಈ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಲಸಿಕೆ ಪಡೆಯುವ ಮುನ್ನ ಈ ವಿಚಾರಗಳು ಗಮನದಲ್ಲಿ ಇರಲಿ:
– ಕೊವಿಡ್-19 ಲಸಿಕೆಯನ್ನು ಪಡೆಯಲು ಖಾಲಿ ಹೊಟ್ಟೆಯಲ್ಲಿ ಬರಬೇಕು ಎಂದಿಲ್ಲ. ಅದಕ್ಕೂ ಮುಖ್ಯವಾಗಿ, ಖಾಲಿ ಹೊಟ್ಟೆಯಲ್ಲಿ ಲಸಿಕೆ ಪಡೆಯಲು ಬರಬಾರದು. ಆರೋಗ್ಯಪೂರ್ಣ ಆಹಾರ ಸೇವಿಸಿಯೇ ಲಸಿಕೆ ಪಡೆದುಕೊಳ್ಳುವುದು ಉತ್ತಮ.
– ಸರಿಯಾಗಿ ನೀರು ಕುಡಿಯಿರಿ. ಲಸಿಕೆ ಪಡೆದುಕೊಳ್ಳುವ ಮೊದಲಾಗಿ ಸೂಕ್ತ ಪ್ರಮಾಣದಲ್ಲಿ ನೀರು ಕುಡಿಯಿರಿ.
– ಲಸಿಕೆ ಪಡೆಯುವ ಮೊದಲು ಅಥವಾ ನಂತರ ಮದ್ಯಪಾನ ಮಾಡುವುದು ಒಳ್ಳೆಯದಲ್ಲ. ಮದ್ಯಪಾನ ಸೇವನೆಯು ನಮ್ಮ ದೇಹವನ್ನು ನಿರ್ಜಲೀಕರಣ (ಡಿಹೈಡ್ರೇಟೆಡ್) ಮಾಡುತ್ತದೆ. ಹಾಗಾಗಿ, ಲಸಿಕೆ ಪಡೆಯುವ ಸಂದರ್ಭ ಮದ್ಯಪಾನ ಮಾಡಿರುವುದು ಸೂಕ್ತವಲ್ಲ.
– ಲಸಿಕೆ ಪಡೆಯುವ ವೇಳೆ ಉತ್ತಮ ಜೀವನಶೈಲಿ ರೂಢಿಸಿಕೊಂಡು, ಮಾನಸಿಕವಾಗಿ ನೆಮ್ಮದಿಯಿಂದ ಇರಿ. ಸರಿಯಾದ ಪ್ರಮಾಣದ ನಿದ್ದೆ ಮಾಡಿ.

ಲಸಿಕೆ ಪಡೆದುಕೊಂಡ ಬಳಿಕ ಕೈಗೊಳ್ಳಬೇಕಾದ ಕ್ರಮಗಳು:
ಲಸಿಕೆ ಪಡೆದುಕೊಂಡ ಕೂಡಲೇ ಎದ್ದು ಹೊರಡಬೇಡಿ. ಲಸಿಕೆ ಪಡೆದುಕೊಂಡ ಬಳಿಕ, 15-30 ನಿಮಿಷಗಳ ವರೆಗೆ ಕುಳಿತುಕೊಂಡು ವಿಶ್ರಾಂತಿ ಪಡೆಯಿರಿ. ತಕ್ಷಣಕ್ಕೆ ಏನಾದರೂ ಆರೋಗ್ಯ ವ್ಯತ್ಯಾಸ ಕಂಡುಬಂದರೆ ವೈದ್ಯರಿಗೆ ಮಾಹಿತಿ ನೀಡಿ. ವಾಂತಿ, ಸುಸ್ತು ಅಥವಾ ಯಾವುದೇ ಅಲರ್ಜಿಯಂಥ ಲಕ್ಷಣಗಳು ಕಂಡುಬಂದರೆ ಮಾಹಿತಿ ನೀಡಿ.

ಸಾಮಾನ್ಯ ಅಡ್ಡಪರಿಣಾಮಗಳು:
ಲಸಿಕೆ ಪಡೆದುಕೊಂಡ ಮೇಲೆ ಈ ರೀತಿಯ ಪರಿಣಾಮಗಳು ದೇಹದಲ್ಲಿ ಕಂಡುಬರಬಹುದು. ಅದಕ್ಕೆ ಮೊದಲೇ ಮಾನಸಿಕ ಸಿದ್ಧತೆ ಮಾಡಿಕೊಂಡಿರಿ. ಮತ್ತು ಈ ಅಡ್ಡಪರಿಣಾಮಗಳು 1 ಅಥವಾ 2 ದಿನದೊಳಗೆ ಗುಣವಾಗುತ್ತದೆ.

– ಚುಚ್ಚುಮದ್ದು ನೀಡಿದ ಸ್ಥಳದಲ್ಲಿ ನೋವು
– ಸುಸ್ತು
– ತಲೆನೋವು
– ಮಾಂಸಖಂಡ ಅಥವಾ ಗಂಟುನೋವು
– ಸರಿಯಾಗಿ ನಿದ್ದೆ ಬಾರದಿರುವುದು
– ಭೇದಿ

ಈ ಸಾಮಾನ್ಯ ಅಡ್ಡಪರಿಣಾಮಗಳಿಗೆ ಏನು ಮಾಡಬೇಕು?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ಸಾಮಾನ್ಯ ಅಡ್ಡಪರಿಣಾಮಗಳಾದ ಭುಜನೋವು, ಸುಸ್ತು, ಗಂಟು ನೋವು ಅಥವಾ ಸಣ್ಣಗೆ ಜ್ವರ ಕಂಡುಬಂದರೆ ಪ್ಯಾರಾಸಿಟಮಾಲ್ ಔಷಧ ಸೇವಿಸುವುದು ಉತ್ತಮ.

ಇದನ್ನೂ ಓದಿ: Steroids in Covid: ಸ್ಟಿರಾಯ್ಡ್ ಎಂದರೇನು? ಕೊರೊನಾ ಸೋಂಕು ಚಿಕಿತ್ಸೆಯಲ್ಲಿ ಈ ಔಷಧವನ್ನು ಹೇಗೆ ಬಳಸಲಾಗುತ್ತದೆ?

ಸ್ಟಿರಾಯ್ಡ್​​​ ನೀಡುತ್ತಿರುವುದರಿಂದ ಬ್ಲ್ಯಾಕ್​​ ಫಂಗಸ್ ಹೆಚ್ಚಳ: ಆರೋಗ್ಯ ಸಚಿವ ಡಾ. ಸುಧಾಕರ್

Published On - 9:48 pm, Sat, 5 June 21