ICMR Dietary Guidelines Part 7: ಅಡುಗೆಗೆ ಬಳಸುವ ಈ ಎಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಧಿಕ, ಆರೋಗ್ಯಕ್ಕೆ ಅಪಾಯ ಖಂಡಿತ

ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಕೊಬ್ಬಿನ ಅಂಶಗಳು ಹಾಗೂ ಎಣ್ಣೆಯ ಪ್ರಮಾಣವು ಅಧಿಕವಾಗಿರುತ್ತದೆ. ಇದರಿಂದ ಸದ್ದಿಲ್ಲದೇ ಆರೋಗ್ಯಕ್ಕೆ ಹಾನಿಯುಂಟಾಗುವ ಸಾಧ್ಯತೆಯೇ ಅಧಿಕವಾಗಿರುತ್ತದೆ ಎಂದು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ ಭಾರತೀಯರ ಆಹಾರ ಮಾರ್ಗಸೂಚಿಯಲ್ಲಿ ಈ ಬಗ್ಗೆ ತಿಳಿಸಿದೆ.

ICMR Dietary Guidelines Part 7: ಅಡುಗೆಗೆ ಬಳಸುವ ಈ ಎಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಧಿಕ, ಆರೋಗ್ಯಕ್ಕೆ ಅಪಾಯ ಖಂಡಿತ
ICMR Dietary Guidelines
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: May 17, 2024 | 7:26 PM

ನಾವೆಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುತ್ತೇವೆ. ಆದರೆ ಕಲುಷಿತ ವಾತಾವರಣ, ಧೂಳು, ಹೊಗೆ ಹಾಗೂ ಸೇವಿಸುವ ಆಹಾರಗಳ ಬಗ್ಗೆ ಗಮನ ಹರಿಸುವುದೇ ಇಲ್ಲ. ಎಣ್ಣೆಗಳನ್ನು ಮಿತವಾಗಿ ಬಳಸುವುದು ಉತ್ತಮ. ಕೊಬ್ಬಿನಾಂಶವನ್ನು ಪಡೆಯಲು ವಿವಿಧ ಎಣ್ಣೆ ಬೀಜಗಳು, ಬೀಜಗಳು, ದ್ವಿದಳ ಧಾನ್ಯಗಳನ್ನು ಆಯ್ಕೆಮಾಡಿಕೊಳ್ಳಬೇಕು. ಮನೆಯಲ್ಲಿ ತಯಾರಿಸಿದ ಆಹಾರವು ಹೆಚ್ಚಿನ ಕೊಬ್ಬಿನ ಅಂಶವಿರುವುದರಿಂದ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ. ಆಹಾರದಲ್ಲಿ ತುಪ್ಪ ಅಥವಾ ಬೆಣ್ಣೆಯಂತಹ ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯ ಬಗ್ಗೆ ಐಸಿಎಂಆರ್ ಎಚ್ಚರಿಸಿದೆ.

ಅಡುಗೆಗೆ ಬಳಸುವ ಕೊಬ್ಬುಗಳು/ಎಣ್ಣೆಗಳು ಸೇರಿದಂತೆ ನಾವು ಸೇವಿಸುವ ಆಹಾರಗಳಿಂದ ದೇಹಕ್ಕೆ ಅಗತ್ಯವಿರುವ ಕೊಬ್ಬಿನ ಅವಶ್ಯಕತೆಗಳನ್ನು ಪೂರೈಸಬೇಕು. ಹಾಗಾಗಿ ಧಾನ್ಯಗಳು, ರಾಗಿ, ಬೇಳೆಕಾಳುಗಳು, ಬೀನ್ಸ್ ಅಥವಾ ತರಕಾರಿಗಳು ಸೇರಿದಂತೆ ಬಹುತೇಕ ಎಲ್ಲಾ ಆಹಾರಗಳು ಕೊಬ್ಬನ್ನು ಹೊಂದಿರುತ್ತವೆ. ಬೀಜಗಳು, ಎಣ್ಣೆಕಾಳುಗಳು, ಮಾಂಸಗಳು ಮತ್ತು ಡೈರಿ ಉತ್ಪನ್ನಗಳಲ್ಲಿ ಕೊಬ್ಬಿನಾಂಶಗಳು ಹೇರಳವಾಗಿದೆ. ಆದರೆ, ಅಡುಗೆಗೆ ಬಳಸುವ ಎಣ್ಣೆಗಳ ಬಳಕೆಯು ಮಿತವಾಗಿರಬೇಕೆಂದು ತಿಳಿಸಿದೆ.

ಕೊಬ್ಬನ್ನು ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು, ಬಹುಅಪರ್ಯಾಪ್ತ ಕೊಬ್ಬು ಹಾಗೂ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಹೀಗೆ ಮೂರು ವಿಧಗಳಾಗಿ ವರ್ಗೀಕರಿಸಲಾಗಿದೆ. ಟ್ರಾನ್ಸ್ ಕೊಬ್ಬುಗಳು (ಹೈಡ್ರೋಜನೀಕರಿಸಿದ ತೈಲಗಳು) ಬೇಕರಿ ತಿಂಡಿ ತಿನಿಸುಗಳಲ್ಲಿ ಕಂಡು ಬರುತ್ತದೆ. ಈ ತಿಂಡಿ ತಿನಿಸುಗಳ ಸೇವನೆಯು ಮಿತವಾಗಿದ್ದರೆ ಆರೋಗ್ಯಕ್ಕೆ ಹಿತ.

ಇದನ್ನೂ ಓದಿ: ಈ ರೀತಿಯ ಆಹಾರ ಪದ್ಧತಿ ಬಂಜೆತನಕ್ಕೆ ಕಾರಣವಾಗಬಹುದು; ಸಂಶೋಧನೆ

ಆದರೆ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಸ್ಯಾಚುರೇಟೆಡ್ ಕೊಬ್ಬು ತುಪ್ಪ ಅಥವಾ ಬೆಣ್ಣೆ, ತೆಂಗಿನ ಎಣ್ಣೆ, ತಾಳೆ ಎಣ್ಣೆ ಮತ್ತು ವನಸ್ಪತಿಯಂತಹ ಎಣ್ಣೆಗಳಲ್ಲಿ ಕಂಡು ಬರುತ್ತದೆ. ಸ್ಯಾಚುರೇಟೆಡ್ ಕೊಬ್ಬು ಸ್ಥೂಲಕಾಯದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಉಲ್ಲೇಖಿಸುತ್ತದೆ. ದಿನಕ್ಕೆ 2000-ಕೆ.ಕೆ.ಎಲ್ ಆಹಾರದಲ್ಲಿ ದಿನಕ್ಕೆ 10 ಗ್ರಾಂ ಗಿಂತ ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬುಗಳು ಅನಾರೋಗ್ಯಕರವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ