ಕೊಬ್ಬು ತುಂಬಾ ಅಪಾಯಕಾರಿ, ದೇಹವನ್ನು ಕಾಡುವ ಅನೇಕ ಸಮಸ್ಯೆಗಳಿಗೆ ಕೊಬ್ಬು ನೇರ ಕಾರಣವಾಗಿರುತ್ತದೆ. ಕೊಬ್ಬು ನಿಮ್ಮ ರಕ್ತ ಹಾಗೂ ಜೀವಕೋಶಗಳೆರಡರಲ್ಲೂ ತುಂಬಿದೆ. ನಿಮ್ಮ ದೇಹದಲ್ಲಿನ ಹೆಚ್ಚಿನ ಕೊಲೆಸ್ಟ್ರಾಲ್ ನಿಮ್ಮ ಯಕೃತ್ತಿನಿಂದ ಉತ್ಪತ್ತಿಯಾಗುತ್ತದೆ. ಉಳಿದವು ನೀವು ತಿನ್ನುವ ಆಹಾರದಿಂದ ಬರುತ್ತದೆ, ಹಾರ್ಮೋನುಗಳು, ವಿಟಮಿನ್ ಡಿ ಮತ್ತು ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುವ ರಾಸಾಯನಿಕಗಳನ್ನು ಉತ್ಪಾದಿಸಲು, ನಿಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ಅಗತ್ಯವಿರುತ್ತದೆ.
ಲೋ ಡೆನ್ಸಿಟಿ ಲಿಪೊಪ್ರೋಟಿನ್ ಕೊಲೆಸ್ಟ್ರಾಲ್ ಹಾಗೂ ಹೈ ಡೆನ್ಸಿಟಿ ಲಿಪೊಪ್ರೋಟಿನ್ ಕೊಲೆಸ್ಟ್ರಾಲ್ ಎನ್ನುವ ಎರಡು ಬಗೆಗಳಿವೆ. ಲೋ ಡೆನ್ಸಿಟಿ ಲಿಪೊಪ್ರೋಟಿನ್ ಕೊಲೆಸ್ಟ್ರಾಲ್ ಕೆಟ್ಟ ಕೊಬ್ಬಾಗಿದ್ದು, ಇದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತವೆ.
ಇನ್ನು ಹೈ ಡೆನ್ಸಿಟಿ ಕೊಲೆಸ್ಟ್ರಾಲ್ ಉತ್ತಮ ಕೊಲೆಸ್ಟ್ರಾಲ್ ಆಗಿದ್ದು, ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ನಮ್ಮ ರಕ್ತದಲ್ಲಿ ಕಂಡುಬರುವ ಜಿಗುಟಾದ ವಸ್ತುವಾಗಿದೆ.
ನಮ್ಮ ದೇಹದಲ್ಲಿ ಎರಡು ರೀತಿಯ ಕೊಲೆಸ್ಟ್ರಾಲ್ ಇರುತ್ತದೆ. ಒಂದು ಒಳ್ಳೆಯ ಕೊಲೆಸ್ಟ್ರಾಲ್, ಇನ್ನೊಂದು ಕೆಟ್ಟ ಕೊಲೆಸ್ಟ್ರಾಲ್. ನಮ್ಮ ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ ಅದು ಹೃದಯಾಘಾತ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ಅದಕ್ಕಾಗಿಯೇ ನಾವು ಆರೋಗ್ಯಕರ ಆಹಾರಗಳೆಂದು ಪರಿಗಣಿಸಲಾದ ವಸ್ತುಗಳನ್ನು ಮಾತ್ರ ಸೇವಿಸುವುದು ಮುಖ್ಯವಾಗಿದೆ. ಒಳ್ಳೆಯ ಕೊಲೆಸ್ಟ್ರಾಲ್ ನಮ್ಮ ನರಗಳಿಗೆ ಬಹಳ ಮುಖ್ಯವಾದ ವಸ್ತುವಾಗಿದೆ, ಇದು ಜೀವಕೋಶದ ಪೊರೆಗೆ ಶಕ್ತಿ ಮತ್ತು ನಮ್ಯತೆಯನ್ನು ನೀಡುತ್ತದೆ. ಆದರೆ ಆಗಾಗ್ಗೆ ಎಣ್ಣೆಯುಕ್ತ ಆಹಾರವನ್ನು ಸೇವಿಸುವುದರಿಂದ, ರಕ್ತನಾಳಗಳಲ್ಲಿನ ಕೊಲೆಸ್ಟ್ರಾಲ್ ಮಿತಿಯನ್ನು ಮೀರಿ ಹೆಚ್ಚಾಗುತ್ತದೆ, ಇದು ನಂತರ ಮಾರಕ ಎಂದು ಸಾಬೀತುಪಡಿಸುತ್ತದೆ.
ಈ ಆಹಾರಗಳ ಸೇವನೆ ಮಾಡಿ ಕೊಲೆಸ್ಟ್ರಾಲ್ನಿಂದ ದೂರವಿರಿ
ನಟ್ಸ್: ಬಾದಾಮಿ, ಪೀನಟ್ಸ್ ಹಾಗೂ ವಾಲ್ನಟ್ನಲ್ಲಿ ಒಮೆಗಾ ಫ್ಯಾಟಿ ಆ್ಯಸಿಡ್ಗಳು ಹೆಚ್ಚಿರುತ್ತವೆ.
ಓಟ್ಸ್ ತಿನ್ನಿ : ಇನ್ಸುಲಿನ್ ಪ್ರತಿರೋಧ ಸುಧಾರಣೆಗೊಳ್ಳುತ್ತದೆ ಮತ್ತು ದೇಹದ ತೂಕವನ್ನು ಆರೋಗ್ಯಕರ ರೀತಿಯಲ್ಲಿ ಕಾಪಾಡಿಕೊಳ್ಳಬಹುದು. ಅಧಿಕ ಕೊಲೆಸ್ಟ್ರಾಲ್ ಅನ್ನು ಹೊಂದಿರುವ ರೋಗಿಗಳಿಗೆ, ಓಟ್ಸ್‌ನಲ್ಲಿರುವ ಬೆಟಾ ಗ್ಲುಕನ್ ದೇಹದಲ್ಲಿರುವ ಹೆಚ್ಚುವರಿ ಲಿಪಿಡ್‍ಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
ಧಾನ್ಯಗಳು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣಕ್ಕೆ ತರುತ್ತವೆ. ಹಣ್ಣು, ತರಕಾರಿಗಳು, ಒಣ ಬೀಜಗಳು, ಸಾಲ್ಮನ್, ಆಲಿವ್ ಎಣ್ಣೆ ಮತ್ತು ಅವಕಾಡೋ ಮುಂತಾದ ಆಹಾರಗಳು ರಕ್ತದ ಲಿಪಿಡ್‍ಗಳನ್ನು ಸುಧಾರಿಸುತ್ತವೆ.
ಕಲ್ಲಂಗಡಿ ಸೇವನೆ : ಈ ಹಣ್ಣು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಏಕೆಂದರೆ ಅದರಲ್ಲಿ ಅಧಿಕ ಲೈಕೋಪಿನ್ ಇದೆ. ಲೈಕೋಪಿನ್ ಒಂದು ಕೆರೊಟಿನಾಯ್ಡ್ ಆಗಿದ್ದು, ಅದರ ನಿತ್ಯ ಸೇವನೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಹಣ್ಣು ಹೆಚ್ಡಿಎಲ್ ಅನ್ನು ಸುಧಾರಿಸುತ್ತದೆ ಮತ್ತು ಎಲ್‍ಡಿಎಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ.
ಸಿಹಿ ಪದಾರ್ಥಗಳ ಸೇವನೆ ಬೇಡ ಆವಕಾಡೋ ಬಳಸಿ: ನಮ್ಮ ದೇಹಕ್ಕೆ ಒಂದು ನಿರ್ದಿಷ್ಟ ಪ್ರಮಾಣದ ಸಕ್ಕರೆ ಅವಶ್ಯಕವಾಗಿದೆ, ಆದರೆ ಅದರ ರುಚಿ ಹೆಚ್ಚು ತಿನ್ನಲು ಒತ್ತಾಯಿಸುತ್ತದೆ. ಆದರೆ ಅವು ನಮ್ಮ ಆರೋಗ್ಯಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡುತ್ತವೆ. ಈ ಕಾರಣದಿಂದಾಗಿ, ಕೆಟ್ಟ ಕೊಲೆಸ್ಟ್ರಾಲ್ ಅಂದರೆ ಎಲ್ಡಿಎಲ್ ದೇಹದಲ್ಲಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ಆವಕಾಡೋವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿ
ಎಣ್ಣೆಯುಕ್ತ ಆಹಾರಗಳನ್ನು ಬಿಟ್ಟುಬಿಡಿ: ನೀವು ಫ್ರೆಂಚ್ ಫ್ರೈಸ್, ಆಲೂಗಡ್ಡೆ ಚಿಪ್ಸ್, ಸಮೋಸಾ, ಕಚೋರಿ ಮುಂತಾದ ಕರಿದ ಪದಾರ್ಥಗಳಿಂದ ದೂರವಿರುವುದು ಉತ್ತಮ.
ಸಂಸ್ಕರಿಸಿದ ಆಹಾರ: ಸಂಸ್ಕರಿತ ಆಹಾರದ ಟ್ರೆಂಡ್ ಹೆಚ್ಚಾಗಿದ್ದು, ಅದರಲ್ಲೂ ಈ ರೀತಿಯ ಮಾಂಸಾಹಾರ ಮತ್ತು ಎಣ್ಣೆಯುಕ್ತ ಆಹಾರ ಸೇವಿಸುವವರ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯ ಎದುರಾಗಬಹುದು.