Hydrophobia : ನೀರು ಕಂಡೊಡನೆ ಭಯಪಡುವುದು ಈ ರೋಗದ ಲಕ್ಷಣವಾಗಿರಬಹುದು, ಜೋಕೆ!
ಮನುಷ್ಯನು ನಗು, ಅಳು, ಭಯಹೀಗೆ ಎಲ್ಲಾ ಭಾವನೆಗಳನ್ನು ಸನ್ನಿವೇಶಕ್ಕೆ ತಕ್ಕಂತೆ ವ್ಯಕ್ತಪಡಿಸುತ್ತಾನೆ. ಕೆಲವರು ನಾನಾ ವಿಚಾರಗಳಿಗೆ ಹೆದರಿಕೊಳ್ಳುತ್ತಾರೆ. ಕೆಲವರಿಗೆ ನೀರನ್ನು ಕಂಡರೆ ವಿಪರೀತ ಭಯ. ಇದನ್ನು ಹೈಡ್ರೋಫೋಬಿಯಾ ಎಂದು ಕರೆಯುತ್ತಾರೆ. ಆದರೆ ನೀರಿನ ಭಯವೆಂದು ಸುಮ್ಮನೆ ಕುಳಿತು ಕೊಂಡರೆ ಈ ರೋಗದ ಲಕ್ಷಣವು ಆಗಿರಬಹುದು. ಹಾಗಾದ್ರೆ ಹೈಡ್ರೋಫೋಬಿಯಾ ಲಕ್ಷಣಗಳು ಕಂಡು ಬಂದರೆ ಯಾವ ರೋಗದ ಲಕ್ಷಣವಾಗಿರುತ್ತದೆ ಎನ್ನುವುದರ ಸಂಪೂರ್ಣ ಮಾಹಿತಿಯೂ ಇಲ್ಲಿದೆ.
ಆರೋಗ್ಯವಂತ ವ್ಯಕ್ತಿಯೊಬ್ಬನು ನೀರು ನೋಡಿ ಹೆದರಿ ಶ್ವಾನದಂತೆ ವರ್ತಿಸುವ ಪ್ರಕರಣವೊಂದು ಕೆಲದಿನಗಳ ಹಿಂದೆ ಬೆಳಕಿಗೆ ಬಂದಿದೆ. ವ್ಯಕ್ತಿಯ ವರ್ತನೆಗೆ ಸಂಬಂಧ ಪಟ್ಟ ವಿಡಿಯೋವೊಂದು ವೈರಲ್ ಆಗಿವೆ. ಈತನ ಲಕ್ಷಣಗಳನ್ನು ನೋಡಿದರೆ ಹುಚ್ಚು ನಾಯಿ ಕಚ್ಚಿರಬಹುದು ಎಂದು ಊಹಿಸಲಾಗಿದೆ. ಹೌದು, ಸೋಕಿಂತ ವ್ಯಕ್ತಿಗೆ ಪ್ರಾರಂಭದಲ್ಲಿ ಸಣ್ಣ ಪುಟ್ಟ ಲಕ್ಷಣಗಳು ಕಂಡು ಬಂದರೆ ಸರಿಯಾದ ಚಿಕಿತ್ಸೆ ನೀಡದೇ ಹೋದರೆ ಸೋಂಕಿತ ವ್ಯಕ್ತಿಯಿಂದ ಉಳಿದವರಿಗೂ ತೊಂದರೆಯಾಗಬಹುದು.
ರೇಬಿಸ್ ಅಥವಾ ಹುಚ್ಚುನಾಯಿ ರೋಗವು ವೈರಾಣುವಿನಿಂದ ಬರುವ ಮಾರಣಾಂತಿಕ ಪ್ರಾಣಿಜನ್ಯ ರೋಗವಾಗಿದ್ದು, ಒಮ್ಮೆ ಈ ಸಮಸ್ಯೆ ಬಂದೊಡನೆ ಚಿಕಿತ್ಸೆಯೆನ್ನುವುದು ದೂರದ ಮಾತಾಗಿರುತ್ತದೆ. ರೋಗಪೀಡಿತ ನಾಯಿಗಳು, ಬೆಕ್ಕುಗಳು ಮತ್ತಿತರ ಪ್ರಾಣಿಗಳು ಕಚ್ಚುವುದರಿಂದ ರೇಬಿಸ್ ರೋಗವು ಹರಡುತ್ತದೆ. ಈ ಹೀಗಾಗಿ ಸೋಂಕಿತ ಪ್ರಾಣಿಗಳು ಕಚ್ಚಿದ ನಂತರ ಅಥವಾ ಸೋಂಕಿತ ಪ್ರಾಣಿಗಳ ಉಗುರುಗಳನ್ನು ಸ್ಪರ್ಶಿಸಿದ ನಂತರ ರೋಗಿಗೆ ತಕ್ಷಣವೇ ಚುಚ್ಚುಮದ್ದು ನೀಡದಿದ್ದರೆ, ರೇಬೀಸ್ ಎಂಬ ವೈರಸ್ ಸೋಂಕಿಗೆ ಒಳಗಾಗಿ ಕೊನೆಗೆ ಸಾವೇ ಅನಿವಾರ್ಯವಾಗುತ್ತದೆ.
ಹೈಡ್ರೋಫೋಬಿಯಾ ಎಂದರೇನು?
ಹೈಡ್ರೋಫೋಬಿಯಾವನ್ನು ಸರಳ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ, ಇದೊಂದು ರೇಬಿಸ್ ರೋಗ ಲಕ್ಷಣವಾಗಿದೆ. ಸೋಂಕಿತ ವ್ಯಕ್ತಿಯು ನೀರನ್ನು ಕಂಡರೆ ಭಯ ಪಟ್ಟುಕೊಳ್ಳುತ್ತಾನೆ.
ರೇಬೀಸ್ ರೋಗದ ಲಕ್ಷಣಗಳು:
ರೇಬೀಸ್ ಸೋಂಕಿತ ಪ್ರಾಣಿ ಕಚ್ಚಿದಾಗ ದೇಹದ ಭಾಗದಲ್ಲಿ ತುರಿಕೆ ಮತ್ತು ನೋವು ಪ್ರಾರಂಭವಾಗುತ್ತದೆ. ಇದಲ್ಲದೆ, ಮಾನವ ಸ್ವಭಾವದಲ್ಲಿ ಬದಲಾವಣೆಗಳು ಪ್ರಾರಂಭವಾಗುತ್ತವೆ. ಕ್ರಮೇಣವಾಗಿ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಸೋಂಕಿತ ಪ್ರಾಣಿಯಂತೆ ಆತನ ವರ್ತನೆಯೂ ಇರುತ್ತದೆ. ಸೋಕಿಂತ ವ್ಯಕ್ತಿಯ ಬಾಯಿಯಿಂದ ನೊರೆ ಬರಲು ಪ್ರಾರಂಭಿಸುತ್ತದೆ. ನಿದ್ರಾಹೀನತೆ ಮತ್ತು ಹೈಡ್ರೋಫೋಬಿಯಾ ಸೇರಿದಂತೆ ಇನ್ನಿತ್ತರ ಲಕ್ಷಣಗಳು ಕಂಡು ಬರಬಹುದು.
ಈ ರೇಬೀಸ್ ಸೋಂಕಿತ ವ್ಯಕ್ತಿಯಲ್ಲಿ ನೀರಿನ ಭಯ ಕಾಡುವುದೇಕೆ?
ರೇಬೀಸ್ ನರಮಂಡಲದ ಮೇಲೆ ಪರಿಣಾಮ ಬೀರಿದಾಗ ಗಂಟಲು ಅಥವಾ ಗಂಟಲಕುಳಿಯಲ್ಲಿ ತೀವ್ರವಾದ ಸೆಳೆತ ಕಾಣಿಸಿಕೊಳ್ಳುತ್ತವೆ. ವ್ಯಕ್ತಿಯು ಯಾವುದೇ ಆಹಾರವನ್ನು ನುಂಗಲು ಪ್ರಯತ್ನಿಸಿದಾಗ ಈ ನೋವಿನ ಸೆಳೆತದಿಂದ ನುಂಗುವುದಕ್ಕೆ ಕಷ್ಟವಾಗುತ್ತದೆ. ಗಂಟಲಕುಳಿನ ಈ ಅನಿಯಂತ್ರಿತ ಸಂಕೋಚನಗಳು ಹೈಡ್ರೋಫೋಬಿಯಾ ರೋಗಲಕ್ಷಣಗಳಿಗೆ ಕಾರಣವಾಗಿವೆ. ಸೋಂಕಿತ ವ್ಯಕ್ತಿಯು ಎಷ್ಟೇ ಬಾಯಾರಿಕೆಯಾಗಿದ್ದರೂ ವಿಪರೀತ ಸೆಳೆತವಿರುವ ನೀರೂ ಕಂಡರೆ ಭಯ ಪಡುತ್ತಾನೆ. ಈ ಹೈಡ್ರೋಫೋಬಿಯಾ ರೋಗ ಲಕ್ಷಣವು ಕಂಡು ಬಂದ ವ್ಯಕ್ತಿಯೂ ಜೋರಾಗಿ ಕಿರುಚಲು ಪ್ರಾರಂಭಿಸುತ್ತಾನೆ. ಈ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ನಾಯಿ ಅಥವಾ ಸೋಂಕಿತ ಪ್ರಾಣಿ ಕಚ್ಚಿದ್ದರೆ ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ.
ಹೈಡ್ರೋಫೋಬಿಯಾವನ್ನು ದೂರ ಮಾಡುವುದು ಹೇಗೆ?
ರೋಗಿಯ ಈ ನೀರಿನ ಭಯವನ್ನು ಹೋಗಲಾಡಿಸಲು ಕೊಳ ಅಥವಾ ಈಜುಕೊಳ ಇತ್ಯಾದಿಗಳ ಸುತ್ತಲೂ ನಡೆಯಲು ಬಿಡಿ. ಆದರೆ ಕೊಳದ ಸುತ್ತಲೂ ನಡೆಯುವಾಗ ಒಬ್ಬಂಟಿಯಾಗಿ ಬಿಟ್ಟರೆ, ರೋಗಿಯು ನೀರಿನಲ್ಲಿ ಬೀಳುವ ಸಾಧ್ಯತೆಯೂ ಇದೆ. ರೇಬೀಸ್ ಸೋಂಕಿತ ವ್ಯಕ್ತಿಯಲ್ಲಿರುವ ನೀರಿನ ಭಯವನ್ನು ದೂರ ಮಾಡಲು ನೀರಿಗೆ ಸಂಬಂಧಿಸಿದ ವೀಡಿಯೊಗಳು ಹಾಗೂ ಚಿತ್ರಗಳನ್ನು ತೋರಿಸುವುದರಿಂದ ಈ ಭಯವು ದೂರವಾಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ