ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಕರುಳಿನ ಆರೋಗ್ಯ ಸಮಸ್ಯೆ ಇರಬಹುದು ಎಂದರ್ಥ!

| Updated By: shruti hegde

Updated on: Oct 26, 2021 | 8:08 AM

ಜೀವನ ಶೈಲಿಯಲ್ಲಿನ ಬದಲಾವಣೆ ಮತ್ತು ಆಹಾರ ಪದ್ಧತಿಯಿಂದ ನಿಮಗೆ ಕರುಳಿನ ಆರೋಗ್ಯ ಸಮಸ್ಯೆ ಕಾಡಬಹುದು. ಹೀಗಿರುವಾಗ ಈ ಕೆಲವು ಲಕ್ಷಣಗಳು ನಿಮ್ಮಲ್ಲಿ ಕಾಡುತ್ತಿದ್ದರೆ ನಿಮಗೆ ಕರುಳಿನ ಆರೋಗ್ಯ ಸಮಸ್ಯೆ ಉಂಟಾಗಿರಬಹುದು ಎಂದರ್ಥ.

ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಕರುಳಿನ ಆರೋಗ್ಯ ಸಮಸ್ಯೆ ಇರಬಹುದು ಎಂದರ್ಥ!
ಸಂಗ್ರಹ ಚಿತ್ರ
Follow us on

ನಮ್ಮ ಮನಸ್ಸು ಆರೋಗ್ಯವಾಗಿರಬೇಕಾದರೆ ದೈಹಿಕ ಆರೋಗ್ಯ ಚೆನ್ನಾಗಿರಬೇಕು. ಅನಾರೋಗ್ಯದಿಂದ ಹೆಚ್ಚು ದುರ್ಬಲರಾಗುತ್ತೀರಿ. ಜತೆಗೆ ಚಿಂತೆ, ಮಾನಸಿಕ ನೆಮ್ಮದಿ ಇಲ್ಲದಿರುವುದು, ಒತ್ತಡ ಇವೆಲ್ಲವೂ ಅನಾರೋಗ್ಯಕ್ಕೆ ಹೆಚ್ಚು ಪರಿಣಾಮವನ್ನು ಬೀರುತ್ತದೆ. ಅದರಲ್ಲಿಯೂ ಮುಖ್ಯವಾಗಿ ಒಳ್ಳೆಯ ಆಹಾರ ಪದ್ಧತಿಯ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಕೆಲವು ಬಾರಿ ಜೀವನ ಶೈಲಿಯಲ್ಲಿನ ಬದಲಾವಣೆ ಮತ್ತು ಆಹಾರ ಪದ್ಧತಿಯಿಂದ ನಿಮಗೆ ಕರುಳಿನ ಆರೋಗ್ಯ ಸಮಸ್ಯೆ ಕಾಡಬಹುದು. ಹೀಗಿರುವಾಗ ಈ ಕೆಲವು ಲಕ್ಷಣಗಳು ನಿಮ್ಮಲ್ಲಿ ಕಾಡುತ್ತಿದ್ದರೆ ನಿಮಗೆ ಕರುಳಿನ ಆರೋಗ್ಯ ಸಮಸ್ಯೆ ಉಂಟಾಗಿರಬಹುದು ಎಂದರ್ಥ.

ಪೌಷ್ಟಿಕ ತಜ್ಞರಾದ ಚೆನ್ನೈನ ಮೀನಾಕ್ಷಿ ಅವರು ಕರುಳಿನ ಆರೋಗ್ಯದ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಹೊಟ್ಟೆ ಉಬ್ಬುವುದು, ಮಲಬದ್ಧತೆ, ಅಸಾಮಾಧಾನ ಮತ್ತು ಮಾನಸಿಕ ಕಿರಿ ಕಿರಿ ಕರುಳಿನ ಆರೋಗ್ಯವನ್ನು ಸೂಚಿಸುತ್ತದೆ.

ಈ ಲಕ್ಷಣಗಳು ಕರುಳಿನ ಆರೋಗ್ಯವನ್ನು ಸೂಚಿಸುತ್ತದೆ
ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್
ಕರುಳಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳು ಹೆಚ್ಚಿನ ಪ್ರಮಾಣದಲ್ಲಿದ್ದಾಗ ಹೊಟ್ಟೆ ಉಬ್ಬುವ ಸಮಸ್ಯೆ ಕಾಡುತ್ತದೆ. ಅದಾಗ್ಯೂ, ಒಳ್ಳೆಯ ಆಹಾರ ಪದ್ಧತಿ ಮತ್ತು ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಯ ಮೂಲಕ ಕರುಳಿನ ಆರೋಗ್ಯವನ್ನು ಸುಧಾರಿಸಬಹುದು. ಪೌಷ್ಟಿಕ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಮನಸ್ಥಿತಿಯ ಏರುಪೇರು
ಜೀರ್ಣಾಂಗ ಕ್ರಿಯೆ ಸರಿಯಾಗಿ ಆಗದಿದ್ದಲ್ಲಿ ಮಾನಸಿಕ ಒತ್ತಡ, ಮನಸ್ಸಿಗೆ ಕಿರಿ ಕಿರಿ ಭಾವನೆ ಉಂಟಾಗುತ್ತದೆ. ಕರುಳಿನ ಆರೋಗ್ಯ ಸಮಸ್ಯೆಯಿಂದಲೂ ಜೀರ್ಣಕ್ರಿಯೆ ತೊಂದರೆ ಉಂಟಾಗುತ್ತದೆ. ಹಾಗಿರುವಾಗ ಆರೋಗ್ಯ ಪದ್ಧತಿ ಬದಲಾಗಬೇಕು ಎನ್ನುತ್ತಾರೆ ಪೌಷ್ಟಿಕ ತಜ್ಞರು.

ಏಕಾಗ್ರತೆ ಸಮಸ್ಯೆ
ಕರುಳಿನ ಆರೋಗ್ಯ ಸರಿಯಾಗಿರದಿದ್ದಲ್ಲಿ, ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದಲ್ಲಿ ಮನಸ್ಸಿಗೆ ಕಿರಿ ಕಿರಿ ಉಂಟಾಗುತ್ತದೆ. ಇದರಿಂದ ನಿಮಗೆ ಏಕಾಗ್ರತೆ ಸಮಸ್ಯೆ ಕಾಡಬಹುದು. ನೀವು ಅನುಭವಿಸುವ ಒತ್ತಡ ಅಥವಾ ಅಸಮತೋಲಿತ ಜೀವನ ಶೈಲಿಯಿಂದ ಏಕಾಗ್ರತೆ ಪಡೆಯಲು ಸಾಧ್ಯವಿಲ್ಲ.

ಚರ್ಮದ ತೊಂದರೆ
ಪೌಷ್ಟಿಕ ತಜ್ಞೆ ವೀನಾಕ್ಷಿ ವಿವರಿಸಿದಂತೆ ಆರೋಗ್ಯಕ್ಕೆ ಅಸಮತೋಲನ ಉಂಟಾದರೆ ಮೊದಲಿಗೆ ಚರ್ಮದಲ್ಲಿನ ಸಮಸ್ಯೆಯಿಂದ ಅದನ್ನು ಕಂಡು ಹಿಡಿಯಬಹುದು. ಉರಿಯೂತ, ಜೀರ್ಣಕಾರಿ ಸಮಸ್ಯೆ, ಕರುಳಿನ ಅನಾರೋಗ್ಯ ಸಮಸ್ಯೆಗಳನ್ನು ಚರ್ಮದಿಂದ ಗಮನಿಸಬಹುದು. ಕರುಳಿನ ಆರೋಗ್ಯಕರ ಜೀವನ ಶೈಲಿಯ ಮೂಲಕ ಚರ್ಮದ ಹೊಳಪು ಮತ್ತು ಕಾಂತಿಯುತ ಚರ್ಮ ಪಡೆಯಲು ಸಹಾಯಕವಾಗಿದೆ.

ಇದನ್ನೂ ಓದಿ:

Health Tips: ಸಾತ್ವಿಕ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು

Health Tips: ತೆಂಗಿನಕಾಯಿ ನೀರು ಸೇವನೆ ರಕ್ತದೊತ್ತಡ ನಿಯಂತ್ರಿಸಲು ಸಹಾಯಕ