ನೀವು ಅತಿಯಾದ ತೂಕವನ್ನು ಹೊಂದಿದ್ದು, ತೂಕ ನಷ್ಟಕ್ಕೆ ಸಾಕಷ್ಟು ಪ್ರಯತ್ನಿಸಿದರೂ ಹೆಚ್ಚುವರಿ ಕಿಲೋಗಳನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಇದ್ದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದೀರೇ? ಹಾಗಿದ್ದರೆ ಇಲ್ಲಿ ತಜ್ಞರು ಹಂಚಿಕೊಂಡಿರುವ ಸಲಹೆಗಳನ್ನು ಪಾಲಿಸಿ .
ಪ್ರತಿ ತಿಂಗಳು 2ರಿಂದ 3 ಕೆಜಿಯಷ್ಟು ತೂಕ ಇಳಿಸಲು ತೂಕ ನಷ್ಟ ತರಬೇತುದಾರ ಸಿಮ್ರಾನ್ ವಲೇಚಾರವರು ತಮ್ಮ ಇನ್ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿರುವ ಸಲಹೆಗಳು ಇಲ್ಲಿವೆ.
ಸರಿಯಾದ ಆಹಾರ ಕ್ರಮ ಅನುಸರಿಸಿ:
ಅತಿಯಾದ ತೂಕವನ್ನು ಹೊಂದ್ದಿದವರು ಪ್ರತಿ ಸಲ ರಾತ್ರಿ ಊಟ ಅಥವಾ ಬೆಳಗಿನ ತಿಂಡಿಯನ್ನು ಸ್ಕಿಪ್ ಮಾಡಿ ತೂಕ ಕಳೆದುಕೊಳ್ಳಲು ಪ್ರಯತ್ನಿಸಿದರೆ, ಅದು ನಿಮ್ಮ ದೇಹದ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡಬಹುದು . ಆದ್ದರಿಂದ ಸರಿಯಾದ ಆಹಾರ ಕ್ರಮ ಅನುಸರಿಸಿ.
ಸೂಪ್‌ಗಳು ಮತ್ತು ಸಲಾಡ್‌ಗಳನ್ನು ಒಳಗೊಂಡಿರುವ ಆಹಾರವು ನಿಮಗೆ ಬೇಗ ಹೊಟ್ಟೆ ತುಂಬುವಂತೆ ಮಾಡುತ್ತದೆಯೇ ವಿನಃ ಇದರಿಂದ ಯಾವುದೇ ಪೌಷ್ಟಿಕಾಂಶ ಪಡೆಯಲು ಸಾಧ್ಯವಿಲ್ಲ. ಜೊತೆಗೆ ಇಂತಹ ಆಹಾರಗಳಿಂದ ಚರ್ಮದ ಆರೋಗ್ಯ ಹದಗೆಡಲು ಹಾಗು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಆದಷ್ಟು ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ಫೈಬರ್, ವಿಟಮಿನ್‌ಗಳು ಮತ್ತು ಖನಿಜಗಳನ್ನು ಒಳಗೊಂಡ ಆಹಾರವನ್ನು ಸೇವಿಸಿ ಎಂದು ಇವರು ಸಲಹೆ ನೀಡುತ್ತಾರೆ.
ಕಾರ್ಡಿಯೋ ವ್ಯಾಯಾಮ ರೂಢಿಸಿಕೊಳ್ಳಿ:
30 ರಿಂದ 60 ಸೆಕೆಂಡುಗಳ ಕಾಲ ಪ್ರತಿ ದಿನ ಕಾರ್ಡಿಯೋ ವ್ಯಾಯಾಮ ರೂಢಿಸಿಕೊಳ್ಳಿ. ಹೀಗೆ ಮಾಡುವುದ್ದರಿಂದ ನಿಮ್ಮ ಸ್ನಾಯುಗಳು ಆರೋಗ್ಯವಾಗಿರಲು ಮತ್ತು ಹೃದಯ ಬಡಿತವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಇದ್ದರಿಂದ ನಿಮ್ಮ ದೇಹದಲ್ಲಿನ ಕೊಬ್ಬು ಇಳಿಸಲು ಸಹಾಯ ಮಾಡುತ್ತದೆ.
ಆದಷ್ಟು ಚಟುವಟಿಕೆಯಿಂದಿರಿ:
ನಿಮ್ಮ ವ್ಯಾಯಾಮದ ಜೊತೆಗೆ, ಪ್ರತಿದಿನ ಚಟುವಟಿಕೆಯಿಂದಿರಿ. ತುಂಬಾ ಹೊತ್ತು ಮಲಗಿಕೊಂಡು ಕಾಲ ಕಳೆಯುತ್ತಿದ್ದರೆ, ಅಂತಹ ಅಭ್ಯಾಸವನ್ನು ಬಿಟ್ಟು ಬಿಡಿ.
ತಾಜಾ ಹಣ್ಣುಗಳ ರಸ ಉತ್ತಮ:
ನೀವು ಹೆಚ್ಚಾಗಿ ಜ್ಯೂಸ್ ಮತ್ತು ಸ್ಮೂಥಿಗಳನ್ನು ಕುಡಿಯುವ ಬದಲಾಗಿ ತಾಜಾ ಹಣ್ಣುಗಳ ರಸವನ್ನು ಯಾವುದೇ ಸಕ್ಕರೆಯ ಅಂಶವನ್ನು ಸೇರಿಸದೆ ಕುಡಿಯುವುದು ಉತ್ತಮ. ಯಾಕೆಂದರೆ ಜ್ಯೂಸ್ ಮತ್ತು ಸ್ಮೂಥಿಗಳಲ್ಲಿ ಸಕ್ಕರೆ ಹಾಗು ಇತರ ಸಿರಪ್ ಅಂಶಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಆದಷ್ಟು ಮನೆಯಲ್ಲಿಯೇ ತಯಾರಿಸಿದ ಆರೋಗ್ಯಕರ ತಾಜಾ ಹಣ್ಣುಗಳ ರಸವನ್ನು ಕುಡಿಯಿರಿ.
ಒತ್ತಡವನ್ನು ಕಡಿಮೆ ಮಾಡಿ:
ನೀವು ಅತಿಯಾದ ತೂಕವನ್ನು ಹೊಂದ್ದಿದೀರಿ ಎಂಬ ಕಾರಣಕ್ಕಾಗಿ ಯಾವತ್ತೂ ನೀವು ತಿನ್ನುವ ಆಹಾರದಲ್ಲಿ ಅಸಮಧಾನವನ್ನು ತೋರಿಸದಿರಿ. ಅಂದರೆ ಕಡಿಮೆ ತಿನ್ನುವುದು , ತಿನ್ನದೇ ಇರುವುದು ಹಾಗೂ ಅತಿಯಾದ ತೂಕದ ಬಗ್ಗೆ ಯೋಚಿಸುವುದು. ಈ ತರಹದ ನಿಮ್ಮ ಅಭ್ಯಾಸಗಳು ನಿಮ್ಮ ಆರೋಗ್ಯವನ್ನು ಹಾಳು ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ವಾಲೆಚಾ ಅವರು ಹೇಳುತ್ತಾರೆ.
(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)
ಆರೋಗ್ಯಕ್ಕೆ ಸಂಬಂಧಿಸಿದ ಸುದ್ಧಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: