ನವಜಾತ ಶಿಶುವಿನ ಆರೈಕೆಯು ಪಾಲನೆಯ ಪ್ರಮುಖ ಅಂಶವಾಗಿದೆ. ಆದರೆ ಭಾರತದಲ್ಲಿ ಹಲವಾರು ಮಿಥ್ಯಗಳು ಮತ್ತು ತಪ್ಪು ಗ್ರಹಿಕೆಗಳು ಅದರ ಸುತ್ತಲೂ ಇವೆ. ನವಜಾತ ಶಿಶುಗಳ ಅತ್ಯುತ್ತಮವಾದ ಆರೈಕೆಯನ್ನು ಮಾಡಲು ಈ ತಪ್ಪುಗ್ರಹಿಕೆಗಳನ್ನು ಹೊರಹಾಕುವುದು ಮುಖ್ಯವಾಗಿದೆ. ಹುಟ್ಟಿನಿಂದ ಒಂದು ವರ್ಷದವರೆಗೆ ಮಗುವಿನ ಆರೋಗ್ಯಕ್ಕೆ ನಿರ್ಣಾಯಾಕ ಅವಧಿಯಾಗಿರುವುದರಿಂದ ಪ್ರತಿ ಹಂತದಲ್ಲೂ ಮಗುವಿಗೆ ಆರೋಗ್ಯಕರ ಮತ್ತು ಪೌಷ್ಠಿಕ ಆಹಾರಗಳನ್ನು ನೀಡುವುದು ಮುಖ್ಯವಾಗಿದೆ. ಈ ಹಂತದಲ್ಲಿ ಆಹಾರಗಳ ಸರಿಯಾದ ಕ್ರಮಗಳನ್ನು ಪಾಲಿಸುವುದು ಮುಖ್ಯ ಎಂದು ಸ್ತ್ರೀರೋಗ ತಜ್ಞೆ ಹಾಗೂ ಬಂಜೆತನ ತಜ್ಞೆ ಡಾ. ರಚನಾ ವರ್ಮಾ ಹೇಳುತ್ತಾರೆ.
ಮಿಥ್ಯ: ಹುಟ್ಟಿದ ತಕ್ಷಣ ನವಜಾತ ಶಿಶುವನ್ನು ಸ್ನಾನ ಮಾಡಿಸಬೇಕು
ಸತ್ಯ: ಜನನದ ನಂತರ ತಕ್ಷಣವೇ ನವಜಾತ ಶಿಶುವನ್ನು ಸ್ನಾನ ಮಾಡಿಸುವುದು ಅನಿವಾರ್ಯವಲ್ಲ. ವಾಸ್ತವವಾಗಿ ಮಗುವಿನ ಮೊದಲ ಸ್ನಾನವನ್ನು ಕೆಲವು ದಿನಗಳವರೆಗೆ ವಿಳಂಬಗೊಳಿಸುವುದು ಮಗುವಿನ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಮತ್ತು ಒಣಚರ್ಮವನ್ನು ತಡೆಯಲು ಸಹಾಯ ಮಾಡುತ್ತದೆ.
ಮಿಥ್ಯ: ನವಜಾತ ಶಿಶುಗಳ ಕಣ್ಣಿಗೆ ಕಾಜಲ್ ಅನ್ವಯಿಸಬೇಕು
ಸತ್ಯ: ಮಗುವಿನ ಕಣ್ಣಿಗೆ ಕಾಜಲ್ ಹಚ್ಚಲು ಶಿಫಾರಸ್ಸು ಮಾಡಲಾಗುವುದಿಲ್ಲ. ಏಕೆಂದರೆ ಇದು ಕಣ್ಣಿನ ಸೋಂಕುಗಳು ಮತ್ತು ಇತರ ತೊಡಕುಗಳಿಗೆ ಕಾರಣವಾಗಬುದು.
ಮಿಥ್ಯ: ಸಾಸಿವೆ ಎಣ್ಣೆಯಿಂದ ಮಗುವಿಗೆ ಮಸಾಜ್ ಮಾಡಬೇಕು.
ಸತ್ಯ: ಮಜಾಜ್ ಮಗುವಿಗೆ ಪ್ರಯೋಜನಕಾರಿಯಾಗಿದ್ದರೂ, ಸಾಸಿವೆ ಎಣ್ಣೆಯನ್ನು ಬಳಸುವುದನ್ನು ಶಿಫಾರಸು ಮಾಡುವುದಿಲ್ಲ ಏಕೆಂದರೆ ಇದು ಚರ್ಮದ ಕಿರಿಕಿರಿ ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡಬಹುದು.
ಮಿಥ್ಯ: ತಾಯಿಗೆ ಶೀತ ಅಥವಾ ಜ್ವರ ಇದ್ದರೆ ನೀವು ಮಗುವಿಗೆ ಹಾಲುಣಿಸುವುದನ್ನು ತಪ್ಪಿಸಬೇಕು
ಸತ್ಯ: ಎದೆ ಹಾಲುಣಿಸುವುದು ಸುರಕ್ಷಿತವಾಗಿದೆ ಮತ್ತು ತಾಯಿಗೆ ಶೀತ, ಜ್ವರ ಇದ್ದರೂ ಮಗುವಿಗೆ ಹಾಲುಣಿಸಬಹುದು ಎಂದು ಶಿಫಾರಸು ಮಾಡಲಾಗುತ್ತದೆ. ವಾಸ್ತವವಾಗಿ ಎದೆ ಹಾಲು ನಿಮ್ಮ ಮಗುವನ್ನು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುವ ಪ್ರತಿಕಾಯಕವನ್ನು ಹೊಂದಿರುತ್ತದೆ.
ಮಿಥ್ಯ: ಮೊದಲ ಕೆಲವು ತಿಂಗಳುಗಳು ನಿಮ್ಮ ಮಗುವನ್ನು ಹೊರಗೆ ಕರೆದುಕೊಂಡು ಹೋಗುವುದನ್ನು ತಪ್ಪಿಸಬೇಕು.
ಇದನ್ನೂ ಓದಿ: Health Tips : ಸ್ಟಾರ್ ಹಣ್ಣಿನಿಂದ ಆರೋಗ್ಯ ವೃದ್ಧಿ
ಮಿಥ್ಯ: ನಿಮ್ಮ ಮಗುವಿಗೆ ನೀವು ಕಟ್ಟುನಿಟ್ಟಾದ ವೇಳಾಪಟ್ಟಿಯಲ್ಲಿ ಆಹಾರವನ್ನು ನೀಡಬೇಕು.
ಸತ್ಯ: ನವಜಾತ ಶಿಶುಗಳಿಗೆ ಬೇಡಿಕೆಯ ಮೇರೆಗೆ ಆಹಾರವನ್ನು ಶಿಫಾರಸ್ಸು ಮಾಡಲಾಗುತ್ತದೆ. ಏಕೆಂದರೆ ಇದು ಸಾಕಷ್ಟು ಪೋಷಕಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ.
ಮಿಥ್ಯ: ಡೈಪರ್‌ಗಳು ತುರಿಕೆಗೆ ಕಾರಣವಾಗುವುದರಿಂದ ಡೈಪರ್‌ಗಳನ್ನು ಬಳಸುವುದನ್ನು ತಪ್ಪಿಸಬೇಕು.
ಸತ್ಯ: ನವಜಾತ ಶಿಶುಗಳಿಗೆ ಡೈಪರ್ ಸುರಕ್ಷಿತವಾಗಿದೆ ಮತ್ತು ಅನುಕೂಲಕರವಾಗಿದೆ, ಆದರೆ ಅವುಗಳನ್ನು ಆಗಾಗ ಬದಲಾಯಿಸುತ್ತಿರಬೇಕು. ಹಾಗೂ ಡೈಪರ್ ಕ್ರೀಮ್‌ಗಳನ್ನು ಕೂಡ ಬಳಸಬೇಕು.
ಮಿಥ್ಯ: ಮೂಗು ಮತ್ತು ಕಿವಿಗೆ ಎಣ್ಣೆಯನ್ನು ಹಾಕುವ ಮೂಲಕ ಸೋಂಕುಗಳನ್ನು ತಡೆಗಟ್ಟಬಹುದು ಎಂದು ಅನೇಕರು ನಂಬುತ್ತಾರೆ.
ಸತ್ಯ: ಈ ಅಭ್ಯಾಸವು ತುಂಬಾ ಅಸುರಕ್ಷಿತವಾಗಿದೆ ಮತ್ತು ತೈಲವು ಶ್ವಾಸಕೋಶಕ್ಕೆ ಪ್ರವೇಶಿಸಿದರೆ ಸೋಂಕುಗಳು ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು.
Published On - 5:54 pm, Mon, 20 March 23