ನವಜಾತ ಶಿಶುವಿನ ಆರೋಗ್ಯದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾರಂಭದ ವರ್ಷದಲ್ಲಿ ಅವರಿಗೆ ನೀಡುವ ಆಹಾರ ಕ್ರಮಗಳ ಬಗ್ಗೆ ಪ್ರತಿ ತಾಯಿಯೂ ಎಚ್ಚರ ವಹಿಸಬೇಕಿದೆ. ಎದೆಹಾಲಿನ ಜೊತೆಗೆ ನೀಡುವ ಆಹಾರಗಳು ಮಗುವಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಚೀಸ್ ಪ್ರಾರಂಭದ ವರ್ಷದಲ್ಲಿ ಮಗುವಿಗೆ ನೀಡುವುದು ಎಷ್ಟು ಸೂಕ್ತ? ಯಾವ ತಿಂಗಳಿಂದ ಕೊಡಬೇಕು ಎಂಬೆಲ್ಲಾ ವಿಷಯಗಳ ಕುರಿತು ಮಾಹಿತಿ ಇಲ್ಲಿದೆ.
ನಿಮ್ಮ ಮಗುವಿಗೆ ತಿನಿಸುವ ಚೀಸ್ ಕಡಿಮೆ ಸೋಡಿಯಂ ಅಂಶವನ್ನು ಹೊಂದಿರಬೇಕು ಎಂದು ಆರೋಗ್ಯ ತಜ್ಞರಾದ ಡಾ ವಂಶಿಕಾ ಗುಪ್ತಾ, ಸಲಹೆ ನೀಡುತ್ತಾರೆ. ಪ್ರಾರಂಭದ ಮೊದಲ ಆರು ತಿಂಗಳ ನಂತರ ಮಗುವಿಗೆ ಮಗುವಿಗೆ ನೀಡುವ ಆಹಾರದಲ್ಲಿ ಚೀಸ್ ನೀಡಬಹದಾಗಿದೆ. ಇದು ಮಗುವಿನ ದೇಹಕ್ಕೆ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಜೀವಸತ್ವಗಳನ್ನು ಒದಗಿಸುತ್ತದೆ. 6 ತಿಂಗಳ ನಂತರ ಪಾಶ್ಚರೀಕರಿಸಿದ ಪೂರ್ಣ-ಕೊಬ್ಬಿನ ಚೀಸ್ ನೀಡಬಹದಾಗಿದೆ.
ಇದನ್ನೂ ಓದಿ: ಚಳಿಗಾಲದಲ್ಲಿ ನೀವು ಸೇವಿಸುವ ಆಹಾರ ಹೇಗಿರಬೇಕು, ಯಾವ ಆಹಾರ ಆರೋಗ್ಯಕ್ಕೆ ಹಾನಿಕರ ತಿಳಿಯಿರಿ
ಯಾವಾಗಲೂ ಚೀಸ್ ಖರೀದಿಸುವಾಗ ಪಾಶ್ಚರೀಕರಿಸಿದ ಹಾಲಿನೊಂದಿಗೆ ತಯಾರಿಸಲಾಗಿದೆಯೇ ಎಂದು ಲೇಬಲ್ ಪರಿಶೀಲಿಸಿ. ಚಿಕ್ಕ ಅಂಗಡಿಯಲ್ಲಿ ಚೀಸ್ ಖರೀದಿಸುತ್ತಿದ್ದರೆ, ಉತ್ಪನ್ನವನ್ನು ಪಾಶ್ಚರೀಕರಿಸಲಾಗಿದೆಯೇ ಎಂದು ಕೇಳಿ. ಮೃದುವಾದ ಚೀಸ್‌ಗಳನ್ನು ಒಳಗೊಂಡಂತೆ ಹೆಚ್ಚಿನ ಚೀಸ್‌ಗಳನ್ನು ಪಾಶ್ಚರೀಕರಿಸಿದ ಹಾಲಿನೊಂದಿಗೆ ತಯಾರಿಸಲಾಗುತ್ತದೆ. ಇವುಗಳನ್ನು ನೀಡಲು ಉತ್ತಮವಾಗಿದೆ. ಇಲ್ಲದಿದ್ದರೆ, ಶಿಶುಗಳಿಗೆ ಪಾಶ್ಚರೀಕರಿಸದ ಉತ್ಪನ್ನಗಳನ್ನು ನೀಡುವುದು ಆರೋಗ್ಯಕರವಲ್ಲ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: