ಇತ್ತೀಚೆಗಿನ ದಿನಗಳಲ್ಲಿ ಬಹುತೇಕರು ಬಿಡುವಿಲ್ಲದ ಕೆಲಸದಲ್ಲಿರುವವರೇ ಹೆಚ್ಚು. ಅತಿಯಾದ ಕೆಲಸದ ಒತ್ತಡವು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಹೀಗಾಗಿ ದಿನಕ್ಕೆ ಇಂತಿಷ್ಟು ಗಂಟೆಗಳ ಕಾಲ ಮಾತ್ರ ಕೆಲಸ, ನಿದ್ದೆ ಹಾಗೂ ವ್ಯಾಯಾಮ ಮಾಡಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ.
ಕೆಲವರಿಗೆ ಕೆಲಸ ಬಿಟ್ಟರೆ ಬೇರೇನೂ ಇಲ್ಲ, ತಮ್ಮ ಹೆಚ್ಚಿನ ಸಮಯವನ್ನು ಉದ್ಯೋಗದ ಸ್ಥಳದಲ್ಲಿ ಕಳೆಯುತ್ತಾರೆ. ದಿನದ 24 ಗಂಟೆಯೂ ಕೆಲಸ ಮಾಡಲು ಸಿದ್ಧರಿರುವವರಿದ್ದಾರೆ. ಆದರೆ ಈ ಕೆಲಸ ಹಾಗೂ ವೈಯುಕ್ತಿಕ ಜೀವನದ ನಡುವೆ ವಿಶ್ರಾಂತಿ ಅತ್ಯಗತ್ಯ. ಅದಲ್ಲದೇ ವಯಸ್ಕರ ಕೆಲಸದ ಅವಧಿ ದಿನಕ್ಕೆ 8 ಗಂಟೆಗಳ ಮಾತ್ರ ಆಗಿರಬೇಕು ಎಂದು ಐಸಿಎಂಆರ್ ಸೂಚಿಸಿದೆ.
ಪ್ರತಿಯೊಬ್ಬ ವ್ಯಕ್ತಿಗೂ ದೇಹಕ್ಕೆ ವಿಶ್ರಾಂತಿ ಅತ್ಯಗತ್ಯ. ಆರೋಗ್ಯವು ಉತ್ತಮವಾಗಿರಲು ನಿದ್ದೆಯು ಸರಿಯಾಗಿ ಮಾಡಬೇಕು. ಸಾಮಾನ್ಯವಾಗಿ ವಯಸ್ಕರು 8 ಗಂಟೆಗಳ ಕಾಲ ನಿದ್ರಿಸಬೇಕು. ದೇಹಕ್ಕೆ ವಿಶ್ರಾಂತಿ ಸಿಗುವುದಲ್ಲದೆ ಹಾರ್ಮೋನ್ ನಿಯಂತ್ರಣ ಹಾಗೂ ನೆನಪಿನ ಶಕ್ತಿಯ ಹೆಚ್ಚಳಕ್ಕೆ ನಿದ್ದೆಯು ಅಗತ್ಯವಾಗಿದೆ. ನಿದ್ದೆ ಮಾಡುವುದರಿಂದ ಸ್ಥೂಲಕಾಯತೆ, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಮಾನಸಿಕ ಸಮಸ್ಯೆಗಳು ಸೇರಿದಂತೆ ಇನ್ನಿತ್ತರ ಸಮಸ್ಯೆಗಳನ್ನು ದೂರವಾಗಿಸಲು ಸಹಕಾರಿಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಅಡುಗೆಗೆ ಬಳಸುವ ಈ ಎಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಧಿಕ, ಆರೋಗ್ಯಕ್ಕೆ ಅಪಾಯ ಖಂಡಿತ
ಯೋಗ ಹಾಗೂ ವ್ಯಾಯಾಮದಂತಹ ದೈಹಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿರುವುದರಿಂದ ಫಿಟ್ನೆಸ್ ಆಗಿರಲು ಸಾಧ್ಯ. ಅದಲ್ಲದೇ ಒತ್ತಡರಹಿತ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದು. ಹೆಚ್ಚಿನವರನ್ನು ಕಾಡುತ್ತಿರುವ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಸ್ಥೂಲಕಾಯದಂತಹ ದೀರ್ಘಕಾಲದ ಕಾಯಿಲೆಗಳನ್ನು ದೂರವಾಗಿಸಲು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಅಗತ್ಯ. ಹೀಗಾಗಿ ವಯಸ್ಕರು ದಿನಕ್ಕೆ ಕನಿಷ್ಠ 60 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದೆ. ವಾಕಿಂಗ್, ಸೈಕ್ಲಿಂಗ್, ಮೆಟ್ಟಿಲುಗಳನ್ನು ಹತ್ತಿ ಇಳಿಯುವಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ಆಹಾರ ಮಾರ್ಗಸೂಚಿಯನ್ನು ಅನುಸರಿಸಿದರೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು ಎಂದು ತಿಳಿಸಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ