Health Tips: ಆರೋಗ್ಯದ ವಿಷಯದಲ್ಲಿ ಮೊಸರು ದೇಹಕೆಷ್ಟು ಸೂಕ್ತ ಇಲ್ಲಿದೆ ತಜ್ಞರ ಸಲಹೆ
ರಾತ್ರಿಯ ಸಮಯದಲ್ಲಿ ಮೊಸರು ಸೇವನೆ ಎಷ್ಟು ಸೂಕ್ತ? ಇದರ ಕುರಿತ ಮುಂಬೈನ ಪ್ರಾಣ ಹೆಲ್ತ್ ಕೇರ್ ಸೆಂಟರ್ನ ಕರುಳಿನ ತಜ್ಞರಾದ ಡಾ.ಡಿಂಪಲ್ ಜಂಗ್ಡಾರವರ ಪ್ರಮುಖ ಸಲಹೆಗಳು ಇಲ್ಲಿವೆ.
ಮೊಸರಿನಲ್ಲಿ, ಲ್ಯಾಕ್ಟೋಬಾಸಿಲಸ್ ,ಬಲ್ಗೇರಿಸ್ ಮತ್ತು ಸ್ಟ್ರೆಪ್ಟೋಕಾಕಸ್ ಎಂಬ ಉತ್ತಮ ಬ್ಯಾಕ್ಟೀರಿಯಾಗಳಿದ್ದು, ಅದು ಪ್ರತಿದಿನ ನೀವು ಸೇವಿಸುವ ಮೊಸರಿನ ಮೂಲಕ ಜೀವಂತವಾಗಿ ಕರುಳನ್ನು ತಲುಪುತ್ತವೆ. ಇದು ನಿಮ್ಮ ದೇಹದ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಇದು ದೇಹದಲ್ಲಿ ಕೊಬ್ಬಿನಾಂಶವನ್ನು ಹೆಚ್ಚಿಸಲು ಮತ್ತು ದೇಹದಲ್ಲಿ ಸ್ಥಿರತೆಯನ್ನು ನೀಡಲು ಸಾಹಾಯಕವಾಗಿದೆ.
ಸ್ಥೂಲಕಾಯತೆ, ಕಫಾ, ರಕ್ತಸ್ರಾವದ ಅಸ್ವಸ್ಥತೆಗಳು, ಉರಿಯೂತ ಸಮಸ್ಯೆಯಿಂದ ಬಳಲುತ್ತಿರುವವರು , ಮೊಸರು ಸೇವನೆಯಿಂದ ದೂರವಿರಿ ಎಂದು ಮುಂಬೈನ ಪ್ರಾಣ ಹೆಲ್ತ್ ಕೇರ್ ಅಂಡ್ ಅಕಾಡೆಮಿ ಫೋರ್ ಆಯುರ್ವೇದದ,ಆಯುರ್ವೇದ ಮತ್ತು ಕರುಳಿನ ತಜ್ಞರಾದ ಡಾ.ಡಿಂಪಲ್ ಜಂಗ್ಡಾ ತಮ್ಮ ಇನ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ರಾತ್ರಿಯ ಸಮಯದಲ್ಲಿ ಮೊಸರು ಸೇವನೆಯನ್ನು ಮಾಡದಿರಿ ಏಕೆಂದರೆ ಅದು ಶೀತ, ಕೆಮ್ಮು, ಸೈನಸ್ ನ್ನು ಹೆಚ್ಚಿಸುತ್ತದೆ. ಅದಾಗಿಯೂ ನೀವು ರಾತ್ರಿ ಸಮಯ ಮೊಸರು ಸೇವಿಸುವ ಅಭ್ಯಾಸವನ್ನು ಹೊಂದಿದ್ದರೆ, ಒಂದು ಚಿಟಿಕೆ ಮೆಣಸು ಅಥವಾ ಮೆಂತ್ಯ ಒಟ್ಟಿಗೆ ಸೇರಿಸಿ ಸೇವಿಸಿ.
ಮೊಸರನ್ನು ಬಿಸಿ ಮಾಡಿ ಕುಡಿಯಬೇಡಿ, ಏಕೆಂದರೆ ಅದು ಮೊಸರಿನಲ್ಲಿದ್ದ ಉಪಯುಕ್ತ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ಆದರೆ ಕೆಲವು ಪ್ರದೇಶಗಳಲ್ಲಿ, ಬಿಸಿಮಾಡಿದ ಮೊಸರು ಅಥವಾ ಖಾದ್ಯಗಳನ್ನು ತಯಾರಿಸುತ್ತಾರೆ. ನೀವು 2 ಚಮಚ ಮೊಸರನ್ನು 1 ಲೋಟ ನೀರು, ಸ್ವಲ್ಪ ಜೀರಿಗೆ ಪುಡಿ, ರುಚಿಗೆ ಉಪ್ಪು ಸೇರಿಸಿ ಮತ್ತು ಕೊತ್ತಂಬರಿ ಸೊಪ್ಪಿನ್ನು ಹಾಕಿ ಸೇವಿಸಬಹುದು.ಇದು ದೇಹಕ್ಕೆ ತಂಪನ್ನು ನೀಡುತ್ತದೆ.
ಇದನ್ನು ಓದಿ:ಮಗುವಿನ ಆರೋಗ್ಯ ಕಾಪಾಡಲು ಹಾಗೂ ಎದೆ ಹಾಲನ್ನು ಹೆಚ್ಚಿಸಲು ತಾಯಂದಿರಿಗಿಲ್ಲಿದೆ ಉಪಯುಕ್ತ ಮಾಹಿತಿ
ಇದು ಹುಳಿ ರುಚಿಯನ್ನು ಹೊಂದಿರುವುದ್ದರಿಂದ ಜೀರ್ಣ ಕ್ರಿಯೆಗೆ ಅತ್ಯಂತ ಸಹಕಾರಿಯಾಗಿದೆ. ಉರಿಯೂತದ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಇದು ಉತ್ತಮ ಚಿಕಿತ್ಸೆಯಾಗಿದೆ. ರಕ್ತಹೀನತೆ, ಹಸಿವಿನ ಕೊರತೆ, ಜೀರ್ಣಕಾರಿ ಅಸ್ವಸ್ಥತೆಗಳು, ಅಜೀರ್ಣ ಮುಂತಾದ ಸಮಸ್ಯೆಗಳಿಗೂ ಒಂದು ಉತ್ತಮ ಪರಿಹಾರ ಎಂದು ತಜ್ಞರಾದ ಡಾ.ಡಿಂಪಲ್ ಸಲಹೆ ನೀಡಿದ್ದಾರೆ.
(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:17 pm, Mon, 24 October 22