ಸುಡು ಬಿಸಿಲಿನ ನಡುವೆ ಈ ಹೊಟ್ಟೆ ಕೆಟ್ಟು ಹೋದರೆ ಮುಗಿದೇ ಹೋಯಿತು. ಪದೇ ಪದೇ ಶೌಚಾಲಯಕ್ಕೆ ಹೋಗಿ ಬಂದು ಸುಸ್ತೋ ಸುಸ್ತು. ಭೇದಿಯಂತಹ ಸಮಸ್ಯೆಯನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಆದರೆ, ಮನೆಯಲ್ಲೇ ಇರುವ ಕೆಲವು ಪದಾರ್ಥಗಳಿಂದ ಔಷಧ ತಯಾರಿಸಿ ಸೇವಿಸುವುದು ಉತ್ತಮ. ಒಂದು ವೇಳೆ ಸಮಸ್ಯೆಯು ಅತಿಯಾದರೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.
ಭೇದಿ ಸಮಸ್ಯೆಗೆ ಸರಳ ಮನೆ ಮದ್ದುಗಳು:
- ಬೇಸಿಗೆಯಲ್ಲಿ ಭೇದಿಯ ಸಮಸ್ಯೆ ಕಾಣಿಸಿಕೊಂಡರೆ ಮೊಸರು ಸೇವಿಸುವುದು ಉತ್ತಮ.
- ಹೊಟ್ಟೆ ಕೆಟ್ಟು ಹೋಗಿದ್ದರೆ ಎಳನೀರು ಕುಡಿದರೆ ಈ ಸಮಸ್ಯೆಯು ನಿವಾರಣೆಯಾಗುತ್ತದೆ.
- ಮೊಸರಿಗೆ ಮೆಂತ್ಯೆ ಪುಡಿ ಹಾಗೂ ಜೀರಿಗೆ ಪುಡಿಯನ್ನು ಚೆನ್ನಾಗಿ ಮಿಶ್ರಣ ಮಾಡಿ ಸೇವಿಸುವುದರಿಂದ ಭೇದಿ ಸಮಸ್ಯೆಯು ನಿವಾರಣೆಯಾಗುತ್ತದೆ.
- ಒಂದು ಲೋಟ ನೀರಿಗೆ ಒಂದು ಚಮಚ ಕೋಕಮ್ ಜ್ಯೂಸ್, ಸ್ವಲ್ಪ ಸಕ್ಕರೆ ಹಾಗೂ ಉಪ್ಪನ್ನು ಹಾಕಿ ಬೆರೆಸಿ ಕುಡಿದರೆ ಪರಿಣಾಮಕಾರಿಯಾಗಿದೆ.
- ದಾಳಿಂಬೆಯ ಒಣ ಸಿಪ್ಪೆಯ ಹುಡಿಯನ್ನು ಮೊಸರಿನೊಂದಿಗೆ ಬೆರೆಸಿ ಸೇವಿಸುವುದು ಅತಿಸಾರಕ್ಕೆ ಉತ್ತಮವಾದ ಮನೆ ಮದ್ದಾಗಿದೆ.
- ಒಂದು ಲೋಟ ನೀರಿಗೆ ನಿಂಬೆ ರಸವನ್ನು ಸೇರಿಸಿ ಉಪ್ಪು ಹಾಗೂ ಸಕ್ಕರೆಯನ್ನು ಮಿಶ್ರಣ ಮಾಡಿಡಿ ಕುಡಿದರೆ ಲೂಸ್ ಮೋಷನ್ ತಕ್ಷಣವೇ ನಿಲ್ಲುತ್ತದೆ.
ಈ ಮನೆ ಮದ್ದನ್ನೊಮ್ಮೆ ಪ್ರಯತ್ನಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ