AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಕ್ಕಳ ಸುತ್ತ ಎಣ್ಣೆ ಹಚ್ಚುವುದರಿಂದಾಗುವ 5 ಪ್ರಯೋಜನಗಳಿವು

ಆಯುರ್ವೇದದಲ್ಲಿ ಎಣ್ಣೆಯಿಂದ ಹೊಕ್ಕಳನ್ನು ಮಸಾಜ್ ಮಾಡಿಕೊಳ್ಳುವುದಕ್ಕೆ ಬಹಳ ಮಹತ್ವವಿದೆ. ಹೊಕ್ಕಳ ಮೇಲೆ ಎಣ್ಣೆ ಹಚ್ಚಿ ಮಸಾಜ್ ಮಾಡುವ ಈ ವಿಧಾನಕ್ಕೆ ನಾಭಿ ಚಿಕಿತ್ಸೆ ಎಂದೂ ಕರೆಯುತ್ತಾರೆ. ಹೊಕ್ಕಳಿನ ಸುತ್ತ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಆಗುವ 5 ಪ್ರಯೋಜನಗಳು ಹೀಗಿವೆ.

ಹೊಕ್ಕಳ ಸುತ್ತ ಎಣ್ಣೆ ಹಚ್ಚುವುದರಿಂದಾಗುವ 5 ಪ್ರಯೋಜನಗಳಿವು
ಹೊಕ್ಕಳಿಗೆ ಎಣ್ಣೆಯ ಮಸಾಜ್Image Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 06, 2023 | 6:12 PM

ನಮ್ಮ ಮನೆಗಳಲ್ಲಿ ಹಿಂದಿನ ಕಾಲದವರು ತಮ್ಮ ದೇಹಕ್ಕೆ ಎಣ್ಣೆ ಹಚ್ಚುವುದು ಅಥವಾ ಮಸಾಜ್ ಮಾಡುವುದನ್ನು ನಾವೆಲ್ಲರೂ ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ. ಈ ಆಯಿಲ್ ಮಸಾಜ್​ನಿಂದ ಸಾಕಷ್ಟು ಪ್ರಯೋಜನಗಳಿವೆ. ಅದರಲ್ಲೂ ಹೊಕ್ಕಳಿನ ಸುತ್ತ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿದರೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

ಆಯುರ್ವೇದದ ಪ್ರಕಾರ, ಹೊಕ್ಕಳು ಪ್ರತಿಯೊಬ್ಬರ ಜೀವನ ಪ್ರಾರಂಭವಾಗುವ ಸ್ಥಳವಾಗಿದೆ. ಇದು ಗರ್ಭದೊಳಗೆ ಬೆಳೆಯುತ್ತಿರುವ ಮಗುವಿನೊಂದಿಗೆ ತಾಯಿಯನ್ನು ಸಂಪರ್ಕಿಸುವ ಸೇತುವೆಯಾಗಿದೆ. ಈ ಹೊಕ್ಕಳು ಅಥವಾ ಕರುಳಬಳ್ಳಿಯಿಂದಲೇ ಗರ್ಭದಲ್ಲಿರುವ ಮಗುವಿಗೆ ಅಗತ್ಯವಾದ ಎಲ್ಲ ಪೌಷ್ಟಿಕಾಂಶಗಳೂ ತಾಯಿಯ ದೇಹದಿಂದ ಹೋಗುತ್ತವೆ. ಹೊಕ್ಕಳು ದೇಹದ ವಿವಿಧ ಅಂಗಗಳಿಗೆ ತಲುಪುವ ಹಲವಾರು ರಕ್ತನಾಳಗಳಿಗೆ ಸಂಪರ್ಕಿಸುತ್ತದೆ. ಆದ್ದರಿಂದ, ಆಯುರ್ವೇದದಲ್ಲಿ ಎಣ್ಣೆಯಿಂದ ಹೊಕ್ಕಳನ್ನು ಮಸಾಜ್ ಮಾಡಿಕೊಳ್ಳುವುದಕ್ಕೆ ಬಹಳ ಮಹತ್ವವಿದೆ.

ಇದನ್ನೂ ಓದಿ: ತ್ವಚೆಯ ಆರೈಕೆಗಾಗಿ ಬಾದಾಮಿ ಎಣ್ಣೆ: ಈ ಎಣ್ಣೆಯು ಮೈಬಣ್ಣವನ್ನು ದ್ವಿಗುಣಗೊಳಿಸುತ್ತದೆ, ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ

ನಾವೆಲ್ ಥೆರಪಿ ಅಥವಾ ಪೆಚೋಟಿ ವಿಧಾನವು ನಿರ್ವಿಶೀಕರಣದ ಹಳೆಯ ಅಭ್ಯಾಸವಾಗಿದೆ. ಹೊಕ್ಕಳ ಮೇಲೆ ಎಣ್ಣೆ ಹಚ್ಚಿ ಮಸಾಜ್ ಮಾಡುವ ಈ ವಿಧಾನಕ್ಕೆ ನಾಭಿ ಚಿಕಿತ್ಸೆ ಎಂದೂ ಕರೆಯುತ್ತಾರೆ. ಇದು ಹೊಕ್ಕುಳಿನ ಒಳಗಿರುವ ಪೆಚೋಟಿ ಗ್ರಂಥಿಯ ಮೂಲಕ ತೈಲಗಳಂತಹ ವಸ್ತುಗಳನ್ನು ಹೀರಿಕೊಳ್ಳುವ ಅಭ್ಯಾಸವಾಗಿದೆ. ನಿಮ್ಮ ಹೊಟ್ಟೆಯ ಮಧ್ಯಭಾಗಕ್ಕೆ ಅಥವಾ ಹೊಕ್ಕಳಿನ ಸುತ್ತ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಆಗುವ 5 ಪ್ರಯೋಜನಗಳು ಹೀಗಿವೆ.

ಹೊಕ್ಕಳನ್ನು ಸ್ವಚ್ಛವಾಗಿಡುತ್ತದೆ:

ದಿನವೂ ದೇಹದ ಪ್ರತಿಯೊಂದು ಭಾಗಗಳನ್ನು ಸ್ವಚ್ಛಗೊಳಿಸಲು ಮರೆಯಬೇಡಿ. ಅದಕ್ಕೆ ಹೊಕ್ಕಳು ಕೂಡ ಹೊರತಾಗಿಲ್ಲ. ಹೊಕ್ಕಳು ದೇಹದ ಅತ್ಯಂತ ನಿರ್ಣಾಯಕ ಭಾಗವಾಗಿದ್ದು, ಅದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಅದು ಸಾಮಾನ್ಯವಾಗಿ ಮರೆತುಹೋಗುವ ದೇಹದ ಭಾಗ. ಹೊಕ್ಕಳನ್ನು ನಿಯಮಿತವಾಗಿ ದ್ರಾಕ್ಷಿ ಬೀಜದ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಜೊಜೊಬಾ ಎಣ್ಣೆಯಂತಹ ಎಣ್ಣೆಗಳಿಂದ ಸ್ವಚ್ಛಗೊಳಿಸಬೇಕು.

ಸೋಂಕು ತಗುಲುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ:

ಹೊಕ್ಕಳನ್ನು ಸ್ವಚ್ಛವಾಗಿ ಇಡುವುದು ಅಗತ್ಯ. ನೀವು ಹೊಕ್ಕಳನ್ನು ಚೆನ್ನಾಗಿ ಒಣಗಿಸದಿದ್ದರೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಗೆ ಸಂತಾನೋತ್ಪತ್ತಿಗೆ ಸೂಕ್ತವಾದ ಸ್ಥಳವಾಗುತ್ತದೆ. ಇದು ದೇಹದ ಇತರ ಭಾಗಗಳಿಗೆ ಹರಡುವ ಹಲವಾರು ಸೋಂಕುಗಳಿಗೆ ಕಾರಣವಾಗುತ್ತದೆ. ನೀವು ಟೀ ಟ್ರೀ ಆಯಿಲ್, ಸಾಸಿವೆ ಎಣ್ಣೆ, ತೆಂಗಿನ ಎಣ್ಣೆಯನ್ನು ಆ ಸೋಂಕುಗಳನ್ನು ಕಡಿಮೆ ಮಾಡಲು ಬಳಸಬಹುದು.

ಇದನ್ನೂ ಓದಿ: Skin Care Tips: ಸೆನ್ಸಿಟಿವ್ ಚರ್ಮವನ್ನು ಗುರುತಿಸುವುದು ಹೇಗೆ?

ಹೊಟ್ಟೆನೋವಿಗೆ ಚಿಕಿತ್ಸೆ ನೀಡುತ್ತದೆ:

ಅಜೀರ್ಣ, ಅತಿಸಾರ ಮತ್ತು ಫುಡ್ ಪಾಯ್ಸನ್​ನಂತಹ ಕೆಲವು ಸಮಸ್ಯೆಗಳ ಸಾಮಾನ್ಯ ಲಕ್ಷಣಗಳೆಂದರೆ ಹೊಟ್ಟೆ ನೋವು. ಹೊಕ್ಕಳಿಗೆ ಎಣ್ಣೆಯನ್ನು ಹಾಕುವುದರಿಂದ ಈ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಹಾಗೇ, ಮಲಬದ್ಧತೆಯನ್ನು ಕೂಡ ನಿಯಂತ್ರಿಸುತ್ತದೆ.

ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ:

ಮುಟ್ಟಿನ ನೋವು ಭಯಾನಕವಾಗಿರುತ್ತದೆ. ಆ 4 ದಿನಗಳು ನಿಮ್ಮನ್ನು ನೋವಿನ ಪ್ರಪಂಚದಲ್ಲಿ ನರಳುವಂತೆ ಮಾಡುತ್ತದೆ. ಹರಳೆಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಹೊಕ್ಕಳಿಗೆ ಹಾಕುವುದರಿಂದ ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ.

ಮಹಿಳೆಯರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ:

ಹೊಕ್ಕಳು ತಾಯಿ ಮತ್ತು ಮಗುವಿನ ನಡುವಿನ ಕೊಂಡಿಯಾಗಿದೆ. ಆದ್ದರಿಂದ ಇದು ಸಂತಾನೋತ್ಪತ್ತಿ ಮತ್ತು ಫರ್ಟಿಲಿಟಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. ತೆಂಗಿನೆಣ್ಣೆ ಸಾಮಾನ್ಯವಾಗಿ ಕೂದಲು ಮತ್ತು ಚರ್ಮಕ್ಕೆ ಅದರ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಆದರೆ, ಈ ತೆಂಗಿನ ಎಣ್ಣೆಯು ಮಹಿಳೆಯರ ಫಲವತ್ತತೆ ಹೆಚ್ಚಿಸುವ ನೈಸರ್ಗಿಕ ಪರಿಹಾರಗಳಲ್ಲಿ ಒಂದಾಗಿದೆ. ಗರ್ಭಾಶಯದಲ್ಲಿರುವ ಮೊಟ್ಟೆಗಳ ಗುಣಮಟ್ಟವನ್ನು ಸುಧಾರಿಸಲು ಮತ್ತು ಗರ್ಭಾಶಯವನ್ನು ಪೋಷಿಸಲು, ಹೊಟ್ಟೆಯ ಮೇಲೆ ಸಾವಯವ ಆಲಿವ್ ಎಣ್ಣೆಯನ್ನು ಮಸಾಜ್ ಮಾಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್