ಪ್ರತಿದಿನ ಸೇವಿಸುವ ಈ 5 ಆಹಾರಗಳು ಹೃದಯಾಘಾತಕ್ಕೆ ಕಾರಣವಾಗಬಹುದು

ಮನುಷ್ಯ ಆರೋಗ್ಯವಾಗಿರಬೇಕು ಎಂದರೆ ಮೊದಲು ಅವನ ಹೃದಯ ಚೆನ್ನಾಗಿರಬೇಕು. ಅದು ವಿಫಲವಾದರೆ, ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಸಮಸ್ಯೆಗಳು ಕಂಡುಬರುತ್ತದೆ. ಇದು ಜೀವಕ್ಕೆ ಅಪಾಯತರಬಹುದು. ಆದ್ದರಿಂದ, ಎಲ್ಲಾ ಸಮಯದಲ್ಲೂ ನಮ್ಮ ಹೃದಯ ಆರೋಗ್ಯವಾಗಿರುವುದು ಬಹಳ ಅವಶ್ಯಕ. ಇದಕ್ಕಾಗಿ ನಾವು ಸೇವಿಸುವ ಆಹಾರವು ಮಹತ್ವದ ಪಾತ್ರ ವಹಿಸುತ್ತದೆ. ಹಾಗಾದರೆ ನಾವು ಯಾವ ರೀತಿಯ ಆಹಾರಗಳ ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಪ್ರತಿದಿನ ಸೇವಿಸುವ ಈ 5 ಆಹಾರಗಳು ಹೃದಯಾಘಾತಕ್ಕೆ ಕಾರಣವಾಗಬಹುದು
ಹೃದಯಾಘಾತಕ್ಕೆ ಕಾರಣವಾಗುವ ಆಹಾರಗಳು

Updated on: Jul 04, 2025 | 5:51 PM

ಆರೋಗ್ಯ (Health) ಕಾಪಾಡುವಲ್ಲಿ ಆಹಾರವು ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಹೇಳಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ ಇದು ಎಲ್ಲರಿಗೂ ತಿಳಿದ ವಿಚಾರ. ನಾವು ಸೇವಿಸುವ ಆಹಾರದ ಮೂಲಕವೇ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲಾಗುತ್ತದೆ. ಅದಕ್ಕಾಗಿಯೇ ನಾವು ಸೇವನೆ ಮಾಡುವಂತಹ ಆಹಾರ ಸರಿಯಾಗಿರಬೇಕಾಗುತ್ತದೆ. ಆದರೆ ಆರೋಗ್ಯವಾಗಿರಲು ಅದರಲ್ಲಿಯೂ ಹೃದಯ (Heart) ಸಂಬಂಧಿ ಕಾಯಿಲೆಗಳು ಬರದಂತೆ ತಡೆಯಲು ಉತ್ತಮ ಆಹಾರ ಸೇವಿಸುವಷ್ಟೇ ಅನಾರೋಗ್ಯಕರ ಆಹಾರದಿಂದ ದೂರವಿರುವುದು ಸಹ ಅಷ್ಟೇ ಮುಖ್ಯವಾಗುತ್ತದೆ. ಅದಕ್ಕಾಗಿಯೇ ಹೃದಯದ ಆರೋಗ್ಯಕ್ಕೆ ಹಾನಿ ಮಾಡುವ ಕೆಲವು ಆಹಾರಗಳಿಂದ ದೂರವಿರುವುದು ಎಷ್ಟು ಪ್ರಯೋಜನಕಾರಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ದೇಹಕ್ಕೆ ಅಗತ್ಯವಿರದಂತಹ ಆಹಾರವನ್ನು ಸೇವಿಸಿ ಹೃದಯ ಕೆಲಸ ಮಾಡುವುದನ್ನು ಬೇಗ ನಿಲ್ಲಿಸುತ್ತದೆ? ಹಾಗಾದರೆ ನಾವು ಯಾವ ರೀತಿಯ ಆಹಾರಗಳ ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಬೇಕಿಂಗ್ ಮಾಡಿದ ಆಹಾರಗಳು

ಕುಕೀಸ್, ಕೇಕ್ ಮತ್ತು ಮಫಿನ್‌ಗಳು ತಿನ್ನಲು ತುಂಬಾ ರುಚಿಯಾಗಿರುತ್ತವೆ. ಆದರೆ ಅವುಗಳಲ್ಲಿ ಬಹಳಷ್ಟು ಸಕ್ಕರೆ ಅಂಶ ಇರುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಇವುಗಳನ್ನು ಸೇವಿಸುವುದರಿಂದ ಟ್ರೈಗ್ಲಿಸರೈಡ್ ಮಟ್ಟ ಹೆಚ್ಚಾಗುತ್ತದೆ, ಇದು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು. ಜೊತೆಗೆ ರಕ್ತದಲ್ಲಿನ ಸಕ್ಕರೆ ಹೆಚ್ಚಾಗಲು ಪ್ರಮುಖ ಕಾರಣವಾಗಬಹುದು. ಹಾಗಾಗಿ ಇಂತಹ ಆಹಾರಗಳ ಸೇವನೆ ಮಾಡುವ ಬದಲು, ಸಕ್ಕರೆ ಇಲ್ಲದೆಯೇ, ಕಡಿಮೆ ಎಣ್ಣೆ ಬಳಸಿ, ಗೋಧಿ ಹಿಟ್ಟಿನಿಂದ ಬೇಯಿಸಿದ ಆಹಾರವನ್ನು ಸೇವನೆ ಮಾಡಬಹುದು.

ಸೋಡಾ

ನಾವು ಸೋಡಾದಂತಹ ಪಾನೀಯಗಳನ್ನು ಕುಡಿಯುತ್ತೇವೆ. ಆದರೆ ಈ ಪಾನೀಯಗಳಲ್ಲಿ ಸಕ್ಕರೆ ಅಂಶ ಇರುತ್ತದೆ ಎಂದು ಎಷ್ಟು ಜನರಿಗೆ ತಿಳಿದಿದೆ? ಇವುಗಳನ್ನು ಕುಡಿಯುವುದರಿಂದ ತಾತ್ಕಾಲಿಕವಾಗಿ ಸ್ವಲ್ಪ ನಿರಾಳವಾಗಬಹುದು, ಆದರೆ ಅವು ತೂಕ ಹೆಚ್ಚಾಗುವುದು, ಟೈಪ್ 2 ಮಧುಮೇಹ, ರಕ್ತದೊತ್ತಡ ಹೆಚ್ಚಾಗುವುದು ಮತ್ತು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇವುಗಳ ಜೊತೆಗೆ, ಡಯಟ್ ಪಾನೀಯಗಳು ಹೃದಯದ ಆರೋಗ್ಯಕ್ಕೆ ಹಾನಿ ಮಾಡುವ ಗುಣಗಳನ್ನು ಸಹ ಹೊಂದಿವೆ. ಆದ್ದರಿಂದ, ಅವುಗಳನ್ನು ಕುಡಿಯದಿರುವುದು ಉತ್ತಮ. ಬದಲಾಗಿ, ಕಾರ್ಬೊನೇಟೆಡ್ ನೀರನ್ನು ಕುಡಿಯುವುದು ಒಳ್ಳೆಯದು.

ಇದನ್ನೂ ಓದಿ
ಅಬ್ಬಬ್ಬಾ... ಟೊಮೇಟೊ ತಿನ್ನೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಕೊಲೆಸ್ಟ್ರಾಲ್ ಮಂಜಿನಂತೆ ಕರಗಲು ಈ ಹಣ್ಣಿನ ಬೀಜಗಳನ್ನು ಸೇವನೆ ಮಾಡಿ
ಈ ಹಣ್ಣಿನ ಎಲೆ ಸೇವಿಸಿದ್ರೆ ಶುಗರ್ ಲೆವೆಲ್ ಹೆಚ್ಚಾಗುವುದೇ ಇಲ್ಲ
ಚರ್ಮದ ಸಮಸ್ಯೆಗೆ ವೈದ್ಯರು ನೀಡಿರುವ ಈ ಸಲಹೆ ಟ್ರೈ ಮಾಡಿ

ಕೆಂಪು ಮಾಂಸ

ಗೋಮಾಂಸ, ಕುರಿ ಮತ್ತು ಹಂದಿಮಾಂಸದಂತಹ ಆಹಾರಗಳನ್ನು ಸೇವಿಸುವುದರಿಂದ ಹೃದಯ ಸಮಸ್ಯೆಗಳು ಮತ್ತು ಮಧುಮೇಹದಂತಹ ಸಮಸ್ಯೆಗಳು ಉಂಟಾಗಬಹುದು. ಇದಕ್ಕೆ ಕಾರಣ ಅವುಗಳಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಅಂಶ ಹೆಚ್ಚಾಗಿರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಜೊತೆಗೆ ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಈ ಸಮಸ್ಯೆಗಳನ್ನು ದೂರವಿಡಲು, ಕೆಂಪು ಮಾಂಸದ ಸೇವನೆಯನ್ನು ಕಡಿಮೆ ಮಾಡಬೇಕು.

ಉಪ್ಪು, ಸಕ್ಕರೆ

ನಮ್ಮ ಆಹಾರದಲ್ಲಿ ಉಪ್ಪು ಮತ್ತು ಸಕ್ಕರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅವುಗಳನ್ನು ಪೂರ್ತಿಯಾಗಿ ತ್ಯಜಿಸುವುದು ತುಂಬಾ ಕಷ್ಟ. ಏಕೆಂದರೆ ಕೆಲವರು ಪ್ರೀತಿಯಿಂದ ಸೇವಿಸುವ ಜಂಕ್ ಫುಡ್‌ಗಳಲ್ಲಿ ಸಕ್ಕರೆ ಮತ್ತು ಉಪ್ಪು ವಿವಿಧ ರೂಪಗಳಲ್ಲಿ ಇರುತ್ತವೆ. ಇವುಗಳ ಜೊತೆಗೆ, ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳೂ ಇರುತ್ತವೆ. ಇವೆಲ್ಲವೂ ಹೃದಯದ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಮತ್ತು ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಅಪಾಯಗಳಿಗೆ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ಹೃದಯ ಆರೋಗ್ಯವಾಗಿರಬೇಕೆಂದರೆ, ಈ ರೀತಿಯ ಆಹಾರಗಳಿಂದ ಸಾಧ್ಯವಾದಷ್ಟು ದೂರವಿರುವುದು ಬಹಳ ಉತ್ತಮ. ಇವುಗಳ ಬದಲಾಗಿ, ನೀವು ತಾಜಾ ಹಣ್ಣು, ತರಕಾರಿ, ಧಾನ್ಯ, ಕಡಿಮೆ ಕೊಬ್ಬಿನ ಪ್ರೋಟೀನ್ ಮತ್ತು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಸೇವಿಸಬಹುದು.

ಇದನ್ನೂ ಓದಿ: ಮಹಿಳೆಯರೇ ಎಚ್ಚರ: ಹೃದಯಘಾತಕ್ಕೆ ಕಾರಣವಾಗುತ್ತಿವೆ ಗರ್ಭ ನಿರೋಧಕ ಮಾತ್ರೆ

ಬಿಳಿ ಅಕ್ಕಿ, ಬ್ರೆಡ್, ಪಾಸ್ತಾ

ನಾವು ದಿನನಿತ್ಯ ಸೇವನೆ ಮಾಡುವ ಬಿಳಿ ಅಕ್ಕಿಯಿಂದ ತಯಾರಾದ ಅನ್ನ, ಹಾಗೆಯೇ ಪಾಸ್ತಾ ಮತ್ತು ಕೆಲವು ರೀತಿಯ ತಿಂಡಿಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಈ ರೀತಿಯ ಆಹಾರಗಳಲ್ಲಿ ಫೈಬರ್, ವಿಟಮಿನ್‌ ಮತ್ತು ಖನಿಜಗಳ ಕೊರತೆಯಿದ್ದು ಇದು ದೇಹದಲ್ಲಿ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಲು ಕಾರಣವಾಗುತ್ತವೆ, ಮಾತ್ರವಲ್ಲ ಹೊಟ್ಟೆಯ ಸುತ್ತ ಕೊಬ್ಬು, ಹೃದಯ ಸಮಸ್ಯೆಗಳು ಮತ್ತು ಟೈಪ್ 2 ಮಧುಮೇಹ ಹೆಚ್ಚಾಗುತ್ತದೆ. ಆದ್ದರಿಂದ, ಇವುಗಳ ಬದಲಿಗೆ, ಕಂದು ಅಕ್ಕಿ, ಓಟ್ಸ್ ಮತ್ತು ಗೋಧಿಯಂತಹ ಧಾನ್ಯಗಳನ್ನು ಆರಿಸಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ