Health Tips: ತೆಂಗಿನಕಾಯಿ ನೀರು ಸೇವನೆ ರಕ್ತದೊತ್ತಡ ನಿಯಂತ್ರಿಸಲು ಸಹಾಯಕ

Health Care: ತೆಂಗಿನ ನೀರು ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಗಿರುವಾಗ ಪ್ರತಿನಿತ್ಯ ಒಂದು ಕಪ್​ ತೆಂಗಿನ ನೀರು ಅಥವಾ ಎಳನೀರು ಸೇವಿಸುವ ಮೂಲಕ ದೇಹವನ್ನು ಸದೃಢವಾಗಿರಿಸಿಕೊಳ್ಳಿ.

Health Tips: ತೆಂಗಿನಕಾಯಿ ನೀರು ಸೇವನೆ ರಕ್ತದೊತ್ತಡ ನಿಯಂತ್ರಿಸಲು ಸಹಾಯಕ
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on: Oct 17, 2021 | 11:30 AM

ತೆಂಗಿನ ನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸದೃಢ ಆರೋಗ್ಯಕ್ಕೆ ತೆಂಗಿನ ನೀರು ಸೇವನೆ ಒಳ್ಳೆಯದು. ಇದರಲ್ಲಿ ಕಡಿಮೆ ಕ್ಯಾಲೋರಿ ಜತೆಗೆ ಉತ್ಕರ್ಷಣ ನಿರೋಧಕಗಳು, ಅಮೈನೋ ಆಮ್ಲಗಳು, ಕಿಣ್ವಗಳು, ಜೀವಸತ್ವಗಳು, ವಿಟಮಿನ್ ಸಿ ನಂತಹ ಅನೇಕ ಪೋಷಕಾಂಶಗಳು ಕಂಡು ಬರುತ್ತವೆ. ತೆಂಗಿನ ನೀರು ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಅಲ್ಲದೆ ಇದರಲ್ಲಿರುವ ಸೈಟೋಕಿನಿನ್​ಗಳು ಅತಿಬೇಗ ವಯಸ್ಸಾಗುವ ಲಕ್ಷಣಗಳು ಬಾರದಂತೆ ತಡೆಯುತ್ತದೆ. ಇದರಲ್ಲಿ 15 ಗ್ರಾಂ ಕಾರ್ಬೋಹೈಡ್ರೇಟ್, 8 ಗ್ರಾಂ ಸಕ್ಕರೆ, ಕ್ಯಾಲ್ಸಿಯಂ ಶೇ.4ರಷ್ಟು, ರಂಜಕ ಶೇ. 2ರಷ್ಟು, ಪೊಟ್ಯಾಷಿಯಮ್ ಶೇ15ರಷ್ಟು ಇರುತ್ತದೆ. ಇದು ನಿಮ್ಮ ಆರೋಗ್ಯಯುತ ದೇಹಕ್ಕೆ ಸಹಾಯಕಾರಿ.

ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಅಧಿಕ ರಕ್ತದೊತ್ತಡ ನಿಯಂತ್ರಿಸಲು ತೆಂಗಿನ ನೀರು ಸೇವನೆ ಒಳ್ಳೆಯದು. ಇದರಲ್ಲಿರುವ ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯಕಾರಿ. ಇದು ಅಧಿಕ ರಕ್ತದೊತ್ತಡವನ್ನು ನಿಯತ್ರಿಸಲು ಸಹಾಯ ಮಾಡುತ್ತದೆ.

ಹೃದಯ ಮತ್ತು ಮೂತ್ರಪಿಂಡದ ಆರೋಗ್ಯಕ್ಕೆ ಪ್ರಯೋಜನಕಾರಿ ಕೊಲೆಸ್ಟ್ರಾಲ್ ಮತ್ತು ಕೊಬ್ಬು ರಹಿತವಾಗಿರುವುದರಿಂದ ಇದು ಹೃದಯಕ್ಕೆ ತುಂಬಾ ಒಳ್ಳೆಯದು. ಇದರ ಜತೆಯಲ್ಲಿ ಉತ್ಕರ್ಷಣ ನಿರೋಧಕ ಗುಣ ಇರುವುದರಿಂದ ರಕ್ತಪರಿಚಲನೆಗೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ತೆಂಗಿನ ನೀರನ್ನು ಸೇವಿಸುವುದರಿಂದ ಮೂತ್ರಪಿಂಡದ ಆರೋಗ್ಯಕ್ಕೂ ಒಳ್ಳೆಯದು.

ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ ತೆಂಗಿನ ನೀರಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಇ ಇರುತ್ತದೆ. ಆದ್ದರಿಂದ ಇದನ್ನು ಪ್ರತಿದಿನ ಕುಡಿಯುವುದರಿಂದ ಕೂದಲನ್ನು ಬಲಪಡಿಸಿಕೊಳ್ಳಬಹುದು. ಇದು ಕೂದಲು ಉದುರುವ ಸಮಸ್ಯೆಗೆ ಪರಿಹಾರ ನೀಡುತ್ತದೆ. ಅಲ್ಲದೇ, ಚರ್ಮದ ಶುಷ್ಕತೆಯನ್ನು ಸಹ ತೆಗೆದುಹಾಕುತ್ತದೆ.

ಇದನ್ನೂ ಓದಿ:

Health Tips: ಬೆಳಿಗ್ಗೆ ವಾಕಿಂಗ್ ಮಾಡುವಾಗ ಮೊಬೈಲ್ ಬಳಸುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ

Health Tips: ನಿಮ್ಮ ಹಲ್ಲುಗಳನ್ನು ಬಿಳುಪಾಗಿಸಲು ಇಲ್ಲಿವೆ ಸಲಹೆಗಳು​