ಆರೋಗ್ಯದ ವಿಚಾರ ಬಂದಾಗ ಎಲ್ಲ ರೀತಿಯಲ್ಲಿಯೂ ಕಾಳಜಿವಹಿಸುತ್ತೇವೆ. ದೇಹದ ಆರೋಗ್ಯವನ್ನು ಹೆಚ್ಚಿಸುವ ಪದಾರ್ಥಗಳ ಸೇವನೆಯತ್ತ ಹೆಚ್ಚು ಗಮನಹರಿಸುತ್ತೇವೆ. ಆದರೆ ಕೆಲವು ಪದಾರ್ಥಗಳ ಸೇವೆನೆಯಿಂದ ಕೊಬ್ಬು ಹೆಚ್ಚಾಗುತ್ತದೆ ಅಥವಾ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ಉದಾಸೀನ ತೋರಿಸುವವರೇ ಹೆಚ್ಚು. ಅಂತಹ ಮೂಗು ಮುರಿಯುವ ಪದಾರ್ಥಗಳಲ್ಲಿ ತುಪ್ಪ (Ghee) ಕೂಡ ಒಂದು. ಆದರೆ ತುಪ್ಪದಿಂದ ಅನೇಕ ಆರೋಗ್ಯ (Health) ಅನುಕೂಲವಾಗುವ ಗುಣಗಳಿವೆ ಎನ್ನುವುದನ್ನು ತಿಳಿದುಕೊಳ್ಳಲೇಬೇಕು. ಪ್ರತಿದಿನ ಬೆಳಗ್ಗೆ ತುಪ್ಪವನ್ನು ಸೇವಿಸುವುದರಿಂದ ಹಲವು ಉಪಯೋಗಗಳಿವೆ ಎನ್ನುತ್ತಾರೆ ತಜ್ಞರು. ಆಯುರ್ವೇದ (Ayurveda) ದಲ್ಲಿಯೂ ತುಪ್ಪದ ಬಳಕೆಯ ಬಗ್ಗೆ ಉಲ್ಲೇಖವಿದೆ. ಹೀಗಾಗಿ ತುಪ್ಪದ ಸೇವನೆ ಆರೋಗ್ಯಕ್ಕೆ ಹಲವು ಉಪಯುಕ್ತ ಅಂಶಗಳನ್ನು ನೀಡುತ್ತದೆ.
ಈ ಬಗ್ಗೆ ನ್ಯೂಟ್ರಿಷಿಯನ್ ತಜ್ಞರಾದ ಅವಂತಿ ದೇಶಪಾಂಡೆ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತುಪ್ಪದಿಂದ ಸಿಗುವ ಲಾಭಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. ಡೈರಿ ಉತ್ಪನ್ನಗಳಲ್ಲಿ ತುಪ್ಪ ಮಾತ್ರವಲ್ಲ. ಹಾಲು, ಬೆಣ್ಣೆ, ಮೊಸರು ಕೂಡ ದೇಹದ ಆರೋಗ್ಯವನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಇಲ್ಲಿದೆ ನೋಡಿ ತುಪ್ಪದಿಂದಾಗುವ ಲಾಭಗಳು.
ಇದನ್ನೂ ಓದಿ:
Chickenpox: ಚಿಕನ್ಪಾಕ್ಸ್ ಲಕ್ಷಣಗಳೇನು? ಹರಡುವಿಕೆ ಹೇಗೆ? ಇಲ್ಲಿದೆ ಮಾಹಿತಿ