Health: ಯಾರು ಹೋಗ್ತಾರೆ ದಿನಾ ಬೆಳಗ್ಗೆದ್ದು ಜಿಮ್​ಗೆ

| Updated By: ಶ್ರೀದೇವಿ ಕಳಸದ

Updated on: Jul 04, 2022 | 3:42 PM

Gym Applications : ಸಾಕಷ್ಟು ಫಿಟ್​ನೆಸ್​ ಅಪ್ಲಿಕೇಷನ್​ಗಳು ಬೆರಳತುದಿಯಲ್ಲಿಯೇ ಉಚಿತವಾಗಿ ಲಭ್ಯ. ನಿಮ್ಮ ಬಳೀ ಸ್ಮಾರ್ಟ್​ಫೋನ್ ಅಥವಾ ಟ್ಯಾಬ್​ ಇದ್ದರೆ ಮುಗಿಯಿತು. ಲೈವ್​ ಕೋರ್ಸ್​ಗಳಿಗೆ ನೀವು ಖಂಡಿತ ಸೇರಬಹುದು. 

Health: ಯಾರು ಹೋಗ್ತಾರೆ ದಿನಾ ಬೆಳಗ್ಗೆದ್ದು ಜಿಮ್​ಗೆ
Source : Shape Magazine
Follow us on

Gym at Home : ಕೋವಿಡ್​ ಬದುಕನ್ನು ಎಲ್ಲಾ ರೀತಿಯಿಂದ ದಿವಾಳಿಗೆಬ್ಬಿಸಿಬಿಟ್ಟಿದೆ. ಸುಸ್ಥಿತಿಗೆ ಬರಲು ಅದೆಷ್ಟು ಸಮಯ ಬೇಕೋ. ಬುಡಮೇಲಾದ ಜೀವನಶೈಲಿಯಿಂದಾಗಿ ಅನೇಕರ ಬದುಕಿನ ದೋಣಿಗಳು ತತ್ತರಿಸಿ ಹೋಗಿವೆ. ಏನೇ ಆದರೂ ಇದರ ಹೊಡೆತದಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದಂತೂ ಮೊದಲ ಅಂಶವಾಗಿದೆ. ಅನೇಕರು ಅನೇಕ ಕಾರಣಗಳಿಂದ ಜಿಮ್​ಗೆ ಹೋಗುವುದನ್ನು ತಪ್ಪಿಸಿರಬಹುದು. ಅಲ್ಲದೆ, ವರ್ಕ್​ ಫ್ರಂ ಹೋಂನಿಂದಾಗಿ ವ್ಯಾಯಾಮ, ನಡಿಗೆಯನ್ನೂ ಕಡೆಗಣಿಸಿರಬಹುದು. ಆದರೆ ಈಗ ಎಲ್ಲವೂ ಒಂದು ಹಂತಕ್ಕೆ ಬರುತ್ತಿದ್ದರೂ ದಿನವೂ ಎದ್ದು ಜಿಮ್​ಗೆ ಹೋಗೋದಕ್ಕೆ ಸಮಯವಿಲ್ಲ ಅಥವಾ ಮನಸ್ಸಿಲ್ಲವೆಂದೂ ಇರಬಹುದು. ಸಮಯವಿದ್ದರೂ ದುಬಾರಿ ಜಿಮ್​ ಸಲಕರಣೆಗಳನ್ನು ಖರೀದಿಸಲು ಆಗದಿರಬಹುದು. ಆದರೆ ಆರೋಗ್ಯವನ್ನಂತೂ ಕಾಪಾಡಿಕೊಳ್ಳಲೇಬೇಕಲ್ಲ? ಹಾಗಿದ್ದರೆ ಮನೆಯೊಳಗಿದ್ದೇ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಫಿಟ್​ನೆಸ್ ಕಾಪಾಡಿಕೊಳ್ಳುವುದು ಹೇಗೆ ಎನ್ನುವವರಿಗೆ ಇಲ್ಲಿ ಸಲಹೆಗಳನ್ನು ನೀಡಲಾಗಿದೆ.

1. ಅಪ್ಲಿಕೇಷನ್ ಎಂಬ ಆಪ್ತಮಿತ್ರ

ನಿಮ್ಮ ಮನೆಯ ಹತ್ತಿರದ ಜಿಮ್​ ಸ್ಟುಡಿಯೋಗಳಿಗೆ ಹೋಗಲು ಸಮಯ, ಅವಕಾಶವಿದ್ದರೂ ಪಾರ್ಕಿಂಗ್ ಸಮಸ್ಯೆಯೋ ಮತ್ತೊಂದೇನೋ ಸಮಸ್ಯೆಯಿಂದ ದೈಹಿಕ ಚಟುವಟಿಕೆಗಳಿಂದ ದೂರ ಉಳಿಯುತ್ತಿರಬಹುದು.  ಆದರೆ ಕೊರೊನಾ ಸಮಯದಲ್ಲಿ ಸಾಕಷ್ಟು ಫಿಟ್​ನೆಸ್​ ಅಪ್ಲಿಕೇಷನ್​ಗಳು ಬೆರಳತುದಿಯಲ್ಲಿಯೇ ಉಚಿತವಾಗಿ ಲಭ್ಯ. ನಿಮ್ಮ ಬಳೀ ಸ್ಮಾರ್ಟ್​ ಫೋನ್ ಅಥವಾ ಟ್ಯಾಬ್​ ಇದ್ದರೆ ಮುಗಿಯಿತು. ಲೈವ್​ ಕೋರ್ಸ್​ಗಳಿಗೆ ನೀವು ಖಂಡಿತ ಸೇರಬಹುದು.

ಇದನ್ನೂ ಓದಿ : Health: ನಿಮ್ಮನ್ನು ಕಾಡುವ ತಲೆನೋವು ಎಂಥದೆಂದು ತಿಳಿದುಕೊಂಡಿದ್ದೀರಾ?

2. ಯೂಟ್ಯೂಬ್‌ನಲ್ಲಿ ವರ್ಕೌಟ್ ವೀಡಿಯೊಗಳು
ಮನೆಯಲ್ಲಿಯೇ ವ್ಯಾಯಾಮ ಮಾಡುವುದರಿಂದ ನಿಮ್ಮ ಇಚ್ಛೆಯಂತೆ ಬೇಕಾದಷ್ಟು ಹೊತ್ತು, ಬೇಕಾದ ಸಮಯದಲ್ಲಿ ವ್ಯಾಯಾಮ ಮಾಡಬಹುದು. ಜಿಮ್​, ಸ್ಟುಡಿಯೋದಲ್ಲಿ ಜುಂಬಾ, ಯೋಗ ಸೇರಿಕೊಳ್ಳಲು ಸಾಧ್ಯವಾಗದಿದ್ದರೆ ಯೂ ಟ್ಯೂಬ್ ಲೈವ್​ ಮೂಲಕ ಕಲಿಯಬಹುದು. ಉಚಿತವಾಗಿಯೇ ಹೊಸ ವಿಧಾನಗಳನ್ನು ಕಲಿಯಬಹುದು. ಮತ್ತೆ ಪ್ರಯತ್ನಿಸಲು, ವಿರಾಮ ತೆಗೆದುಕೊಳ್ಳಲು ರಿವೈಂಡ್​ ಮಾಡಿ ನೋಡಬಹುದು. ಪ್ರಯತ್ನಿಸಬಹುದು. ತರಬೇತುದಾರರು ಬೋರ್​ ಎನ್ನಿಸುತ್ತಿದ್ದಾರೆ ಎನ್ನಿಸಿದರೆ ಬೇರೆ ವಿಡಿಯೋ ಹಾಕಿಕೊಳ್ಳಬಹುದು.

3. ಒಂದೊಂದೇ ಹಂತ ತಲುಪಿ
ಚಿಕ್ಕ ಚಿಕ್ಕ ಗುರಿಗಳನ್ನು ಹೊಂದುವುದರ ಮೂಲಕ ಖಚಿತ ಗುರಿಯನ್ನು ಸಾಧಿಸಲು ಸಾಧ್ಯವಿದೆ. ದಿನಕ್ಕೆ ಒಂದು ಕಿ.ಮೀ. ಓಡುವುದು. ದಿನಕ್ಕೆ ಇಷ್ಟೇ ವ್ಯಾಯಾಮಗಳನ್ನು ಮಾಡುವುದು. ಕ್ರಮೇಣ ಅವಧಿಯನ್ನು ಹೆಚ್ಚಿಸುತ್ತ ಹೋಗುವುದು. ಹೀಗೆ ವರ್ಕ್​ ಔಟ್ ಮಾಡುತ್ತ ಪಟ್ಟಿಯಲ್ಲಿ ಗುರುತು ಹಾಕಿಕೊಂಡು ಆ ಪ್ರಕಾರ ವ್ಯಾಯಾಮ ಮಾಡಿದರೆ ನಿಮ್ಮಲ್ಲಾಗುವ ಬದಲಾವಣೆಗಳು ನಿಮಗೇ ತಿಳಿದು ಮನಸ್ಸು, ದೇಹ ಲವಲವಿಕೆಯಿಂದ ಇರುತ್ತದೆ.

ಇದನ್ನೂ ಓದಿ : Health: ಎಚ್ಚರ! ಎಲ್ಲವನ್ನೂ ದಕ್ಕಿಸಿಕೊಳ್ಳುತ್ತಿದ್ದೀರಿ, ಆದರೆ ನಿದ್ರೆಯನ್ನು?

4. ನೀವು ಏಕೆ ಪ್ರಾರಂಭಿಸಿದ್ದೀರಿ? 
ದಿನವೂ ವರ್ಕ್​ಔಟ್​ ಮಾಡುವುದರ ಬಗ್ಗೆ ಟಿಪ್ಪಣಿ ಮಾಡಿಟ್ಟುಕೊಳ್ಳಿ. ಮನಸ್ಸು, ದೇಹ ಹೇಗೆ ಪ್ರತಿಕ್ರಿಯಿಸಿತು ಆ ದಿನ ಎಂದು ಬರೆದಿಟ್ಟುಕೊಳ್ಳಿ. ನಿಮ್ಮೊಂದಿಗೆ ಮನೆ ಸದಸ್ಯರನ್ನೂ ವ್ಯಾಯಾಮ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಆಗ ಕೌಟುಂಬಿಕ ಸಾಮರಸ್ಯ ಹೆಚ್ಚುತ್ತದೆ. ಆರೋಗ್ಯವೂ ಸುಧಾರಿಸುತ್ತದೆ.

 

Published On - 3:42 pm, Mon, 4 July 22