ICMR Dietary Guidelines Part 4 : 6 ತಿಂಗಳು ತುಂಬಿದ ಮಗುವಿಗೆ ನೀಡುವ ಪೂರಕ ಆಹಾರವು ಹೇಗಿರಬೇಕು? ಪ್ರಮಾಣ ಎಷ್ಟಿರಬೇಕು?

| Updated By: ಅಕ್ಷತಾ ವರ್ಕಾಡಿ

Updated on: May 14, 2024 | 6:27 PM

ತಾಯಿಯ ಎದೆಹಾಲು ಅಮೃತಕ್ಕೆ ಸಮ. ಹೀಗಾಗಿ ಆರು ತಿಂಗಳವರೆಗೆ ತಾಯಿ ಎದೆ ಹಾಲು ನೀಡಬೇಕು. ಆ ನಂತರದಲ್ಲಿ ಮಗುವಿಗೆ ಬೆಳವಣಿಗೆಗೆ ಹೆಚ್ಚಿನ ಆಹಾರದ ಅಗತ್ಯವಿರುವುದರಿಂದ ಎದೆಹಾಲಿನೊಂದಿಗೆ ದ್ರವರೂಪದ ಆಹಾರವನ್ನು ನೀಡಬೇಕೆಂದು ಐಸಿಎಂಆರ್ ಭಾರತೀಯರಿಗೆ ಪರಿಷ್ಕೃತ ಆಹಾರ ಮಾರ್ಗಸೂಚಿಯಲ್ಲಿ ಸಲಹೆಗಳನ್ನು ನೀಡಿದೆ.

ICMR Dietary Guidelines Part  4 : 6 ತಿಂಗಳು ತುಂಬಿದ ಮಗುವಿಗೆ ನೀಡುವ ಪೂರಕ ಆಹಾರವು ಹೇಗಿರಬೇಕು? ಪ್ರಮಾಣ ಎಷ್ಟಿರಬೇಕು?
Follow us on

ಹುಟ್ಟಿದ ಮಗುವಿಗೆ ತಾಯಿಯ ಎದೆಹಾಲುಹಾಲು ಮುಖ್ಯ ಆಹಾರವಾಗಿರುತ್ತದೆ. ಮಗುವಿನ ಬೆಳವಣಿಗೆ ಸರಿಯಾಗಿ ಆಗಬೇಕಾದರೆ ಪೌಷ್ಟಿಕಾಂಶಯುಕ್ತ ಆಹಾರವು ಬಹುಮುಖ್ಯವಾಗಿದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್, ಹೈದರಾಬಾದ್, ಭಾರತೀಯರಿಗೆ ಪರಿಷ್ಕೃತ ಆಹಾರ ಮಾರ್ಗಸೂಚಿಯಲ್ಲಿ ನೀಡಿದ ಸಲಹೆಯಲ್ಲಿಯಲ್ಲಿ ತಿಳಿಸಿದೆ. ಆರು ತಿಂಗಳ ಪೂರ್ಣಗೊಂಡ ಮಗುವಿಗೆ ಹೆಚ್ಚಿದ ಪೋಷಕಾಂಶಗಳ ಅಗತ್ಯತೆಗಳನ್ನು ಪೂರೈಸಲು ಸ್ತನ್ಯಪಾನದ ಜೊತೆಗೆ ಸಾಕಷ್ಟು ಮತ್ತು ಸೂಕ್ತವಾದ ಪೂರಕ ಆಹಾರಗಳನ್ನು ನೀಡುವುದು ಅತ್ಯಗತ್ಯ. ಕನಿಷ್ಠ ಎರಡು ವರ್ಷಗಳವರೆಗೆ ಪೂರಕ ಆಹಾರಗಳೊಂದಿಗೆ ಸ್ತನ್ಯಪಾನವನ್ನು ಮುಂದುವರಿಸಬೇಕು.

ಮಗುವಿಗೆ ಆರು ತಿಂಗಳು ತುಂಬಿದ ಬಳಿಕ ಸೂಕ್ತ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೌಷ್ಟಿಕಾಂಶದ ಅಗತ್ಯಗಳ ಹೆಚ್ಚಳವನ್ನು ಪೂರೈಸಲು ಎದೆ ಹಾಲು ಮಾತ್ರ ಸಾಕಾಗುವುದಿಲ್ಲ. ಆದ್ದರಿಂದ, ಸೂಕ್ತವಾಗಿ ತಯಾರಿಸಿದ ಪೂರಕ ಆಹಾರಗಳನ್ನು ಆರು ತಿಂಗಳ ನಂತರ ತಕ್ಷಣವೇ ನೀಡಬೇಕು. ಆಹಾರದ ಆಯ್ಕೆ, ಆಹಾರದ ಪ್ರಮಾಣ, ಆಹಾರದ ಸ್ಥಿರತೆಯನ್ನು ಗಮನದಲ್ಲಿರಿಸಿಕೊಳ್ಳಬೇಕು. 6 ರಿಂದ 12 ತಿಂಗಳವರೆಗೆ ಹಾಲುಣಿಸುವ ಶಿಶುಗಳಿಗೆ ಅರೆ ಘನ ಆಹಾರವು ಸೂಕ್ತವಾಗಿದೆ ಎಂದು ಐಸಿಎಂಆರ್ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಶಿಶುಗಳಿಗೆ ಪೂರಕ ಆಹಾರಗಳು ಯಾಕೆ ಮುಖ್ಯ?

ಮಗು ಹುಟ್ಟಿದ ಮೊದಲ ಆರು ತಿಂಗಳ ಅವಧಿಯಲ್ಲಿ, ತಾಯಿಯ ಹಾಲು ಮಾತ್ರ ಅಥವಾ ಮಗುವಿನ ಬೆಳವಣಿಗೆಗೆ ಸಾಕಾಗುತ್ತದೆ. ಆದರೆ ಶಿಶುಗಳು ಕ್ಷಿಪ್ರ ಬೆಳವಣಿಗೆಯ ಹಂತದಲ್ಲಿರುವುದರಿಂದ ಪ್ರತಿ ಕೆಜಿ ದೇಹದ ತೂಕಕ್ಕೆ ಎಲ್ಲಾ ಪೋಷಕಾಂಶಗಳ ಅಗತ್ಯತೆಗಳು ಹೆಚ್ಚು. ಆರು ತಿಂಗಳ ಬಳಿಕ ಎದೆ ಹಾಲಿನ ಪ್ರಮಾಣ ಮತ್ತು ಪೋಷಕಾಂಶಗಳ ಸಾಂದ್ರತೆಯು ಕಡಿಮೆಯಾಗುತ್ತದೆ. ಹೀಗಾಗಿ ಶಿಶುಗಳಿಗೆ ನೀಡುವ ಪೂರಕ ಆಹಾರಗಳಲ್ಲಿ ಪ್ರೋಟೀನ್ ಅಂಶವು ಹೆಚ್ಚಿನ ಪ್ರಮಾಣದಲ್ಲಿರಬೇಕಾಗುತ್ತದೆ.

ಮತ್ತಷ್ಟು ಓದಿ: Health Tips: ನಿಂತು ನೀರು ಕುಡಿಯುವುದು ಆರೋಗ್ಯಕ್ಕೆ ಕೆಟ್ಟದ್ದಾ? ತಜ್ಞರು ಹೇಳುವುದೇನು?

ಶಿಶುಗಳಿಗೆ ಪೂರಕ ಆಹಾರ ಹಾಗೂ ಪ್ರಮಾಣ ಹೇಗಿರಬೇಕು?

ಆರು ತಿಂಗಳಲ್ಲಿ ಪೂರಕ ಆಹಾರಗಳನ್ನು ಪರಿಚಯಿಸುವಾಗ, 4-5 ದಿನಗಳವರೆಗೆ ತೆಳುವಾದ ನೀರಿಲ್ಲದ ಗಂಜಿ (ದಾಲ್ ಗಂಜಿ ಇತ್ಯಾದಿ) ನೊಂದಿಗೆ ಪ್ರಾರಂಭಿಸುವುದು ಒಳ್ಳೆಯದು. ತಿಂಗಳು ಕಳೆದಂತೆ ಕ್ರಮೇಣ ಆಹಾರವನ್ನು ಹೆಚ್ಚು ದಪ್ಪವಾಗಿಸುತ್ತ ಹೋಗಬೇಕು. ಮಗುವಿಗೆ ಹೊಸ ಆಹಾರಗಳನ್ನು (ಅಕ್ಕಿ ಸ್ಲರಿ, ಹಿಸುಕಿದ ಆಲೂಗಡ್ಡೆ, ಆವಿಯಲ್ಲಿ ಬೇಯಿಸಿದ ಮತ್ತು ಶುದ್ಧವಾದ ಸೇಬು ಇತ್ಯಾದಿ)ನೀಡಬಹುದು.ಆದರೆ ಶಿಶುವು ಹೊಸ ಆಹಾರಕ್ಕೆ ಹೊಂದಿಕೊಳ್ಳಲು ಸತತ ನಾಲ್ಕೈದು ದಿನಗಳು ಬೇಕಾಗುತ್ತದೆ.

6-8 ತಿಂಗಳ ಅವಧಿಗೆ, ಎದೆಹಾಲು ಕುಡಿಯುವ ಮಗುವಿಗೆ ದಿನಕ್ಕೆ ಕನಿಷ್ಠ ಎರಡು ಬಾರಿ ಪೂರಕ ಆಹಾರಗಳನ್ನು ನೀಡಬೇಕು. 9-24 ತಿಂಗಳ ಅವಧಿಯಲ್ಲಿ ಮಗುವಿಗೆ ನೀಡಲಾಗುವ ಪೂರಕ ಆಹಾರದ ಪ್ರಮಾಣವು ದಿನಕ್ಕೆ ಕನಿಷ್ಠ ಮೂರು ಬಾರಿ ಇರಬೇಕು. 6-24 ತಿಂಗಳ ಅವಧಿಗೆ ಸ್ತನ್ಯಪಾನ ಮಾಡದ ಮಕ್ಕಳಿಗೆ ಹಸುಹಾಲಿನ ಜೊತೆಗೆ ದಿನಕ್ಕೆ ಕನಿಷ್ಠ ನಾಲ್ಕು ಬಾರಿ ಆಹಾರವನ್ನು ನೀಡಬೇಕು.

ತಾಯಂದಿರಿಗೆ ನೈರ್ಮಲ್ಯದ ಬಗೆಗೆ ಗಮನವಿರಲಿ:

ಐಸಿಎಂಆರ್ ಮಾರ್ಗಸೂಚಿಯಲ್ಲಿ ಮಗುವಿಗೆ ಆಹಾರ ನೀಡುವಾಗ ತಾಯಂದಿರು ಮತ್ತು ಆರೈಕೆ ಮಾಡುವವರು ಅನುಸರಿಸುವ ನೈರ್ಮಲ್ಯಗೆ ಹೆಚ್ಚು ಒತ್ತು ನೀಡಿದೆ. ಅನೈರ್ಮಲ್ಯಯಿಂದಾಗಿ ಮಗುವಿನಲ್ಲಿ ಅತಿಸಾರ ಸಮಸ್ಯೆಯು ಉಂಟಾಗುತ್ತದೆ. ಮಗುವಿಗೆ ನೀಡುವ ಆಹಾರವನ್ನು ಸ್ವಚ್ಛಗೊಳಿಸಬೇಕು. ಶಿಶುವಿಗೆ ನೀಡುವ ಆಹಾರವನ್ನು ನೊಣಗಳು ಮತ್ತು ಕೀಟಗಳಿಂದ ರಕ್ಷಿಸಲು ಮುಚ್ಚಿಡಬೇಕು ಎಂದು ಸಲಹೆಯಲ್ಲಿ ಸೂಚಿಸಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ