ಹಸಿರು ಪಟಾಕಿ ಎಂದರೇನು? ಗುರುತಿಸುವುದು ಹೇಗೆ, ಎಲ್ಲಿ ಖರೀದಿಸಬೇಕು? ಇಲ್ಲಿದೆ ಮಾಹಿತಿ
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಹಾಗೂ ಎನ್ಇಇಆರ್ಐನ ವಿಜ್ಞಾನಿಗಳು ಹಸಿರು ಪಟಾಕಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಹಸಿರು ಪಟಾಕಿ ಉತ್ಪಾದನೆಗೆ ಕೇಂದ್ರ ಸರ್ಕಾರ ದೇಶದ 230 ಕಂಪನಿಗಳಿಗೆ ಮಾತ್ರ ಅನುಮತಿ ನೀಡಿದೆ.
ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದು, ದೇಶದಲ್ಲಡೆ ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆಗಳಲ್ಲಿ ದೀಪ ಬೆಳಗಿ, ಪಟಾಕಿ (Firecrackers) ಸಿಡಿಸಿ ಸಂಭ್ರಮಿಸಲಾಗುತ್ತದೆ. ಪಟಾಕಿ ಸಿಡಿಸುವ ವಿಚಾರವಾಗಿ ಪರಿಸರ ಕಾಳಜಿ ಕೂಗು ಕೂಡ ಕೇಳಿ ಬರುತ್ತದೆ. ಪಟಾಕಿ ಹಾರಿಸಬೇಡಿ ಬದಲಿಗೆ ಪರಿಸರಕ್ಕೆ ಪೂರಕವಾಗುವ ಪಟಾಕಿಗಳನ್ನು ಹಾರಿಸಿ ಸಿಡಿಸುವಂತೆ ಜಾಗೃತಿ ಅಭಿಯಾನಗಳು ಆರಂಭವಾಗುತ್ತದೆ. ಅಲ್ಲದೆ ಸರ್ಕಾರ ಕೂಡ ಪ್ರತಿ ವರ್ಷ ಜಾಗೃತಿ ಮೂಡಿಸುತ್ತದೆ. 2018ರ ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಹಾಗೂ ವಾಯುಮಾಲಿನ್ಯ ತಡೆ ಮತ್ತು ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ 2020ರಲ್ಲಿ ಅಂದಿನ ಸರ್ಕಾರ ಪಟಾಕಿ ನಿಷೇಧಿಸಿತ್ತು. ಅಲ್ಲದೆ ಹಸಿರು ಪಟಾಕಿ (Green Firecrackers) ಸಿಡಿಸುವಂತೆ ಸೂಚಿಸಿತ್ತು.
ಹಾಗಿದ್ದರೆ ಏನಿದು ಹಸಿರು ಪಟಾಕಿ? ಪತ್ತೆ ಮಾಡುವುದು ಹೇಗೆ? ಪರಿಸರಕ್ಕೆ ಪೂರಕವೇ ಎಂಬುವುದನ್ನು ಇಲ್ಲಿ ತಿಯೋಣ..
ಏನಿದು ಹಸಿರು ಪಟಾಕಿ?
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಹಾಗೂ ಎನ್ಇಇಆರ್ಐನ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಹಸಿರು ಪಟಾಕಿಯಲ್ಲಿ ಲೀಥಿಯಂ, ಆರ್ಸೆನಿಕ್, ಬೇರಿಯಂ ಮತ್ತು ಸತುವಿನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ.
ಹಸಿರು ಪಟಾಕಿ ಹಾಗೂ ಸಾಮಾನ್ಯ ಪಟಾಕಿಗೆ ಇರುವ ವ್ಯತ್ಯಾಸ
- ಹಸಿರು ಪಟಾಕಿ ಮತ್ತು ಸಾಮಾನ್ಯ ಪಟಾಕಿ ಎರಡೂ ಮಾಲಿನ್ಯ ಉಂಟು ಮಾಡುತ್ತದೆ
- ಹಸಿರು ಪಟಾಕಿ, ಸಾಮಾನ್ಯ ಪಟಾಕಿಗಿಂದ ಶೇ30 ರಷ್ಟು ಕಡಿಮೆ ವಾಯುಮಾಲಿನ್ಯ ಮಾಡುತ್ತದೆ
- ಹಸಿರು ಪಟಾಕಿ ಕಡಿಮೆ ಹೊಗೆ ಹೊರಸೂಸುತ್ತದೆ. ಮತ್ತು ದೂಳು ಹೀರಿಕೊಳ್ಳುತ್ತದೆ
- ಹಸಿರು ಪಟಾಕಿಯಲ್ಲಿ ಬೇರಿಯಂ ಮತ್ತು ನೈಟ್ರೇಟ್ ಇರುವುದಿಲ್ಲ
- ಹಸಿರು ಪಟಾಕಿ ಅಧಿಕ ಶಬ್ದ ಹಾಗೂ ಹೊಗೆ ಸೂಸುವ ಬದಲು ನೀರಿನ ಆವಿಯನ್ನು ಬಿಡುಗಡೆ ಮಾಡುತ್ತದೆ.
ಹಸಿರು ಪಟಾಕಿ ಖರೀದಿಸುವುದು ಎಲ್ಲಿ?
ಹಸಿರು ಪಟಾಕಿ ಉತ್ಪಾದನೆಗೆ ಸರ್ಕಾರ ದೇಶದ 230 ಕಂಪನಿಗಳಿಗೆ ಮಾತ್ರ ಅನುಮತಿ ನೀಡಿದೆ. ಮತ್ತು ಇವುಗಳನ್ನು ಮಾರಾಟ ಮಾಡಲು ಪರವಾನಿಗೆ ಅತ್ಯಗತ್ಯ. ಬೀದಿ ಬದಿ ವ್ಯಾಪಾರಿಗಳಿಂದ ಹಸಿರು ಪಟಾಕಿಗಳನ್ನು ಖರೀದಿಸಬಾರದು. ಪರವಾನಗಿ ಹೊಂದಿರುವ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು.
ಇದನ್ನೂ ಓದಿ: ಕರ್ನಾಟಕದಲ್ಲಿ ಪಟಾಕಿ ಬ್ಯಾನ್: ಹಸಿರು ಪಟಾಕಿ ಎಂದು ತಿಳಿಯಲು ಬಂತು ಕ್ಯೂ ಆರ್ ಕೋಡ್ ಸ್ಕ್ಯಾನ್
ಹಸಿರು ಪಟಾಕಿ ಗುರುತಿಸುವುದು ಹೇಗೆ?
ಹಸಿರು ಪಟಾಕಿಗಳು ಶೆಲ್ ಗಾತ್ರಕ್ಕಿಂತಲೂ ಕಡಿಮೆ ಗಾತ್ರದಲ್ಲಿ ಮಾಡಲಾಗಿರುತ್ತದೆ. ಪಟಾಕಿಗಳ ಪ್ಯಾಕ್ ಮೇಲೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ (CSIR), ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ವಿಶಿಷ್ಟ ಹಸಿರು ಲೋಗೋ ಇರುತ್ತದೆ. ಇದರ ಮೂಲಕ ಗುರುತಿಸಬಹುದು. ಅಲ್ಲದೆ ಕ್ಯೂಆರ್ ಕೋಡ್ ಸ್ಕ್ಯಾನ್ ಕೂಡ ಇರಲಿದೆ.
ಗ್ರಾಹಕರು ಪ್ಲೇಸ್ಟೋರ್ನಿಂದ CSIR, NEERI ಗ್ರೀನ್ ಕ್ಯೂಆರ್ ಕೋಟ್ ಅಪ್ಲಿಕೇಶನ್ ಬಳಸಿ ಸ್ಕ್ಯಾನರ್ ಅನ್ನು ಡೌನ್ಲೋಡ್ ಮಾಡಿ ಅದರ ಮೂಲಕ ಗ್ರಾಹಕರು ಹಸಿರು ಪಟಾಕಿಗಳನ್ನು ಗುರುತಿಸಬಹುದು. SWAS, SAFAL ಮತ್ತು STAR ಎಂಬ ಮೂರು ವರ್ಗದಲ್ಲಿ ಹಿಸಿರು ಪಟಾಕಿಗಳು ಸಿಗುತ್ತವೆ. ಇವನ್ನು CSIR ಅಭಿವೃದ್ಧಿಪಡಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ