Home Remedies for Cold: ನೆಗಡಿಯನ್ನು ತಡೆಗಟ್ಟುವ ಮನೆಮದ್ದುಗಳಿವು

|

Updated on: Nov 08, 2023 | 7:30 PM

ಅನಾರೋಗ್ಯವಿರುವ ಜನರ ಸುತ್ತಲೂ ಇರುವ ಮೂಲಕ ಅಥವಾ ಕಲುಷಿತ ವಸ್ತುಗಳನ್ನು ಸ್ಪರ್ಶಿಸಿ, ಅದರಿಂದ ನಮ್ಮ ಮುಖವನ್ನು ಮುಟ್ಟಿಕೊಳ್ಳುವ ಮೂಲಕ ಶೀತ ಹರಡುತ್ತದೆ. ಋತುವಿನ ಬದಲಾವಣೆಯು ಶೀತದ ಅತಿರೇಕದ ಹರಡುವಿಕೆಯ ಮೇಲೆ ಪರಿಣಾಮ ಬೀರುತ್ತದೆ.

Home Remedies for Cold: ನೆಗಡಿಯನ್ನು ತಡೆಗಟ್ಟುವ ಮನೆಮದ್ದುಗಳಿವು
ಶೀತ
Follow us on

ಒಮ್ಮೆ ಮಳೆ, ಇನ್ನೊಮ್ಮೆ ಬಿಸಿಲಿನಿಂದ ವಾತಾವರಣ ಬದಲಾಗಿ ಶೀತ ಉಂಟಾಗುವುದು ಸಾಮಾನ್ಯ. ಶೀತವೆಂಬುದು ನೋಡಲು ಸಣ್ಣ ರೋಗವಾದರೂ ಅದರಿಂದ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ. ಶೀತ ಉಂಟಾದರೆ ಉಸಿರಾಡಲು ಕಷ್ಟವಾಗುತ್ತದೆ. ಗಂಟಲು ನೋವು, ಕಣ್ಣು ಉರಿ, ಕೆಮ್ಮು, ನೆಗಡಿ ಹೀಗೆ ನಾನಾ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಮನೆಯಲ್ಲಿ ವಯಸ್ಸಾದವರಿದ್ದರೆ ಅಥವಾ ಮಕ್ಕಳು, ಗರ್ಭಿಣಿಯರಿದ್ದರೆ ಶೀತ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಶೀತವನ್ನು ತಡೆಗಟ್ಟುವುದು ತುಂಬಾ ಕಷ್ಟಕರವೇನಲ್ಲ. ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.

ಅನಾರೋಗ್ಯವಿರುವ ಜನರ ಸುತ್ತಲೂ ಇರುವ ಮೂಲಕ ಅಥವಾ ಕಲುಷಿತ ವಸ್ತುಗಳನ್ನು ಸ್ಪರ್ಶಿಸಿ, ಆ ಕೈಗಳಿಂದ ಮುಖವನ್ನು ಮುಟ್ಟಿಕೊಳ್ಳುವ ಮೂಲಕ ಶೀತ ಹರಡುತ್ತದೆ. ಋತುವಿನ ಬದಲಾವಣೆಯು ಶೀತದ ಅತಿರೇಕದ ಹರಡುವಿಕೆಯ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಗಂಟಲಿನಲ್ಲಿ ಕಿಚ್ ಕಿಚ್ ಆಗುತ್ತಿದ್ದೆಯೇ? ಹಾಗಿದ್ದರೆ ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ

ನಿಯಮಿತವಾಗಿ ಕೈ ತೊಳೆಯುವುದು ಬಹಳ ಮುಖ್ಯ. ವೈರಸ್‌ಗಳು ಯಾವುದಾದರೂ ವಸ್ತುವಿನ ಮೇಲೆ ಸ್ವಲ್ಪ ಸಮಯದವರೆಗೆ ಇರುತ್ತದೆ. ಹೀಗಾಗಿ, 20 ಸೆಕೆಂಡುಗಳ ಕಾಲ ಸೋಪ್ ಮತ್ತು ನೀರಿನಿಂದ ನಿಮ್ಮ ಕೈಗಳನ್ನು ತೊಳೆಯುವುದರಿಂದ ಸೋಂಕು ಹರಡುವುದನ್ನು ತಡೆಯಬಹುದಾಗಿದೆ. ನಿಮ್ಮ ಮನೆಯ ಬಾಗಿಲಿನ ಹಿಡಿಕೆ, ಮೊಬೈಲ್ ಫೋನ್‌ಗಳು ಮತ್ತು ಲೈಟ್ ಸ್ವಿಚ್‌ಗಳಂತಹ ಸಾಮಾನ್ಯವಾಗಿ ಯಾವಾಗಲೂ ಸ್ಪರ್ಶಿಸುವ ಪ್ರದೇಶಗಳನ್ನು ಸ್ವಚ್ಛವಾಗಿಡಿ. ಅನಾರೋಗ್ಯದಿಂದ ಬಳಲುತ್ತಿರುವವರು ಅದನ್ನು ಸ್ಪರ್ಶಿಸಿದರೆ ಅದರಿಂದ ಶೀತದ ವೈರಸ್‌ಗಳು ಮತ್ತೊಬ್ಬರಿಗೆ ಹರಡಬಹುದು.

ನೀವು ಸಾಕಷ್ಟು ನಿದ್ರೆ ಮಾಡಲು ಮರೆಯಬೇಡಿ. ಸಮತೋಲಿತ ಆಹಾರವನ್ನು ಸೇವಿಸಿ. ದೀರ್ಘಕಾಲದ ಆರೋಗ್ಯ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಿ. ಈ ಅಭ್ಯಾಸಗಳು ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಹಾಗೇ, ಶೀತದ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Summer Cold: ಬೇಸಿಗೆಯಲ್ಲಿ ನೀವು ಶೀತದಿಂದ ಬಳಲುತ್ತಿದ್ದೀರಾ? ಅದಕ್ಕೆ ಕಾರಣ ಇಲ್ಲಿದೆ

N95 ಅಥವಾ KN95ನಂತಹ ಮಾಸ್ಕ್​ಗಳು ಕೊವಿಡ್ -19 ನಂತಹ ವೈರಸ್‌ಗಳ ಹರಡುವಿಕೆಯನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿದೆ. ಅವು ಶೀತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಕಿಕ್ಕಿರಿದ ಸ್ಥಳಗಳಲ್ಲಿ ಓಡಾಡಬೇಡಿ:

ವಿಶೇಷ ಕಾರ್ಯಕ್ರಮ ಅಥವಾ ಪ್ರವಾಸಕ್ಕೂ ಮೊದಲು ಕಿಕ್ಕಿರಿದ ಒಳಾಂಗಣ ಪ್ರದೇಶಗಳಲ್ಲಿ ಓಡಾಡಬೇಡಿ. ಅನೇಕ ಜನರೊಂದಿಗೆ ನಿಕಟ ಸ್ಥಳಗಳಲ್ಲಿರುವುದರಿಂದ ನಿಮಗೆ ಶೀತ ಹರಡುವ ಅಪಾಯ ಹೆಚ್ಚಾಗಿರುತ್ತದೆ.

ಶೀತವನ್ನು ನಿಯಂತ್ರಿಸಲು ಶುಂಠಿ, ಜೇನುತುಪ್ಪ, ಬೆಳ್ಳುಳ್ಳಿ ಬಳಸಿ. ವಿಟಮಿನ್ ಸಿ ಅಂಶವಿರುವ ಆಹಾರವನ್ನು ಹೆಚ್ಚು ಸೇವಿಸಿ. ಉಪ್ಪು ನೀರಿನಿಂದ ಗಂಟಲನ್ನು ಕ್ಲೀನ್ ಮಾಡಿಕೊಳ್ಳಿ. ಬಿಸಿಬಿಸಿಯಾದ ನೀರಿನಿಂದ ಸ್ನಾನ ಮಾಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ