ಈ ಸಲಹೆಯನ್ನು ಪಾಲಿಸಿದ್ರೆ ಹಾಸಿಗೆಯ ಮೇಲೆ ಮಲಗಿದ ತಕ್ಷಣ ನಿದ್ರೆಗೆ ಜಾರುತ್ತೀರಿ

ನಿದ್ರೆ ಆರೋಗ್ಯಕ್ಕೆ ಒಳ್ಳೆಯದು, ಆದರೆ ಸರಿಯಾದ ಸಮಯಕ್ಕೆ ನಿದ್ರೆ ಬರದಿದ್ದರೆ ಮರುದಿನ ಆಯಾಸ, ಕಿರಿಕಿರಿ, ಕಳಪೆ ಜೀರ್ಣಕ್ರಿಯೆಯಂತಹ ಸಮಸ್ಯೆಗಳು ಬರುತ್ತದೆ. ಸರಿಯಾದ ನಿದ್ರೆ ಇಲ್ಲದ ಸಮಯದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಚಟುವಟಿಕೆಯಿಂದ ಇರಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರಕೃತಿ ಚಿಕಿತ್ಸಾ ವೈದ್ಯೆ ಮತ್ತು ಸಂಶೋಧಕಿ ಡಾ. ಜನೈನ್ ಬೌರಿಂಗ್ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಈ ಸಲಹೆಯನ್ನು ಪಾಲಿಸಿದ್ರೆ ಹಾಸಿಗೆಯ ಮೇಲೆ ಮಲಗಿದ ತಕ್ಷಣ ನಿದ್ರೆಗೆ ಜಾರುತ್ತೀರಿ
ಸಾಂದರ್ಭಿಕ ಚಿತ್ರ

Updated on: Sep 10, 2025 | 6:07 PM

ಉತ್ತಮ ಆರೋಗ್ಯಕ್ಕೆ ನಿದ್ರೆ (sleep) ಅಗತ್ಯವಾಗಿರುತ್ತದೆ. ಆದರೆ ಮನಸ್ಸಿನ ಒತ್ತಡ, ಕೆಲಸದ ಬ್ಯುಸಿಯಲ್ಲಿ ನಿದ್ರೆ ಸರಿಯಾಗಿ ಆಗುವುದಿಲ್ಲ. ಆಗ ಖಂಡಿತ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಇದರಿಂದ ಅನೇಕ ಕಾಯಿಲೆಗಳಿಗೂ ಒಳಗಾಗುತ್ತೇವೆ. ನಿದ್ರೆ ಸರಿಯಾಗಿ ಆಗದೇ ಇದ್ದರೆ ಆಯಾಸ, ಕಿರಿಕಿರಿ, ಕಳಪೆ ಜೀರ್ಣಕ್ರಿಯೆಯಂತಹ ಸಮಸ್ಯೆ ಬರುತ್ತದೆ. ದೀರ್ಘಾವಧಿ ಅನಾರೋಗ್ಯಕ್ಕೂ ಕಾರಣವಾಗಬಹುದು. ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಪ್ರಕೃತಿ ಚಿಕಿತ್ಸಾ ವೈದ್ಯೆ ಮತ್ತು ಸಂಶೋಧಕಿ ಡಾ. ಜನೈನ್ ಬೌರಿಂಗ್ (Dr. Janine Bowring) ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕೆಲವು ಸುಲಭ ಮತ್ತು ಪರಿಣಾಮಕಾರಿ ಸಲಹೆಯನ್ನು ಹೇಳಿದ್ದಾರೆ.

ನಿದ್ರೆ ಬರದಿದ್ದರೆ ಏನು ಮಾಡಬೇಕು?

ಬೆಳಿಗ್ಗೆ ಸೂರ್ಯನ ಬೆಳಕು:

ಇದನ್ನೂ ಓದಿ
ಜೋಳದ ರೊಟ್ಟಿ Vs ರಾಗಿ ರೊಟ್ಟಿ: ತೂಕ ಇಳಿಸೋರಿಗೆ ಯಾವುದು ಉತ್ತಮ?
ಯಾವ ಋತುವಿನಲ್ಲಿ ಯಾವ ಪಾತ್ರೆಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು
ಮಳೆಗಾಲದಲ್ಲಿ ಶಿಲೀಂಧ್ರ ಸೋಂಕು, ಬೆವರು ಗುಳ್ಳೆಗಳು ಕಾಣಿಸಿಕೊಳ್ಳುವುದೇಕೆ?
ಬರಿಗಾಲಿನಲ್ಲಿ ನಡೆಯುವುದು vs ಶೂ ಹಾಕಿ ನಡೆಯುವುದು, ಯಾವುದು ಒಳ್ಳೆಯದು?

ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಇದ್ದಲ್ಲಿ, ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಕನ್ನಡಕ ಅಥವಾ ಸನ್ ಗ್ಲಾಸ್ ಧರಿಸದೆ ಹೊರಗೆ ಹೋಗಿ. ದೇಹದ ಸಿರ್ಕಾಡಿಯನ್ ಲಯ ಅಂದರೆ ನಿದ್ರೆ ಹಾಗೂ ಎಚ್ಚರದ ನೈಸರ್ಗಿಕ ಚಕ್ರವು ಕಣ್ಣುಗಳು ಮತ್ತು ಚರ್ಮದ ಮೇಲೆ ಸೂರ್ಯನ ಬೆಳಕು ಬಿದ್ದಾಗ ಸರಿಯಾಗುತ್ತದೆ. ಇದು ನಿಮ್ಮನ್ನು ದಿನವಿಡೀ ಸಕ್ರಿಯವಾಗಿ ಹಾಗೂ ರಾತ್ರಿ ಸುಖವಾಗಿ ನಿದ್ರೆ ಮಾಡುವಂತೆ ಮಾಡುತ್ತದೆ.

ಕಿಟಿಕಿಯಿಂದ ಸೂರ್ಯನ್ನು ನೋಡಿ:

ಬೆಳಿಗ್ಗೆ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗದಿದ್ದರೆ, ಕಿಟಕಿ ತೆರೆದು ಬಿಸಿಲಿನಲ್ಲಿ ಕುಳಿತುಕೊಳ್ಳಿ. ಬೆಳಗಿನ ನೈಸರ್ಗಿಕ ಬೆಳಕು ದೇಹಕ್ಕೆ ದಿನವನ್ನು ಪ್ರಾರಂಭಿಸಲು ಸರಿಯಾದ ಸಂಕೇತವನ್ನು ನೀಡುತ್ತದೆ, ಇದರಿಂದಾಗಿ ಮೆಲಟೋನಿನ್ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಹಾಗೂ ರಾತ್ರಿಯಲ್ಲಿ ಸರಿಯಾದ ಸಮಯದಲ್ಲಿ ನಿದ್ರೆ ಬರುವಂತೆ ಮಾಡುತ್ತದೆ.

ನಿದ್ರೆಗೆ ಒಂದು ನಿಗದಿತ ಸಮಯ:

ಪ್ರತಿದಿನ ಮಲಗುವ ಹಾಗೂ ಬೆಳಿಗ್ಗೆ ಎಚ್ಚರಗೊಳ್ಳುವ ಸಮಯವನ್ನು ನಿಗದಿ ಮಾಡಿಕೊಳ್ಳಿ. ದೇಹವು ನಿಗದಿತ ದಿನಚರಿಗೆ ಬಂದಾಗ ಅದು ಸಮಯಕ್ಕೆ ಸರಿಯಾಗಿ ನಿದ್ರಿಸಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ: ಜೋಳದ ರೊಟ್ಟಿ Vs ರಾಗಿ ರೊಟ್ಟಿ: ತೂಕ ಇಳಿಸೋರಿಗೆ ಯಾವುದು ಬೆಸ್ಟ್?

ಕತ್ತಲೆಯ ಕೋಣೆಯಲ್ಲಿ ಮಲಗುವುದು:

ಮಲಗುವಾಗ ಕೋಣೆಯಲ್ಲಿ ಕೃತಕ ಬೆಳಕು ಇರದಂತೆ ನೋಡಿಕೊಳ್ಳಿ. ರಾತ್ರಿ ಬೆಳಕು ಅಥವಾ ಎಲೆಕ್ಟ್ರಾನಿಕ್ ಸಾಧನದ ಪರದೆಯು ನಿದ್ರೆಗೆ ಭಂಗ ತರುತ್ತದೆ. ಅಗತ್ಯವಿದ್ದರೆ ಸ್ಲೀಪ್ ಮಾಸ್ಕ್ ಬಳಸಿ. ಕತ್ತಲೆಯ ಕೋಣೆಯು ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ಬೇಗನೆ ನಿದ್ರಿಸಲು ಸಹಾಯ ಮಾಡುತ್ತದೆ.

ಕೋಣೆಯ ಉಷ್ಣತೆಯನ್ನು ತಂಪಾಗಿಡಿ:

ನಿದ್ರೆಗೆ ಸೂಕ್ತವಾದ ತಾಪಮಾನವು 18-20°C (65-68°F) ಆಗಿರಬೇಕು. ತಂಪಾದ ಕೋಣೆಯು ಮೆದುಳನ್ನು ತಂಪಾಗಿಸುತ್ತದೆ, ಇದು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಆಳವಾದ ನಿದ್ರೆಯನ್ನು ನೀಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ