ಒತ್ತಡದಿಂದ ಮೆದುಳಿನ ಸಮಸ್ಯೆ ಖಂಡಿತ, ಚುರುಕಾಗಿರಲು 5 ಸುಲಭ ಮಾರ್ಗ ಇಲ್ಲಿದೆ ನೋಡಿ

ಯಾವುದೇ ಒತ್ತಡ ಉಂಟಾದರು ಮೊದಲು ಅದರ ಪರಿಣಾಮವನ್ನು ಎದುರಿಸುವುದು ಮೆದುಳು. ಒತ್ತಡದಿಂದ ಮೆದುಳಿಗೆ ಯಾವೆಲ್ಲಾ ಪರಿಣಾಮ ಬೀರಬಹುದು ಈ ಎಂಬುದನ್ನು ನರಶಸ್ತ್ರಚಿಕಿತ್ಸಕ ಡಾ. ಸ್ಟೀವನ್ ಸ್ಪಿಟ್ಜ್ ತಿಳಿಸಿಕೊಟ್ಟಿದ್ದಾರೆ. ಜೊತೆಗೆ ಮೆದುಳಿಗೆ ಒತ್ತಡ ನೀಡದಂತೆ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬಹುದು ಎಂಬುದನ್ನು ಸಹ ಹೇಳಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಒತ್ತಡದಿಂದ ಮೆದುಳಿನ ಸಮಸ್ಯೆ ಖಂಡಿತ, ಚುರುಕಾಗಿರಲು 5 ಸುಲಭ ಮಾರ್ಗ ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ

Updated on: Jul 07, 2025 | 4:02 PM

ಒತ್ತಡ ಇಲ್ಲದ ಮನುಷ್ಯ ಈ ಜಗತ್ತಿನಲ್ಲಿ ಇಲ್ಲ. ಎಲ್ಲರಿಗೂ ಒಂದಲ್ಲ ಒಂದು ಒತ್ತಡ ಇದ್ದೇ ಇರುತ್ತದೆ. ಆದರೆ ಅದನ್ನು ನಿಭಾಯಿಸುವಲ್ಲಿ ಅನೇಕರು ವಿಫಲರಾಗುತ್ತಾರೆ. ಈ ಒತ್ತಡದಿಂದಾಗಿ ದೇಹದ ಅಂಗದಲ್ಲೂ ಅನೇಕ ಬದಲಾವಣೆಗಳು ಹಾಗೂ ಸಮಸ್ಯೆಗಳು ಎದುರುಗುತ್ತದೆ. ಕೆಲಸ, ಮನೆ, ಕುಟುಂಬ ಹೀಗೆ ಅನೇಕ ರೀತಿಯ ಒತ್ತಡಗಳನ್ನು ನಿಭಾಯಿಸಲೇಬೇಕು. ಇದರಿಂದ ಮೆದುಳಿನ ಮೇಲೆ ದೊಡ್ಡ ಮಟ್ಟದ ತೊಂದರೆಗಳನ್ನು ಉಂಟಾಗುತ್ತದೆ. ಈ ಒತ್ತಡ ಮೆದುಳಿನ ಮೇಲೆ ಹೇಗೆಲ್ಲ ತೊಂದರೆಯನ್ನು ಉಂಟು ಮಾಡುತ್ತದೆ ಎಂಬುದನ್ನು ನರಶಸ್ತ್ರಚಿಕಿತ್ಸಕ ಡಾ. ಸ್ಟೀವನ್ ಸ್ಪಿಟ್ಜ್ ತಮ್ಮ ಇನ್‌ಸ್ಟಾಗ್ರಾಮ್​​ನಲ್ಲಿ ತಿಳಿಸಿದ್ದಾರೆ. ಒತ್ತಡ ಮೆದುಳಿಗೆ ನಿಜವಾಗಿಯೂ ಏನು ಮಾಡುತ್ತದೆ  ಹಾಗೂ ಇದನ್ನು ಸರಿ ಮಾಡಲು ಯಾವೆಲ್ಲ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಹೇಳಿದ್ದಾರೆ. ಮೆದುಳು ಚುರುಕಾಗಿರಲು ಸಹಾಯ ಮಾಡುವ 5 ಮಾರ್ಗಗಳನ್ನು ಹೇಳಿದ್ದಾರೆ.

ಒತ್ತಡಕ್ಕೆ ಕಾರಣ:

  • ಕಾರ್ಟಿಸೋಲ್ಸ್ ಹಾರ್ಮೋನು
  •  ಯೋಚನಾ ಶಕ್ತಿ ನಷ್ಟ
  • ಕಳಪೆ ಗಮನ

ಕಾರ್ಟಿಸೋಲ್ ಅಂದರೆ ಮೆದುಳಿಗೆ ಒತ್ತಡ ತರುವ ಹಾರ್ಮೋನ್. ಒತ್ತಡ ಮಿತಿಮೀರಿದ ಸಂದರ್ಭದಲ್ಲಿ ಮಾತ್ರ ಮೆದುಳು ಕಾರ್ಟಿಸೋಲ್ ಹಾರ್ಮೋನ್​​ನ್ನು ಹೆಚ್ಚಿಸುತ್ತದೆ. ಈ ಕಾರ್ಟಿಸೋಲ್ ಹಾರ್ಮೋನ್ ಮೆದುಳಿನ ಮೇಲೆ ಹೇಗೆ ಪರಿಣಾಮವನ್ನು ಉಂಟು ಮಾಡುತ್ತದೆ ಎಂಬುದನ್ನು ನರಶಸ್ತ್ರಚಿಕಿತ್ಸಕ ಡಾ. ಸ್ಟೀವನ್ ಸ್ಪಿಟ್ಜ್ ಹೇಳಿದ್ದಾರೆ.  ಡಾ. ಸ್ಪಿಟ್ಜ್ ಅವರ ಹೇಳುವ ಪ್ರಕಾರ, ಮನುಷ್ಯ ಒತ್ತಡಕ್ಕೊಳಗಾದಾಗ ಮೆದುಳಿನ ಅಮಿಗ್ಡಾಲಾ ಭಾಗಕ್ಕೆ ಒತ್ತಡ ಬೀಳುತ್ತದೆ.  ಇದೊಂದು ಭಾವನ್ಮಕವಾಗಿರುವ ಭಾಗವಾಗಿದ್ದು, ಚಿಂತೆ, ಭಯ, ಆಕ್ರಮಣಶೀಲತೆ ಮತ್ತು ಸಕಾರಾತ್ಮಕ ಭಾವನೆಗಳನ್ನು ನಿಯಂತ್ರಿಸುವ ಹಾರ್ಮೋನ್. ಒಂದು ವೇಳೆ ಈ ಭಾಗಕ್ಕೆ ಒತ್ತಡ ಹೆಚ್ಚಾದರೆ, ಇದು ಮೆದುಳಿನ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಹೆಚ್ಚಾದರೆ ಕಾರ್ಟಿಸೋಲ್ ಹಾರ್ಮೋನ್ ಕೂಡ ಹೆಚ್ಚಾಗುತ್ತದೆ. ಇದರಿಂದ ಮೆದುಳಿನ ಮೇಲೆ ಹಾಗೂ ಆರೋಗ್ಯದ ಮೇಲೆ ಹೆಚ್ಚಿನ ಒತ್ತಡವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಈ ತರಕಾರಿಗಳನ್ನು ಸೇವನೆ ಮಾಡಬಾರದಂತೆ! ಯಾಕೆ ಗೊತ್ತಾ?

ಮೆದುಳು ಚುರುಕಾಗಿಸುವುದು ಹೇಗೆ?

  1. ಪ್ರತಿದಿನ 10 ನಿಮಿಷ ನಡೆಯಬೇಕು.
  2. ಒತ್ತಡದ ಭಾವನೆಯಿಂದ ಹೊರಬಹುದು.
  3. ಬಾಕ್ಸ್-ಬ್ರೀತ್, (2-ಸೆಕೆಂಡ್ ಉಸಿರು ಒಳಗೆಳೆದುಕೊಳ್ಳುವುದು, 2-ಸೆಕೆಂಡ್ ಹಿಡಿದಿಟ್ಟುಕೊಳ್ಳುವುದು, 2-ಸೆಕೆಂಡ್ ಉಸಿರು ಬಿಡುವುದು)
  4. ಅದಷ್ಟು ಮೊಬೈಲ್​​ನಿಂದ ದೂರು ಇರುವುದು
  5. ನಿದ್ರೆಗೆ ಆದ್ಯತೆ ನೀಡುವುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ