ಬೆಂಗಳೂರಿನಲ್ಲಿ ಕಿಡ್ನಿ ಸಮಸ್ಯೆಗಳು ಹೆಚ್ಚಳ; ಆಸ್ಪತ್ರೆಗಳಲ್ಲಿ ದಾಖಲಾಗುವವರ ಪ್ರಮಾಣ ಏರಿಕೆ
ಬೆಂಗಳೂರು ನಗರದಲ್ಲಿ ಈ ಹಿಂದೆ ಯಾವ ಬೇಸಿಗೆ ಸಂದರ್ಭದಲ್ಲೂ ಈ ಮಟ್ಟಿಗೆ ಕಿಡ್ನಿ ಸಮಸ್ಯೆಯ ಕೇಸ್ ದಾಖಲಾಗಿರಲಿಲ್ಲ ಎನ್ನುತ್ತಾರೆ ವೈದ್ಯರು. ಸುಮಾರು ಶೇ 49 ರಿಂದ 50 ರಷ್ಟು ಕೇಸುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. ಸಾಮಾನ್ಯ ಅವಧಿಗಿಂತ ಬೇಸಿಗೆಯಲ್ಲಿ ಶೇ 50 ರಷ್ಟು ಪ್ರಕರಣ ಹೆಚ್ಚು ಕಂಡು ಬಂದಿರುವುದು ಜನರ ಆತಂಕಕ್ಕೆ ಕಾರಣ ಆಗಿದೆ.
ಬೆಂಗಳೂರು, ಮೇ 4: ಬೆಂಗಳೂರು (Bengaluru) ನಗರದಲ್ಲಿ ಕಳೆದ ಎರಡು ದಿನಗಳಿಂದ ತುಸು ಮಳೆಯಾಗಿದ್ದರೂ ಹಲವು ವಾರಗಳಿಂದ ತಾಮಪಾನ (Temparature) ದಾಖಲೆ ಪ್ರಮಾಣದಲ್ಲಿದೆ. ಪರಿಣಾಮವಾಗಿ ಚಿಕ್ಕ ಮಕ್ಕಳಿಂದ ತೊಡಗಿ ದೊಡ್ಡವರ ವರೆಗೂ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಬಾಧಿಸ್ತಿದೆ. ಸದ್ಯ ಜ್ವರ, ಸುಸ್ತು ಹೀಟ್ ವೇವ್ಗಳ ಸಾಲಿಗೆ ಕಿಡ್ನಿ ಸಮಸ್ಯೆ ಕೂಡಾ ಸೇರಿದೆ. ಕಿಡ್ನಿ ತೊಂದರೆಗೆ (Kidney) ಒಳಗಾಗುವವರ ಸಂಖ್ಯೆ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ದುಪ್ಪಟ್ಟಾಗಿದೆ. ಮಹಿಳೆಯರಿಗಿಂತ ಪುರುಷರಲ್ಲಿ ಮೂರು ಪಟ್ಟು ಸಮಸ್ಯೆ ಹೆಚ್ಚು ಕಂಡು ಬಂದಿದ್ದು ವೈದ್ಯರು ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಕಿಡ್ನಿ ಸ್ಟೋನ್ ಉಂಟಾಗಲು ಕಾರಣವೇನು?
- ದೇಹದಲ್ಲಿನ ನಿರ್ಜಲೀಕರಣ. ಮನುಷ್ಯನ ದೇಹಕ್ಕೆ ದಿನವೊಂದಕ್ಕೆ 3ರಿಂದ 4 ಲೀ. ನೀರು ಅಗತ್ಯ
- ಬೇಸಿಗೆಯಲ್ಲಿ ಬೆವರು ಹೆಚ್ಚಾಗಿ ಹೋಗುವ ಜೊತೆಗೆ ದೇಹದಲ್ಲಿರುವ ನೀರಿನ ಅಂಶವನ್ನು ಕಸಿದುಕೊಳ್ಳುತ್ತದೆ
- ಇದು ನೇರವಾಗಿ ಮೂತ್ರದ ಸೋಂಕು ಹಾಗೂ ಕಿಡ್ನಿ ಸ್ಟೋನ್‌ಗೆ ಕಾರಣ
- ಮೂತ್ರದಿಂದ ಫಿಲ್ಟರ್ ಮಾಡಲಾದ ಕ್ಯಾಲ್ಸಿಯಂ ಮತ್ತು ಇತರ ವಸ್ತುಗಳಿಂದ ಕಿಡ್ನಿ ಸ್ಟೋನ್ ರೂಪುಗೊಳ್ಳುತ್ತವೆ.
- ವಿಶೇಷವಾಗಿ ಮಹಿಳೆಯರಲ್ಲಿ ಉರಿ ಮೂತ್ರದ ಸಮಸ್ಯೆ ಹೆಚ್ಚಾಗಿ ಇರುತ್ತದೆ.
- ಆದರೆ ಪುರುಷರಲ್ಲಿ ಕಿಡ್ನಿ ಸ್ಟೋನ್ ಕಾಣಿಸಿಕೊಳ್ಳುತ್ತದೆ.
ಏನು ಮಾಡಬೇಕು?
- ಮೂತ್ರ ವಿಸರ್ಜನೆಯನ್ನು ತಡೆಯಬಾರದು.
- ದಿನಕ್ಕೆ 2ರಿಂದ 3 ಲೀಟರ್ನಷ್ಟು ನೀರು ಅವಶ್ಯವಾಗಿ ಕುಡಿಯಬೇಕು
ಇದನ್ನೂ ಓದಿ: ಇವು ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಪ್ರಮುಖ ಕಾರಣ
ಬೆಂಗಳೂರು ನಗರದಲ್ಲಿ ಈ ಹಿಂದೆ ಯಾವ ಬೇಸಿಗೆ ಸಂದರ್ಭದಲ್ಲೂ ಈ ಮಟ್ಟಿಗೆ ಕಿಡ್ನಿ ಸಮಸ್ಯೆಯ ಕೇಸ್ ದಾಖಲಾಗಿರಲಿಲ್ಲ ಎನ್ನುತ್ತಾರೆ ವೈದ್ಯರು. ಸುಮಾರು ಶೇ 49 ರಿಂದ 50 ರಷ್ಟು ಕೇಸುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. ಸಾಮಾನ್ಯ ಅವಧಿಗಿಂತ ಬೇಸಿಗೆಯಲ್ಲಿ ಶೇ 50 ರಷ್ಟು ಪ್ರಕರಣ ಹೆಚ್ಚು ಕಂಡು ಬಂದಿರುವುದು ಜನರ ಆತಂಕಕ್ಕೆ ಕಾರಣ ಆಗಿದೆ. ಬಿಸಿಲಿಗೆ ಬೆವರು, ನೀರಿನಾಂಶದ ಕೊರತೆ ಮೂತ್ರದಲ್ಲಿ ಸೋಂಕು ಹಾಗೂ ಕಿಡ್ನಿ ಸ್ಟೋನ್ ಪ್ರಕರಣ ಹೆಚ್ಚಳ ಕಂಡು ಬರುತ್ತಿದೆ. ತಾಪಮಾನ ಏರಿಕೆಯು ಜನರಲ್ಲಿ ಮೂತ್ರಪಿಂಡದಲ್ಲಿ ಕಲ್ಲು ಸಮಸ್ಯೆಯನ್ನೂ ಉಲ್ಬಣಗೊಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ