ದೇಹದ ಇತರೆ ಭಾಗಗಳಂತೆ ಕಿವಿ(Ear )ಯ ಆರೈಕೆ ಮಾಡುವುದು ಕೂಡ ಬಹಳ ಮುಖ್ಯ. ಮೆದುಳಿಗೆ ಧ್ವನಿ ಮತ್ತು ಮಾಹಿತಿಯನ್ನು ಕಳುಹಿಸಲು ಕಿವಿಗಳು ಸಾಕಷ್ಟು ಶ್ರಮಿಸುತ್ತದೆ. ಇಂತಹ ದೇಹದ ಭಾಗವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿರಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ.
ಕಿವಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಹೊರ, ಮಧ್ಯ ಮತ್ತು ಒಳಗಿನ ಭಾಗ. ಈ ಮೂರು ಭಾಗಗಳು ಶಬ್ಧ ಕೇಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ದೇಹದ ಉಳಿದ ಭಾಗಗಳಿಗೆ ನೀಡುವಷ್ಟು ಕಾಳಜಿ ಕಿವಿಯ ಮೇಲೆ ಯಾರೂ ನೀಡುವುದಿಲ್ಲ. ಹೀಗಾಗಿಯೇ ಹೆಚ್ಚಿನವರಿಗೆ ಕಿವಿಯ ಸಮಸ್ಯೆ ಬಹುಬೇಗನೆ ಕಾಡಲಾರಂಭಿಸುತ್ತದೆ.
ಕಿವಿ ನೋವಿನ ಬಗ್ಗೆ ಇರಲಿ ಎಚ್ಚರ
ಕಿವಿ ನೋವಿಗೆ ದೀರ್ಘ ಮತ್ತು ಅಲ್ಪಕಾಲದ ಕಿವಿ ಸೋಂಕು, ದವಡೆಯ ಸಂಧಿವಾತ, ಕಿವಿಯ ಮೇಣ, ಏನಾದರೂ ಸಿಕ್ಕಿ ಹಾಕಿಕೊಂಡಿರುವುದು, ಗಾಯ, ತಮಟೆಯಲ್ಲಿ ತೂತು, ನೋಯುತ್ತಿರುವ ಗಂಟಲು ಮತ್ತು ಸೈನಸ್ ಸೋಂಕು ಕಾರಣವಾಗಿರುತ್ತದೆ.
ಸಣ್ಣ ನೋವಿದ್ದರೆ ಮನೆ ಮದ್ದು ಸಾಕಾಗುತ್ತದೆ. ಒಂದು ವೇಳೆ ನೋವು ತೀವ್ರವಾದರೆ ವೈದ್ಯರನ್ನು ಕಾಣುವುದು ಅಗತ್ಯ. ಕಿವಿ ನೋವು ತೀವ್ರವಾದಾಗ ಬಾಹ್ಯ ಕಿವಿ ಕಾಲುವೆಯಲ್ಲಿ ನೋವು, ತುರಿಸುವಿಕೆ, ಝೇಂಕರಿಸುವ ಶಬ್ಧ, ಊದಿಕೊಂಡ ಕಿವಿ, ಕೇಳಿಸದೇ ಇರುವುದು, ವಿಯಿಂದ ದ್ರವ ವಿಸರ್ಜನೆ ಇತ್ಯಾದಿ ಲಕ್ಷಣಗಳು ಕಂಡುಬರುತ್ತದೆ.
ಕಿವಿಯ ಹೊರ ಭಾಗದ ಆರೈಕೆಯನ್ನೂ ಮಾಡಿ
ಸ್ನಾನ ಮಾಡುವಾಗ ಕಿವಿಯ ಹಿಂಬದಿಯನ್ನು ನಿಧಾನವಾಗಿ ತೊಳೆಯಿರಿ. ನೀವು ಕಿವಿಗಳ ನೋವಿನಿಂದ ಬಾಧಿತರಾಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಕಿವಿಯ ಒಳಭಾಗ ಮಾತ್ರವಲ್ಲ, ಹೊರಭಾಗದ ಸ್ವಚ್ಛತೆ ಕಾಪಾಡುವುದು ಅಷ್ಟೇ ಮುಖ್ಯ. ಕಿವಿಗಳು ಸೂಕ್ಷ್ಮವಾದ ಪ್ರದೇಶವಾಗಿರುವುದರಿಂದ ಸುರಕ್ಷಿತವಾಗಿ ಸ್ವಚ್ಛಗೊಳಿಸಲು ಉಗುರು ಬೆಚ್ಚಗಿನ ನೀರಿನಲ್ಲಿ ಬಟ್ಟೆಯನ್ನು ಅದ್ದಿ ನಿಧಾನವಾಗಿ ಕಿವಿಯ ಹೊರಭಾಗ, ಹಿಂಭಾಗವನ್ನು ಶುಚಿಗೊಳಿಸಿ.
ಚೂಪಾದ ವಸ್ತುಗಳನ್ನು ಕಿವಿ ಒಳಗೆ ಹಾಕದಿರಿ
ವಸ್ತುಗಳನ್ನು ಕಿವಿಯೊಳಗೆ ಹಾಕುವುದು ತುಂಬಾ ಅಪಾಯಕಾರಿ. ಪೆನ್, ಪೆನ್ಸಿಲ್ ಮತ್ತಿತರ ಚೂಪಾದ ವಸ್ತುಗಳನ್ನು ಹಾಕುವುದು ಅಪಾಯಕಾರಿ. ಇದರಿಂದ ಶಾಶ್ವತವಾಗಿ ಟೈಂಪನಿಕ್ ಮೆಂಬರೆನ್ಸ್ ಗೆ ಹಾನಿಯಾಗಬಹುದು. ಚೂಪಾದ ವಸ್ತುಗಳಿಂದ ಕಿವಿಯ ಒಳಗಿನ ಭಾಗದಲ್ಲಿ ಹಾನಿಯಾಗಬಹುದು. ಇದರಿಂದ ಸೋಂಕು ಕಾಣಿಸಿ ಕೊಳ್ಳಬಹುದು.
ಹೆಡ್ಫೋನ್ಗಳ ಬಳಕೆ
ಹೆಡ್ ಫೋನ್ನಲ್ಲಿ ಜೋರಾಗಿ ನಿರಂತರವಾಗಿ ಹಾಡು ಕೇಳುವುದರಿಂದ ಕಿವಿಯ ಡ್ರಮ್ ಛಿದ್ರವಾಗುವ ಸಾಧ್ಯತೆಯಿದೆ. ಶಬ್ದವನ್ನು ತುಂಬಾ ಕಡಿಮೆ ಮಾಡಿಕೊಂಡು ಸಂಗೀತ ಕೇಳಿದರೂ ಅದರಿಂದ ತಲೆನೋವು ಕಾಣಿಸಿಕೊಳ್ಳಬಹುದು.
ನಿಮ್ಮ ಇಯರ್ ಫೋನ್ ನಲ್ಲಿ ಯಾವ ಸಂಗೀತವಿದೆ ಎಂದು ಹೊರಗಿನವರಿಗೆ ಕೇಳಿಸಿದರೆ ಆಗ ಖಂಡಿತವಾಗಿಯೂ ಅಪಾಯವಾಗಿಯೇ ಆಗುತ್ತದೆ. ಇದರಿಂದ ಶಬ್ದವನ್ನು ತುಂಬಾ ಕಡಿಮೆ ಮಟ್ಟದಲ್ಲಿಡಿ.
ಸ್ನಾನಕ್ಕೆ ಹೋಗುವಾಗ, ಈಜುಕೊಳದಲ್ಲಿ ಇಳಿಯುವಾಗ ಇನ್ಯಾವುದೇ ರೀತಿಯಲ್ಲಿ ನೀರಿಗೆ ಮೈಯೊಡ್ಡುತ್ತಿರುವ ಸಂದರ್ಭದಲ್ಲಿ ಕಿವಿಯನ್ನು ಬಟ್ಟೆಗಳಿಂದ ಕವರ್ ಮಾಡಿ.
ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನೊಳಗೊಂಡಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ