ಈ ಐದು ಸಲಹೆಗಳನ್ನು ಅನುಸರಿದರೆ ತೂಕ ಇಳಿಸುವುದು ದೊಡ್ಡ ವಿಷಯವೇ ಅಲ್ಲ!
ತೂಕವನ್ನು ಕಳೆದುಕೊಳ್ಳುವುದು ಸುಲಭದ ಮಾತಲ್ಲ. ತೂಕ ಕಡಿಮೆ ಮಾಡಲು ತಿಂಗಳುಗಳೇ ಬೇಕಾಗಬಹುದು. ಆದರೆ ಈ ಐದು ಸರಳ ಟಿಪ್ಸ್ಗಳನ್ನು ಅನುಸರಿಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು.
ತೂಕವನ್ನು ಕಳೆದುಕೊಳ್ಳುವುದು ಸುಲಭದ ಮಾತಲ್ಲ. ತೂಕ ಕಡಿಮೆ (Weight loss) ಮಾಡಲು ತಿಂಗಳುಗಳೇ ಬೇಕಾಗಬಹುದು. ಆದರೆ ಅನೇಕ ಜನರು ತೂಕ ಇಳಿಸಿಕೊಳ್ಳಲು ವ್ಯಾಯಾಮ ಮತ್ತು ಆಹಾರದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಇವುಗಳಲ್ಲಿ ಯಾವುದೂ ಸರಿಯಾದ ಫಲಿತಾಂಶವನ್ನು ನೀಡುವುದಿಲ್ಲ. ಆರೋಗ್ಯಕರ ಆಹಾರವನ್ನು ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು, ಜಂಕ್ ಫುಡ್ ಮತ್ತು ಸಂಸ್ಕರಿಸಿದ ಆಹಾರಗಳನ್ನು ತ್ಯಜಿಸುವುದು ಮುಂತಾದ ಅಭ್ಯಾಸಗಳನ್ನು ನೀವು ಅನುಸರಿಸುವುದಾದರೆ, ತೂಕವನ್ನು ಕಳೆದುಕೊಳ್ಳುವುದು ಕಷ್ಟದ ಮಾತೆನಲ್ಲ. ಈ ಸಲಹೆಗಳು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.ಜೊತೆಗೆ ನೀವು ಫಿಟ್ ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ನೀವು ಈ ಸಲಹೆಗಳನ್ನು ಅನುಸರಿಸಿದರೆ ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದಾಗಿದೆ.
ಪ್ರೋಟೀನ್ ಆಹಾರ: ಚಯಾಪಚಯವನ್ನು ಹೆಚ್ಚಿಸಲು ಪ್ರೋಟೀನ್ ಪೋಷಕಾಂಶಗಳ ರಾಜ. ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ದೇಹಕ್ಕೆ ಸಹಾಯ ಮಾಡುತ್ತದೆ. ಹಸಿವನ್ನು ಕಡಿಮೆ ಮಾಡುತ್ತದೆ. ಚಿಕನ್, ಮೊಟ್ಟೆ, ಮೀನು, ಮೊಸರು, ಪನೀರ್ ಮುಂತಾದ ಪದಾರ್ಥಗಳು ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ.
ಬೆಳಗ್ಗೆ ಉಪಾಹಾರ ಮಾಡಿ: ಒಂದು ಸಮಯದಲ್ಲಿ ಕಡಿಮೆ ಆಹಾರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಬೆಳಗಿನ ಉಪಾಹಾರದ ಭಾಗವಾಗಿ ಹಣ್ಣುಗಳು, ತರಕಾರಿ ಮತ್ತು ಬೀಜಗಳನ್ನು ಸೇವಿಸಬಹುದು. ತಾಜಾ ಹಣ್ಣುಗಳು ದೇಹಕ್ಕೆ ಅಗತ್ಯವಾದ ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದಲ್ಲದೆ, ಫೈಬರ್ ಇದೆಯಾ ಎಂದು ಖಚಿತಪಡಿಸಿಕೊಳ್ಳಿ. ಇದು ಹೊಟ್ಟೆ ತುಂಬಿದ ಭಾವನೆಯನ್ನು ಉಂಟುಮಾಡುತ್ತದೆ. ಓಟ್ಸ್, ಧಾನ್ಯದ ಬ್ರೆಡ್, ಬ್ರೌನ್ ರೈಸ್ ಮತ್ತು ಬಟಾಣಿಗಳಲ್ಲಿ ಫೈಬರ್ ಅಧಿಕವಾಗಿದೆ.
ಜಂಪಿಂಗ್ ಜ್ಯಾಕ್ಸ್: ಈ ವ್ಯಾಯಾಮ ಮಾಡುವುದರಿಂದ ದೇಹದ ಎಲ್ಲಾ ಪ್ರಮುಖ ಸ್ನಾಯುಗಳು ಕ್ರಿಯಾಶೀಲವಾಗುತ್ತವೆ. ಗ್ಲುಟ್ಸ್, ಹ್ಯಾಮ್ಸ್ಟ್ರಿಂಗ್ಸ್, ಕ್ವಾಡ್ಗಳು, ಸೊಂಟ, ಶಿನ್ಗಳನ್ನು ಬಲಪಡಿಸುತ್ತದೆ. ಈ ವ್ಯಾಯಾಮವು ಶಕ್ತಿಯನ್ನು ನಿರ್ಮಿಸಲು ಮತ್ತು ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಉಪಯುಕ್ತವಾಗಿದೆ.
ನೀರು ಕುಡಿಯಿರಿ: ಹೈಡ್ರೇಟೆಡ್ ಆಗಿರಲು ಸಾಕಷ್ಟು ನೀರು ಕುಡಿಯಿರಿ. ಊಟಕ್ಕೆ 30 ನಿಮಿಷಗಳ ಮೊದಲು ನೀರು ಕುಡಿಯುವುದರಿಂದ ಸೇವಿಸುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡಬಹುದು.
ಕೂಲ್ಡ್ರಿಂಕ್ಸ್ನಿಂದ ದೂರವಿರಿ: ತಂಪು ಪಾನೀಯ, ಕೂಲ್ ಡ್ರಿಂಕ್ಸ್ ಕುಡಿಯದಿರುವುದು ಉತ್ತಮ. ಇದಲ್ಲದೆ, ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡಿ. ಇದು ತೂಕ ಹೆಚ್ಚಾಗಲು ಕಾರಣವಾಗುವ ಅಂಶಗಳಲ್ಲಿ ಒಂದು. ಪೌಷ್ಟಿಕಾಂಶದ ಮೌಲ್ಯಕ್ಕಾಗಿ ಸ್ಮೂಥಿಗಳು ಮತ್ತು ಮನೆಯಲ್ಲಿ ತಯಾರಿಸಿದ ರಸಗಳಿಗೆ ಆದ್ಯತೆ ನೀಡಿ.
ಮತ್ತಷ್ಟು ಆರೋಗ್ಯ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.