
ಒತ್ತಡ (Stress) ಇಲ್ಲದ ವ್ಯಕ್ತಿ ಇರಲು ಸಾಧ್ಯವೇ… ಎಂಬ ಪ್ರಶ್ನೆಗೆ ಸಹಜವಾಗಿ ಇಲ್ಲ ಎಂಬ ಉತ್ತರವೇ ಬರುತ್ತೆ. ಹಣಕಾಸಿನ ತೊಂದರೆ, ಕಚೇರಿ ಕೆಲಸ, ಕುಟುಂಬದ ಜವಾಬ್ದಾರಿ ಹೀಗೆ ನಾನಾ ರೀತಿಯ ಕಾರಣಗಳು ವ್ಯಕ್ತಿಯನ್ನು ಒಳಗಿನಿಂದ ಹಿಂಡಿ ಹಿಪ್ಪೆ ಮಾಡಿಬಿಡಬಹುದು, ಆದರೆ ನಿಮಗೆ ಗೊತ್ತಾ… ನಿಮಗೆ ತಿಳಿದೋ ತಿಳಿಯದೆಯೋ ಅನುಭವಿಸುವ ಒತ್ತಡ ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುತ್ತದೆ. ಹೌದು, ಅತಿಯಾಗಿ ಯೋಚಿಸುವುದರಿಂದ ಕೂದಲು ಉದುರುವಿಕೆಯಿಂದ ಹಿಡಿದು ಹೃದಯ ಸಂಬಂಧಿ ಕಾಯಿಲೆಗಳವರೆಗೆ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ಒತ್ತಡಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ನಮ್ಮ ದೇಹದಲ್ಲಿ ‘ಕಾರ್ಟಿಸೋಲ್’ ನಂತಹ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇವು ವಿಷಕ್ಕಿಂತಲೂ ಅಪಾಯಕಾರಿಯಾಗಿದ್ದು ಹೃದಯ, ಮೆದುಳು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ. ಈ ರೀತಿ ಆರೋಗ್ಯಕ್ಕೆ ಹಾನಿ ಮಾಡಬಹುದಾದ ಒತ್ತಡದಿಂದ ದೇಹದಲ್ಲಿ ಏನೆಲ್ಲಾ ಆಗುತ್ತದೆ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಹಾರ್ಮೋನುಗಳ ಅಸಮತೋಲನ: ಒತ್ತಡ ಹೆಚ್ಚಾದಾಗ, ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಹಾರ್ಮೋನುಗಳು ಅತಿಯಾಗಿ ಬಿಡುಗಡೆಯಾಗುತ್ತವೆ. ಇದು ರಕ್ತದೊತ್ತಡವನ್ನು (ಬಿಪಿ) ಹೆಚ್ಚಿಸುತ್ತದೆ ಮತ್ತು ಹೃದಯದ ಮೇಲೆ ಒತ್ತಡವನ್ನುಂಟು ಮಾಡುತ್ತದೆ.
ಜೀರ್ಣಕಾರಿ ಸಮಸ್ಯೆಗಳು: ಉದ್ವೇಗವು ಆಮ್ಲೀಯತೆ, ಮಲಬದ್ಧತೆಗೆ ಕಾರಣವಾಗಬಹುದು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ನಿಧಾನಗೊಳಿಸುತ್ತದೆ. ಕೆಲವರಲ್ಲಿ ಹಸಿವು ಕಡಿಮೆಯಾಗುತ್ತದೆ, ಇನ್ನು ಕೆಲವರು ಅತಿಯಾಗಿ ತಿಂದು ಬೊಜ್ಜನ್ನು ಹೆಚ್ಚಿಸಿಕೊಳ್ಳುತ್ತಾರೆ.
ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ: ನಿರಂತರ ಒತ್ತಡ ದೇಹದ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ಶೀತ, ಜ್ವರ ಮತ್ತು ಸೋಂಕುಗಳು ಆಗಾಗ ಕಂಡುಬರುತ್ತದೆ.
ಪುರುಷರು ಮತ್ತು ಮಹಿಳೆಯರ ಸಮಸ್ಯೆಗಳು: ಮಹಿಳೆಯರು ಮುಟ್ಟಿನ ಸಮಸ್ಯೆ ಮತ್ತು ಪುರುಷರಲ್ಲಿ ಹಾರ್ಮೋನುಗಳ ಅಸಮತೋಲನವಾಗಬಹುದು. ಇದು ಬಂಜೆತನಕ್ಕೂ ಕಾರಣವಾಗಬಹುದು.
ಮೆದುಳಿನ ಮೇಲೆ ಪರಿಣಾಮ: ಸ್ಮರಣಶಕ್ತಿ ನಷ್ಟ, ಏಕಾಗ್ರತೆಯ ಕೊರತೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥತೆ ಉಂಟಾಗಬಹುದು.
ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ ಒತ್ತಡದಿಂದ ಮುಕ್ತರಾಗಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ