White Tongue: ಬಿಳಿ ನಾಲಿಗೆಯಿಂದ ಈ ಆರೋಗ್ಯದ ಸಮಸ್ಯೆ ಉಂಟಾಗಬಹುದು

| Updated By: ಅಕ್ಷತಾ ವರ್ಕಾಡಿ

Updated on: Nov 27, 2022 | 7:38 AM

ಈ ಸಮಸ್ಯೆ ಬಹಳ ಗಂಭೀರ ಅಲ್ಲದಿದ್ದರೂ ಆದರೆ ಕೆಲವು ಸಂದರ್ಭಗಳಲ್ಲಿ (ಬಹಳ ಅಪರೂಪದ ಸಂದರ್ಭಗಳಲ್ಲಿ) ಬಿಳಿ ನಾಲಿಗೆ ಏಡ್ಸ್ ನಂತಹ ಗಂಭೀರ ಕಾಯಿಲೆಗೆ ಕಾರಣವಾಗಬಹುದು.

White Tongue: ಬಿಳಿ ನಾಲಿಗೆಯಿಂದ ಈ ಆರೋಗ್ಯದ ಸಮಸ್ಯೆ ಉಂಟಾಗಬಹುದು
white tongue
Image Credit source: Colgate
Follow us on

ನೀವು ಬಿಳಿ ನಾಲಿಗೆ(White Tongue)ಯನ್ನು ಹೊಂದಿದ್ದರೆ, ಅದು ನೀವು ಭಯ ಪಡುವಷ್ಟು ದೊಡ್ಡ ರೋಗವಲ್ಲ. ಆದರೆ ನೀವು ಅದನ್ನು ಪರಿಹರಿಸುವುದು ಹೇಗೆ ಎಂದು ತಿಳಿಯುವುದು ಅತ್ಯಂತ ಅಗತ್ಯವಾಗಿದೆ. ಯಾಕೆಂದರೆ ನೀವು ಇತರರೊಂದಿಗೆ ಮಾತನಾಡುವಾಗ ಸಾಕಷ್ಟು ಮುಜುಗರಕ್ಕೀಡು ಮಾಡುತ್ತದೆ. ಜೊತೆಗೆ ಸಾಕಷ್ಟು ಕಿರಿಕಿರಿಯೂ ಹೌದು.ಜೊತೆಗೆ ಇಂತಹ ಲಕ್ಷಣಗಳು ನಿಮ್ಮಲ್ಲಿ ಕಂಡುಬರಲು ಕಾರಣಗಳೇನು ಎಂಬುದರ ಕುರಿತು ಮಾಹಿತಿ ಇಲ್ಲಿದೆ. ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿದ್ದರೆ, ಅದು ಆರೋಗ್ಯದಲ್ಲಿ ಅಸಮತೋಲನವು ಉಂಟು ಮಾಡುತ್ತದೆ. ಇದರಿಂದಾಗಿ ನಾಲಿಗೆಯ ಮೇಲೆ ಬಿಳಿ ಬಣ್ಣದ ರೀತಿಯ ಪೊರೆ ಅಥವಾ ಪದರ ಉಂಟಾಗಲು ಕಾರಣವಾಗುತ್ತದೆ.

ಈ ಸಮಸ್ಯೆ ಬಹಳ ಗಂಭೀರ ಅಲ್ಲದಿದ್ದರೂ ಆದರೆ ಕೆಲವು ಸಂದರ್ಭಗಳಲ್ಲಿ (ಬಹಳ ಅಪರೂಪದ ಸಂದರ್ಭಗಳಲ್ಲಿ) ಬಿಳಿ ನಾಲಿಗೆ ಏಡ್ಸ್ ನಂತಹ ಗಂಭೀರ ಕಾಯಿಲೆಗೆ ಕಾರಣವಾಗಬಹುದು. ಇದಲ್ಲದೇ ಕೀಮೋಥೆರಪಿಯಂತಹ ಚಿಕಿತ್ಸೆಗಳನ್ನು ಪಡೆಯುವ ವ್ಯಕ್ತಿಗಳಲ್ಲಿ ಬಿಳಿ ನಾಲಿಗೆ ಕಂಡುಬರುತ್ತದೆ.
ಇಂತಹ ಬಿಳಿ ನಾಲಿಗೆ ಸಮಸ್ಯೆಯಿಂದ ನೀವೂ ಬಳಲುತ್ತಿದ್ದರೆ ನೀವು ಮಾಡಬೇಕಾಗಿರುವುದು ಇಷ್ಟೇ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕಿದೆ. ಅದಕ್ಕಾಗಿ ನೀವೂ ಸರಿಯಾದ ಜೀವನಶೈಲಿ ಹಾಗೂ ಉತ್ತಮ ಆಹಾರ ಕ್ರಮವನ್ನು ರೂಢಿಸಿಕೊಳ್ಳಬೇಕಿದೆ.

ಇದನ್ನು ಓದಿ: ಪ್ರತಿ ರಾತ್ರಿ ಮಲಗುವ ಮುನ್ನ ಈ ಅಭ್ಯಾಸವನ್ನು ರೂಢಿಸಿಕೊಳ್ಳಿ

ಅತಿಯಾದ ಯೋಚನೆ, ಒತ್ತಡವನ್ನು ಕಡಿಮೆ ಮಾಡಿ. ದೀರ್ಘಾವಧಿಯ ಒತ್ತಡವು ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಅಡ್ಡಿಯಾಗಬಹುದು. ಸರಿಯಾದ ನಿದ್ದೆ , ದೇಹವನ್ನು ನೈರ್ಮಲ್ಯದಿಂದ ಇಟ್ಟುಕೊಳ್ಳುವುದು, ಉತ್ತಮ ಆಹಾರ ಪದ್ದತಿ, ಸಾಕಷ್ಟು ವ್ಯಾಯಾಮವನ್ನು ನಿಮ್ಮ ಪ್ರತಿ ದಿನದ ಜೀವನ ಕ್ರಮದಲ್ಲಿ ಅಳವಡಿಸಿಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: