ಇಷ್ಟಕ್ಕೂ ಕೊರೊನಾ ಸೋಂಕಿತ ವ್ಯಕ್ತಿಗೆ ಆಕ್ಸಿಜನ್​ ಎಷ್ಟು ಬೇಕು? ಆಕ್ಸಿಜನ್ ಕಾನ್ಸೆಂಟ್ರೇಟ್ ಮಾತ್ರವೇ ಸಾಕಾದೀತಾ?

ಕೊರೊನಾ ಮಹಾಮಾರಿಗೆ SARS-CoV-2 ಮಾಸ್ಕ್​ ಧರಿಸಿದರೆ ಸಾಕಾದೀತು ಎನ್ನುತ್ತದೆ ವೈದ್ಯಲೋಕ. ಇನ್ನು ಕೊರೊನಾ ವ್ಯಾಕ್ಸಿನ್​ ಹಾಕಿಸಿಕೊಂಡರೂ ಕೋವಿಡ್​ 19 ಅನ್ನು ತಡೆಗಟ್ಟಬಹುದು. ಇದರ ಹೊರತಾಗಿಯೂ ಕೊರೊನಾ ಪೀಡಿತ ವ್ಯಕ್ತಿಯಲ್ಲಿ ಸೋಂಕು ಉಲ್ಬಣಗೊಂಡಾಗ ಔಷಧೋಪಾಚಾರದ ಬಹಳಷ್ಟಿರುತ್ತದೆ. ಆ ಅವಧಿಯಲ್ಲಿ ಸೋಂಕಿತ ವ್ಯಕ್ತಿಯನ್ನು ಆಕ್ಸಿಜನ್​ ಮೂಲಕ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿಟ್ಟು, ಔಷಧೋಪಾಚಾರ ನಡೆಸಬೇಕಾಗುತ್ತದೆ. ಆ ಅವಧಿಯೇ ಸೋಂಕಿತ ವ್ಯಕ್ತಿಯ ಪ್ರಾಣಾಪಾಯ ದೃಷ್ಟಿಯಿಂದ ಮಹತ್ವದ್ದಾಗಿರುತ್ತದೆ.

ಇಷ್ಟಕ್ಕೂ ಕೊರೊನಾ ಸೋಂಕಿತ ವ್ಯಕ್ತಿಗೆ ಆಕ್ಸಿಜನ್​ ಎಷ್ಟು ಬೇಕು?  ಆಕ್ಸಿಜನ್ ಕಾನ್ಸೆಂಟ್ರೇಟ್ ಮಾತ್ರವೇ ಸಾಕಾದೀತಾ?
ಆಕ್ಸಿಜನ್
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on:May 04, 2021 | 11:22 AM

ಬೆಂಗಳೂರು: ಕೊರೊನಾ ಸೋಂಕು ಅಟ್ಟಹಾಸ ಮೆರೆದಿದ್ದೇ ಆಕ್ಸಿಜನ್​ ಗಾಗಿ ಹಾಹಾಕಾರ ಎದ್ದಿದೆ. ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲೂ ಆಕ್ಸಿಜನ್​ ಖಾಲಿಯಾಗಿ ಸೋಂಕಿತರು ಇಹಲೋಕ ತ್ಯಜಿಸುತ್ತಿದ್ದಾರೆ. ಸರ್ಕಾರಗಳ ಹೊಣೆಗೇಡಿತನ ಜಗಜ್ಜಾಹೀರಾಗುತ್ತಿದೆ. ಹಾಗಾದರೆ ವೈದ್ಯಕೀಯ ಪರಿಭಾಷೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗೆ ಆಕ್ಸಿಜನ್​ ಎಷ್ಟು ಬೇಕಾದೀತು? ಆಕ್ಸಿಜನ್ ಕಾನ್ಸೆಂಟ್ರೇಟ್ ಮಾತ್ರವೇ ಸಾಕಾ? ಎಂಬ ಪ್ರಶ್ನೆಗಳು ಎದುರಾಗುತ್ತವೆ. ಕೊರೊನಾ ಸೋಂಕಿತ ವ್ಯಕ್ತಿಗೆ ಅಗತ್ಯವಿರುವ ಆಕ್ಸಿಜನ್​ ಪ್ರಮಾಣ ಎಷ್ಟು ಅಂದ್ರೆ ಅದು ಆ ವ್ಯಕ್ತಿಗೆ ಯಾವ ಪ್ರಮಾಣದಲ್ಲಿ ಕೊರೊನಾ ಸೋಂಕು ತಗುಲಿದೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಸರಾಸರಿ ಶೇ. 10-20 ಮಂದಿಗೆ ಆಕ್ಸಿಜನ್ ಅಗತ್ಯವಿರುತ್ತದೆ. ಅದರಲ್ಲೂ ಎಲ್ಲಾ ಸೋಂಕಿತರಿಗೂ High flow nasal cannula (HFNC) ಅಗತ್ಯವಿರುವುದಿಲ್ಲ.

ಕೋವಿಡ್​ 19 ಎಂಬ ಕೊರೊನಾ ಮಹಾಮಾರಿಗೆ SARS-CoV-2 ಮಾಸ್ಕ್​ ಧರಿಸಿದರೆ ಸಾಕಾದೀತು ಎನ್ನುತ್ತದೆ ವೈದ್ಯಲೋಕ. ಇನ್ನು ಕೊರೊನಾ ವ್ಯಾಕ್ಸಿನ್​ ಹಾಕಿಸಿಕೊಂಡರೂ ಕೋವಿಡ್​ 19 ಅನ್ನು ತಡೆಗಟ್ಟಬಹುದು. ಇದರ ಹೊರತಾಗಿಯೂ ಕೊರೊನಾ ಪೀಡಿತ ವ್ಯಕ್ತಿಯಲ್ಲಿ ಸೋಂಕು ಉಲ್ಬಣಗೊಂಡಾಗ ಔಷಧೋಪಾಚಾರದ ಜರೂರತ್ತು ಬಹಳಷ್ಟಿರುತ್ತದೆ. ಆ ಅವಧಿಯಲ್ಲಿ ಸೋಂಕಿತ ವ್ಯಕ್ತಿಯನ್ನು ಆಕ್ಸಿಜನ್​ ಮೂಲಕ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿಟ್ಟು, ಔಷಧೋಪಾಚಾರ ನಡೆಸಬೇಕಾಗುತ್ತದೆ. ಆ ಅವಧಿಯೇ ಸೋಂಕಿತ ವ್ಯಕ್ತಿಯ ಪ್ರಾಣಾಪಾಯ ದೃಷ್ಟಿಯಿಂದ ಮಹತ್ವದ್ದಾಗಿರುತ್ತದೆ. ಆ ವೇಳೆ ಸೋಂಕನ್ನು ಕಡಿಮೆ ಮಾಡಿ, ವ್ಯಕ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ.

ಆಕ್ಸಿಜನ್​ ಅನ್ನು ಹೆಚ್ಚಾಗಿ ಬಳಸುವುದು ಕೈಗಾರಿಕೆಗಳಲ್ಲಿ. ಅಂದರೆ ಆಕ್ಸಿಜನ್ ಉತ್ಪಾದನೆಯೂ ಕೈಗಾರಿಕೆಗಳಲ್ಲಿಯೇ ನಡೆಯುತ್ತದೆ. ಕೈಗಾರಿಕೆ ಬಳಕೆಗಾಗಿ ಆಕ್ಸಿಜನ್ ಉತ್ಪಾದನೆ ಮಾಡುವುದರ ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಬಳಸುವುದಕ್ಕಾಗಿಯೂ ಆಕ್ಸಿಜನ್ ಅನ್ನು ಉತ್ಪಾದಿಸುತ್ತಾರೆ. ಆದರೆ ಅದು ನೇರವಾಗಿ ರೋಗಿಗಳಿಗೆ ನೀಡುವುದರಿಂದ ಅದು ಅತ್ಯಂತ ಶುದ್ಧವಾಗಿರಬೇಕು. ಅದೂ ಆಕ್ಸಿಜನ್ ಅನ್ನು ನೇರವಾಗಿ ರೋಗಿಯ ಶ್ವಾಸಕೋಶಕ್ಕೆ ತಲುಪುವ ಹಾಗೆ ನೀಡುವುದರಿಂದ ವೈದ್ಯಕೀಯ ಆಕ್ಸಿಜನ್ ಅನ್ನು ಸೂಕ್ಷ್ಮವಾಗಿ, ಅತ್ಯಂತ ಶುದ್ಧವಾಗಿ ತಯಾರಿಸಬೇಕಾಗುತ್ತದೆ. ಶೇ. 93ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಶುದ್ಧವಾಗಿರಬೇಕಾಗುತ್ತದೆ. ಗಮನಾರ್ಹ ಅಂಶವೆಂದ್ರೆ ನೇರವಾಗಿ ಹೊರಗಿನ ಗಾಳಿಯಲ್ಲಿರುವ ಆಮ್ಲಜನಕ ಅಶುದ್ಧವಾಗಿರುವ ಕಾರಣ ಮತ್ತು ರೋಗಿಗೆ ಅದನ್ನು ಹೀರಿಕೊಳ್ಳಿವುದು ತ್ರಾಸದಾಯಕವಾಗುವುದರಿಂದ ಗಾಳಿಯಲ್ಲಿರುವ ನೈಸರ್ಗಿಕ ಆಮ್ಲಜನಕದ ನೀಡದೆ ಶುದ್ಧೀಕರಿಸಿದ ಆಮ್ಲಜನಕವನ್ನು ಕೈಗಾರಿಕೆಗಳಲ್ಲಿ ತಯಾರಿಸಿ ನೀಡಬೇಕಾಗುತ್ತದೆ.

ವಯಸ್ಕರರಿಗೆ ಸಾಮಾನ್ಯ ಉಸಿರಾಟಕ್ಕೆ ಒಂದು ನಿಮಿಷಕ್ಕೆ ಏಳೆಂಟು ಲೀಟರ್​ ಶುದ್ಧ ಗಾಳಿ ಬೇಕಾಗುತ್ತದೆ. ಅಂದ್ರೆ ದಿನಕ್ಕೆ 11,000 ಲೀಟರ್ ಶುದ್ಧ​ ಗಾಳಿ ಬೇಕಾಗುತ್ತದೆ. ನಾವು ಒಳಕ್ಕೆ ಉಸಿರು ತೆಗೆದುಕೊಂಡಾಗ ಅದರಲ್ಲಿ ಶೇ. 21ರಷ್ಟು ಆಮ್ಲಜನಕ ಇರುತ್ತದೆ. ಅದೆ ಹೊರಕ್ಕೆ ಬಿಟ್ಟಾಗ ಅದರಲ್ಲಿ ಶೇ. 15ರಷ್ಟು ಆಮ್ಲಜನಕ ಇರುತ್ತದೆ. ಉಳಿದ ಭಾಗ ಅಂದ್ರೆ ಶೇ. 6ರಷ್ಟು ಶ್ವಾಸಕೋಶದಲ್ಲಿ ಉಳಿದುಕೊಳ್ಳುತ್ತದೆ. ಈ ಪ್ರಮಾಣವೇ ನಿರ್ಣಾಯಕವಾಗುವುದು. ಅಂದರೆ ಇದು ಕಡಿಮೆಯಾಗುತ್ತಾ ಸಾಗಿದಂತೆ ವ್ಯಕ್ತಿಗೆ ಕೃತಕ ಆಮ್ಲಜನಕ ನೀಡುವ ಪ್ರಮೇಯ ಎದುರಾಗುತ್ತದೆ. ಇನ್ನು ಕೊರೊನಾ ಸೋಂಕು ತೀವ್ರವಾಗಿರುವ ವ್ಯಕ್ತಿಯಲ್ಲಿ ನೈಸರ್ಗಿಕವಾಗಿ ಸಿಗುವ ಆಮ್ಲಜನಕವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಕುಂದುತ್ತಾ ಸಾಗುತ್ತದೆ. ಸರಿಯಾಗಿ ಆ ಅವಧಿಯಲ್ಲಿಯೇ ಕೃತಕ ಆಮ್ಲಜನಕದ ಜರೂರತ್ತು ಉದ್ಭವವಾಗುವುದು.

ಅಪಾಯದ ಗಂಟೆ ಬಾರಿಸುವ ಲಕ್ಷಣಗಳು ಏನೇನು?

ಕೊರೊನಾ ಸೋಂಕಿತ ವ್ಯಕ್ತಿಯಲ್ಲಿ ಆಕ್ಸಿಜನ್​ ಪ್ರಮಾಣ ಶೇ. 90ಕ್ಕಿಂತ ಕಡಿಮೆ ಆಗುತ್ತಿದ್ದಂತೆ ಅಪಾಯದ ಗಂಟೆ ಬಾರಿಸುತ್ತಿದೆ ಎಂದು ವೈದ್ಯರು ಎಚ್ಚೆತ್ತುಕೊಳ್ಳುತ್ತಾರೆ. 6 ನಿಮಿಷಗಳ ಕಾಲ ನಡೆಯುವ ಸ್ವಯಂ ಪರೀಕ್ಷೆಯನ್ನು ರೋಗಿಗೆ ಒಡ್ಡುತ್ತಾರೆ. ಅದರಲ್ಲಿ ಅವರು ವಿಫಲವಾದರೆ ಅಂದ್ರೆ ಸೋಂಕಿತ ವ್ಯಕ್ತಿ 6 ನಿಮಿಷ ಕಾಲ್ನಡಿಗೆಯನ್ನು ಮಾಡಲು ಆಗದೆ ಬಸವಳಿದರೆ ತತ್​ಕ್ಷಣ ರೋಗಿಗೆ ಆಕ್ಸಿಜನ್​ ನೀಡಲೇಬೇಕಾಗುತ್ತದೆ. ಹೀಗೆ ವಾಕಿಂಗ್​ ಮಾಡುವಾಗ ಆರೋಗ್ಯವಂತ ವ್ಯಕ್ತಿಯಲ್ಲಿನ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಆದರೆ ಸೋಂಕಿತರಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಾ ಹೋದರೆ.. ವಾಕಿಂಗ್ ಶುರುಮಾಡಿದ ಐದಾರು ನಿಮಿಷಕ್ಕೆ ರೋಗಿ ಏದುಸಿರು ಬಿಟ್ಟರೆ… ಸರಿಯಾಗಿ ಆಗಲೇ ವೈದ್ಯರು ಕೃತಕ ಆಕ್ಸಿಜನ್​ ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ.

ಇನ್ನು ಯಾರಿಗೆ ಎಷ್ಟು ಪ್ರಮಾಣದ ಆಕ್ಸಿಜನ್​ ನೀಡಬೇಕಾಗುತ್ತದೆ ಅಂದ್ರೆ ಕೆಲವರಿಗೆ ನಿಮಿಷಕ್ಕೆ ಒಂದೆರಡು ಲೀಟರ್​ ಆಕ್ಸಿಜನ್​ ಸಾಕಾದೀತು. ಅಂದ್ರೆ ವೈದ್ಯಕೀಯವಾಗಿ ನಿಮಿಷಕ್ಕೆ ಮೂರ್ನಾಲ್ಕು ಲೀಟರ್​ ಆಮ್ಲಜನಕ ನೀಡಬೇಕಾಗುತ್ತದೆ. ಆದರೆ ಕೆಲವರಿಗೆ High flow nasal cannula (HFNC) ಅಗತ್ಯವಿರುತ್ತದೆ. ಅಂತಹವರಿಗೆ ನಿಮಿಷಕ್ಕೆ 60 ಲೀಟರ್​ ಆಕ್ಸಿಜನ್​ ನೀಡಲೇಬೇಕಾಗುತ್ತದೆ. ಅಂದ್ರೆ ಗಂಟೆಗೆ 3,600 ಲೀಟರ್​ ಆಮ್ಲಜನಕ ಬೇಕಾಗುತ್ತದೆ. ಇನ್ನೂ ಕೆಲ ರೋಗಿಗಳ ವಿಷಯದಲ್ಲಿ ವಿಷಮ ಸ್ಥಿತಿ ತಲುಪಿದಾಗ 86,000 ಲೀಟರ್​ ಆಕ್ಸಿಜನ್​ ನೀಡಲೇಬೇಕಾಗುತ್ತದೆ. ಸಾಮಾನ್ಯವಾಗಿ ಒಂದು ಆಕ್ಸಿಜನ್ ಸಿಲಿಂಡರ್​ HFNC ಅಗತ್ಯದ ರೋಗಿಗಳಿಗೆ 4 ಗಂಟೆ ಕಾಲ ಬರುತ್ತದೆ.

ಇಷ್ಟೆಲ್ಲಾ ಹೇಳಿದ ಮೇಲೆ ಸೋಂಕಿತರಿಗೆ ಕಾಲಕಾಲಕ್ಕೆ ಅಗತ್ಯ ಆಕ್ಸಿಜನ್​ ನೀಡಿಬಿಟ್ಟರೆ ಅಷ್ಟೇ ಸಾಕಾಗುತ್ತದಾ ರೋಗಿಯನ್ನು ಉಳಿಸಿಕೊಳ್ಳಲು ಅಂದ್ರೆ ಉಹು: ಅದರ ಜೊತೆಗೆ ಔಷಧೋಪಾಚಾರವೂ ಪ್ರಧಾನವಾಗಿ ಬೇಕಾಗುತ್ತದೆ. ಹಾಗಾಗಿಯೇ ಮನೆಗಳಲ್ಲಿಯೇ Oxygen concentrator ಗಳನ್ನು ಇಟ್ಟುಕೊಂಡು ರೋಗಿಯನ್ನು ಗುಣಪಡಿಸಿಕೊಳ್ಳುತ್ತೇವೆ ಎನ್ನುವುದು ಮೂರ್ಖತನವಾದೀತು. ಕಾಲಕಾಲಕ್ಕೆ ಪರಿಣತ ವೈದ್ಯರ ನಿಗಾದಲ್ಲಿ ಔಷಧೋಪಾಚಾರವೂ ಬಹುಮುಖ್ಯವಾಗುತ್ತದೆ. ಹಾಗಾಗಿಯೇ ತಕ್ಷಣ ಆಸ್ಪತ್ರೆಯಲ್ಲಿ ಐಸಿಯು ಘಟಕದಲ್ಲಿ ಆಮ್ಲಜಕನ ಪಡೆಯುತ್ತಾ ಜೊತೆಜೊತೆಗೆ ಔಷಧೋಪಾಚಾರ ಪಡೆಯುವುದು ಅತ್ಯಗತ್ಯವಾಗುತ್ತದೆ.

(How much oxygen a Covid 19 patient needs Is oxygen concentrator enough is hospitalisation a must) Also Read: ಆಮ್ಲಜನಕ ಕೊರತೆ ನೀಗಿಸಲು ಆಕ್ಸಿಜನ್ ಪ್ಲಾಂಟ್ ಸಿದ್ಧಪಡಿಸಿದ ಚಾಮರಾಜನಗರ ಜಿಲ್ಲಾಡಳಿತ

Published On - 11:16 am, Tue, 4 May 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ