AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಟ್ಟ ಗಾಯಗಳಾದಾಗ ಕಂಗಾಲಾಗಬೇಡಿ; ಮನೆಯಲ್ಲಿರುವ ಈ 5 ಪದಾರ್ಥಗಳನ್ನು ಹಚ್ಚಿರಿ

ಪಟಾಕಿ ಸಿಡಿಸುವಾಗ ಗಾಯಗಳಾದರೆ ಮನೆಯಲ್ಲಿ ಫಸ್ಟ್​ ಏಯ್ಡ್​ ಅಥವಾ ಪ್ರಥಮ ಚಿಕಿತ್ಸೆಯ ಕಿಟ್ ಇಲ್ಲದಿದ್ದರೆ ಏನು ಮಾಡಬೇಕು ಗೊತ್ತಾ? ಮನೆಯಲ್ಲೇ ಇರುವ ಈ ವಸ್ತುಗಳನ್ನು ಬಳಸಿ ಸುಟ್ಟ ಗಾಯದ ಉರಿಯನ್ನು ಕಡಿಮೆ ಮಾಡಬಹುದು.

ಸುಟ್ಟ ಗಾಯಗಳಾದಾಗ ಕಂಗಾಲಾಗಬೇಡಿ; ಮನೆಯಲ್ಲಿರುವ ಈ 5 ಪದಾರ್ಥಗಳನ್ನು ಹಚ್ಚಿರಿ
ಸಾಂದರ್ಭಿಕ ಚಿತ್ರImage Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 08, 2023 | 8:15 PM

ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ದೀಪಾವಳಿಯಲ್ಲಿ (Deepavali) ಪಟಾಕಿ ಹೊಡೆಯುವಾಗ ಸುಟ್ಟ ಗಾಯಗಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ನಾವು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕೆಲವೊಮ್ಮೆ ಗಾಯಗಳಾಗಿ ಬಿಡುತ್ತವೆ. ಪಟಾಕಿಗಳಲ್ಲಿ ಇರುವ ಶಾಖ ಮತ್ತು ರಾಸಾಯನಿಕಗಳಿಂದ ಗಾಯದ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಮಕ್ಕಳಲ್ಲಿ ತೆಳ್ಳಗಿನ ಚರ್ಮ ಇರುವುದರಿಂದ ಮಕ್ಕಳಿಗೆ ಪಟಾಕಿಯಿಂದ ಗಾಯಗಳಾಗುವ ಸಾಧ್ಯತೆಗಳು ಹೆಚ್ಚು. ಪಟಾಕಿ ಸಿಡಿಸುವಾಗ ಗಾಯಗಳಾದರೆ ಮನೆಯಲ್ಲಿ ಫಸ್ಟ್​ ಏಯ್ಡ್​ ಅಥವಾ ಪ್ರಥಮ ಚಿಕಿತ್ಸೆಯ ಕಿಟ್ ಇಲ್ಲದಿದ್ದರೆ ಏನು ಮಾಡಬೇಕು ಗೊತ್ತಾ? ಮನೆಯಲ್ಲೇ ಇರುವ ಈ ವಸ್ತುಗಳನ್ನು ಬಳಸಿ ಸುಟ್ಟ ಗಾಯದ ಉರಿಯನ್ನು ಕಡಿಮೆ ಮಾಡಬಹುದು.

ಪಟಾಕಿಯಿಂದ ಸುಟ್ಟ ಗಾಯಕ್ಕೆ 5 ಮನೆಮದ್ದುಗಳು ಇಲ್ಲಿವೆ:

1. ಅಲೋವೆರಾ:

ಅಲೋವೆರಾ ಸುಟ್ಟ ಚರ್ಮದ ಉರಿಯನ್ನು ಕಡಿಮೆ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಅಲೋವೆರಾದ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳು ಸುಟ್ಟಗಾಯಗಳ ಸುತ್ತ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ಆ ಜಾಗದಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕಡಿಮೆ ಮಾಡಿ, ಸೋಂಕಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಆದರೆ, ಅಲೋವೆರಾ ಗಿಡದಿಂದ ನೇರವಾಗಿ ತೆಗೆದ ಶುದ್ಧ ಅಲೋವೆರಾ ಜೆಲ್ ಅನ್ನು ಮಾತ್ರ ಬಳಸಿ.

ಇದನ್ನೂ ಓದಿ: ದಪ್ಪನೆ, ಆರೋಗ್ಯಯುತ ಕೂದಲಿಗೆ ಈ ಸ್ಪೆಷಲ್ ಎಣ್ಣೆ ಬಳಸಿ ನೋಡಿ

2. ಜೇನುತುಪ್ಪ:

ಕಡಿಮೆ ಗಾಯದಿಂದ ಮಧ್ಯಮ ಪ್ರಮಾಣದ ಸುಟ್ಟ ಗಾಯಗಳಿಗೆ ಜೇನುತುಪ್ಪವನ್ನು ಹಚ್ಚಿರಿ. ಇದು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಸ್ವಭಾವವನ್ನು ಹೊಂದಿದೆ. ಮೊದಲ ಹಂತದ ಸುಟ್ಟ ಗಾಯಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

3. ತೆಂಗಿನ ಎಣ್ಣೆ:

ಎಲ್ಲ ರೀತಿಯ ಗಾಯಗಳಿಗೂ ತೆಂಗಿನ ಎಣ್ಣೆಯನ್ನು ಹಚ್ಚಿದರೆ ಬೇಗ ವಾಸಿಯಾಗುತ್ತದೆ ಎಂಬುದು ಅನೇಕರಿಗೆ ತಿಳಿದಿರುವ ವಿಚಾರ. ಸುಟ್ಟ ಗಾಯಗಳಾದಾಗ ಆ ಜಾಗಕ್ಕೆ ಕೊಬ್ಬರಿ ಎಣ್ಣೆ ಹಚ್ಚಿರಿ. ತೆಂಗಿನ ಎಣ್ಣೆಯು ವಿಟಮಿನ್ ಇ ಅನ್ನು ಹೊಂದಿರುತ್ತದೆ. ಇದು ಚರ್ಮದ ಮೇಲೆ ಇರುವ ಸುಟ್ಟ ಗಾಯದ ಗುರುತುಗಳನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಹೊಕ್ಕಳ ಸುತ್ತ ಎಣ್ಣೆ ಹಚ್ಚುವುದರಿಂದಾಗುವ 5 ಪ್ರಯೋಜನಗಳಿವು

4. ಲ್ಯಾವೆಂಡರ್ ಎಣ್ಣೆ:

ಲಿನಾಲಿಲ್ ಅಸಿಟೇಟ್ ಮತ್ತು ಬೀಟಾ-ಕ್ಯಾರಿಯೋಫಿಲೀನ್ ಲ್ಯಾವೆಂಡರ್ ಎಣ್ಣೆಯಲ್ಲಿ ನೋವು ನಿವಾರಕ ಮತ್ತು ಉರಿಯೂತದ ಗುಣಲಕ್ಷಣಗಳಿವೆ. ಇದು ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಗಾಯವನ್ನು ಬೇಗ ಗುಣಪಡಿಸುತ್ತದೆ.

5. ಟೀ ಟ್ರೀ ಆಯಿಲ್:

ಟೀ ಟ್ರೀ ಎಣ್ಣೆಯು ನಂಜುನಿರೋಧಕ, ಉರಿಯೂತದ ಮತ್ತು ನೋವು ನಿವಾರಕ ಗುಣಲಕ್ಷಣಗಳಿಂದ ತುಂಬಿರುತ್ತದೆ. ಇದು ಸಣ್ಣ ಸುಟ್ಟಗಾಯಗಳನ್ನು ನಿಯಂತ್ರಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ