Health Tips: ತೂಕವನ್ನು ಕಡಿಮೆ ಮಾಡಬೇಕೇ? ಹಾಗಾದ್ರೆ ಸಂಜೆ ಚಹಾದೊಂದಿಗೆ ಈ ಸ್ನ್ಯಾಕ್ಸ್​ ಸೇವಿಸಿ

ನೀವು ತುಂಬಾ ದಪ್ಪಗಿದ್ದೀರಿ ಎಂಬ ಚಿಂತೆ ನಿಮ್ಮನ್ನು ಪ್ರತಿ ದಿನ ಕಾಡುತ್ತಿದ್ದೇಯೇ? ಹಾಗಿದ್ದರೆ ನೀವು ತಿನ್ನುವ ಆಹಾರ ಕ್ರಮದ ಬಗ್ಗೆ ಎಚ್ಚರ ವಹಿಸಿ. ಇಂದಿನಿಂದ ನಿಮ್ಮ ಸಂಜೆಯ ಚಹಾದೊಂದಿಗೆ ಗರಿ ಗರಿಯಾಗಿ ಕರಿದ ತಿಂಡಿಗಳ ಬದಲಾಗಿ,ಈ ಕೆಳಗಿನ ತಿಂಡಿಗಳನ್ನು ರೂಢಿಸಿಕೊಳ್ಳಿ.

Health Tips: ತೂಕವನ್ನು ಕಡಿಮೆ ಮಾಡಬೇಕೇ? ಹಾಗಾದ್ರೆ ಸಂಜೆ ಚಹಾದೊಂದಿಗೆ ಈ ಸ್ನ್ಯಾಕ್ಸ್​ ಸೇವಿಸಿ
Health Tips
Updated By: ಅಕ್ಷತಾ ವರ್ಕಾಡಿ

Updated on: Oct 30, 2022 | 6:02 PM

ನಮ್ಮ ದೇಶದಲ್ಲಿ ಬಹುಬೇಡಿಕೆಯ ಪಾನೀಯವೆಂದರೆ ಅದು ಚಹಾ. ಹಾಗೆ ನಮ್ಮಲ್ಲಿ ಹಲವರಿಗೆ ಸಂಜೆಯ ಹೊತ್ತು ಒಂದು ಕಪ್ ಟೀ ಬೇಕೇ ಬೇಕು. ಇದರ ಜೊತೆಗೆ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿದ ತಿಂಡಿಯಂತೂ ಇದ್ದರೆ ಇನ್ನೂ ಖುಷಿ. ಪ್ರತಿ ದಿನ ಕರಿದ ತಿಂಡಿಯನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಆರೋಗ್ಯದ ಕಡೆ ಗಮನಹರಿಸಿ.

ನೀವು ತುಂಬಾ ದಪ್ಪಗಿದ್ದೀರಿ ಎಂಬ ಚಿಂತೆ ನಿಮ್ಮನ್ನು ಪ್ರತಿ ದಿನ ಕಾಡುತ್ತಿದೆಯೇ? ಹಾಗಿದ್ದರೆ ನೀವು ತಿನ್ನುವ ಆಹಾರ ಕ್ರಮದ ಬಗ್ಗೆ ಎಚ್ಚರ ವಹಿಸಿ. ಇಂದಿನಿಂದ ನಿಮ್ಮ ಸಂಜೆಯ ಚಹಾದೊಂದಿಗೆ ಗರಿ ಗರಿಯಾಗಿ ಕರಿದ ತಿಂಡಿಗಳ ಬದಲಾಗಿ,ಈ ಕೆಳಗಿನ ತಿಂಡಿಗಳನ್ನು ರೂಢಿಸಿಕೊಳ್ಳಿ.

ಭಾರತೀಯ ತಿಂಡಿಗಳ ರುಚಿಗಳೆಂದರೇನೇ ಹಾಗೆ ನಾವು ಬಯಸಿದಾಗಲೆಲ್ಲಾ ನಮ್ಮನ್ನು ಎಳೆಯುತ್ತದೆ. ಅದು ಗರಿಗರಿಯಾದ ಸಮೋಸಾ, ಬೋಂಡಾ, ಪಕೋಡಾ, ರುಚಿಕರವಾದ ದೇಸಿ ಸ್ಯಾಂಡ್‌ವಿಚ್‌ಗಳು ಹೀಗೆ ಹತ್ತು ಹಲವು. ಈ ತಿಂಡಿಗಳು ಸಂಜೆಯ ಚಹಾಕ್ಕೆ ಹೇಳಿ ಮಾಡಿಸಿದ ಜೋಡಿ. ಆದರೆ ಇಂತಹ ತಿಂಡಿಗಳನ್ನು ಪ್ರತಿ ದಿನ ತಿನ್ನುತ್ತಿದ್ದರೆ, ನೀವು ನಿಮ್ಮ ದೇಹದ ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ವಿಶೇಷವಾಗಿ ತೂಕ ಕಳೆದುಕೊಳ್ಳಲು ಬಯಸುವವರು ಆದಷ್ಟು ಎಣ್ಣೆಯಿಂದ ಕರಿದ ಪದಾರ್ಥಗಳಿಂದ ದೂರವಿರಿ.

ಹಾಗಾದರೆ, ನೀವು ಯಾವ ರೀತಿಯ ತಿಂಡಿ ತಿನ್ನಬೇಕು ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಖಾನಾ ಭೇಲ್:

ಸಿಹಿ ಮತ್ತು ಮಸಾಲೆಯುಕ್ತ, ಈ ಮಖಾನಾ ಭೇಲ್ ಒಂದು ಸೂಪರ್ ರುಚಿಕರವಾದ ಮತ್ತು ಆರೋಗ್ಯಕರ ಭೇಲ್ ಆಗಿದೆ. ಆಲೂಗಡ್ಡೆ, ಕಡಲೆಕಾಯಿ, ಮಖಾನಾ, ಹಸಿರು ಮೆಣಸಿನಕಾಯಿಗಳ ಜೊತೆಗೆ ಮಸಾಲೆ ಕರಿಮೆಣಸು ಮತ್ತು ಜೀರಿಗೆ ಪುಡಿಗಳನ್ನು ಸೇರಿಸಿ ಈ ಭೇಲ್ ತಯಾರಿಸಿ. ಇದು ನಿಮ್ಮ ಹೃದಯವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.

ಸೋಯಾ ಇಡ್ಲಿ :

ಸೋಯಾಬೀನ್, ಉದ್ದಿನಬೇಳೆ ಮತ್ತು ಅಕ್ಕಿಯಿಂದ ತಯಾರಿಸಲಾದ ಈ ಸೋಯಾ ಇಡ್ಲಿಯು ರುಚಿಯ ಜೊತೆಗೆ ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ನೀಡುವಲ್ಲಿ ಸಹಾಯಕವಾಗಿದೆ.

ಓಟ್ಸ್ ಚಿವ್ಡಾ:

ನಮ್ಮ ದೇಹದ ಆರೋಗ್ಯದ ವಿಷಯದಲ್ಲಿ ಓಟ್ಸ್ ಅನ್ನು ಪರಿಚಯಿಸುವ ಅಗತ್ಯವಿಲ್ಲ. ಯಾಕೆಂದರೆ ಇದು ಅಸಂಖ್ಯಾತ ಪ್ರಯೋಜನಗಳನ್ನು ಹೊಂದಿದೆ. ಓಟ್ಸ್ ಚಿವ್ಡಾವನ್ನು ಓಟ್ಸ್, ಬೇಳೆ, ಕಡಲೆ ಕಾಳು, ಅರಶಿನ, ಮೆಣಸಿನ ಹುಡಿ,ಕರಿಮೆಣಸಿನ ಕಾಳು ಹಾಗು ಸಕ್ಕರೆಯನ್ನು ಸೇರಿಸಿ ತಯಾರಿಸಲಾಗುತ್ತದೆ.

ಸಿಹಿ ಆಲೂಗಡ್ಡೆ ಚಾಟ್:

ಮೆಣಸಿನ ಹುಡಿ,ಕರಿಮೆಣಸಿನ ಕಾಳು ಮಸಾಲಾ ಮತ್ತು ನಿಂಬೆ ರಸದಲ್ಲಿ ಬೆರೆಸಿದ ಸಿಹಿ ಆಲೂಗಡ್ಡೆಯಿಂದ ಯಾವುದೇ ಎಣ್ಣೆಯಿಂದ ಕರಿಯದೆ ಬೇಯಿಸಲಾಗುತ್ತದೆ. ಇದನ್ನು ಮನೆಯಲ್ಲಿ ಮಾಡುವುದು ತುಂಬಾ ಸುಲಭ.

ಮಸಾಲಾ ಆಮ್ಲೆಟ್‌:
ಸಾಮಾನ್ಯವಾಗಿ ನಾವು ಮಾಡುವ ಆಮ್ಲೆಟ್‌ ಇದಾಗಿದ್ದು, ಇದರಲ್ಲಿ ಯಾವುದೇ ಎಣ್ಣೆಯನ್ನು ಬಳಸದೇ ಮಾಡುವುದು ಅತಿ ಮುಖ್ಯವಾಗಿದೆ. ಮೊಟ್ಟೆಯಲ್ಲಿರುವ ಉತ್ತಮ ಅಂಶಗಳು ನಮ್ಮ ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಚಹಾ ಸಮಯದಲ್ಲಿ ಮಾತ್ರವಲ್ಲದೆ ಊಟದ ಸಮಯದಲ್ಲಿ ಸೇವಿಸಬಹುದು. ಇದು ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: