ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ವಿಜ್ಞಾನಿಗಳು ಸಿಂಥೆಟಿಕ್ ಸಂಯುಕ್ತವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಕ್ಯಾನ್ಸರ್ ಕೋಶಗಳ (Cancer Cells) ವಿರುದ್ಧ ಪ್ರತಿಕಾಯಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ಸಂಯುಕ್ತವು ಪ್ರೋಟೀನ್‌ಗೆ ಅಂಟಿಕೊಳ್ಳುತ್ತದೆ ಮತ್ತು ದುಗ್ಧರಸ ಗ್ರಂಥಿಗಳಿಗೆ ಚಲಿಸುತ್ತದೆ. ದುಗ್ಧರಸ ಗ್ರಂಥಿಗಳಲ್ಲಿ ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಪ್ರತಿಕಾಯಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
ಐಐಎಸ್‌ಸಿ ಸಂಶೋಧಕರ ತಂಡದ ಪ್ರಕಾರ, ಅಡ್ವಾನ್ಸ್‌ಡ್ ಹೆಲ್ತ್‌ಕೇರ್ ಮೆಟೀರಿಯಲ್ಸ್‌ನಲ್ಲಿ ಪ್ರಕಟವಾದ ಅಧ್ಯಯನವು ಕ್ಯಾನ್ಸರ್ ಕೋಶಗಳು ದೇಹದೊಳಗಿನ ಪ್ರತಿಕಾಯಗಳ ಉತ್ಪಾದನೆಯನ್ನು ದುರ್ಬಲಗೊಳಿಸಬಹುದು ಅಥವಾ ಸ್ಥಗಿತಗೊಳಿಸಬಹುದು ಎಂದು ತಿಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನಿಗಳು ಈ ಪ್ರತಿಜನಕಗಳನ್ನು ಅಭಿವೃದ್ಧಿಪಡಿಸಲು ಕ್ಯಾನ್ಸರ್ ಕೋಶದ ಮೇಲ್ಮೈಗಳಲ್ಲಿ ಕಂಡುಬರುವ ಕಾರ್ಬೋಹೈಡ್ರೇಟ್‌ಗಳತ್ತ ಗಮನವನ್ನು ಕೇಂದ್ರೀಕರಿಸಿದ್ದಾರೆ.
ಇದನ್ನೂ ಓದಿ: Breast Cancer: ಭಾರತದಲ್ಲಿ ಇದ್ದಕ್ಕಿದ್ದಂತೆ ಸ್ತನ ಕ್ಯಾನ್ಸರ್ ಹೆಚ್ಚಾಗಿರುವುದೇಕೆ?
ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಂಶೋಧಕರು ಸಂಯುಕ್ತವನ್ನು ಇಲಿಗಳ ಮಾದರಿಗಳಿಗೆ ಇಂಜೆಕ್ಟ್ ಮಾಡಿದ್ದಾರೆ. ಈ ವೇಳೆ ಪ್ರತಿಜನಕ ಸಂಯುಕ್ತವು ದುಗ್ಧರಸ ಗ್ರಂಥಿಗಳಲ್ಲಿ ಹೆಚ್ಚಾಗಿ ಸಂಗ್ರಹವಾಗಿದೆ ಎಂದು ಅವರು ಕಂಡುಕೊಂಡರು. ಸಂಯುಕ್ತದ ಕಡಿಮೆ ಪ್ರಮಾಣದಲ್ಲಿ ಪ್ರತಿರಕ್ಷಣೆ ಪಡೆದ ಇಲಿಗಳು ಹೆಚ್ಚಿನ ಪ್ರತಿಕಾಯ ಮಟ್ಟವನ್ನು ಉತ್ಪತ್ತಿ ಮಾಡುತ್ತವೆ ಎಂಬುದು ಈ ವೇಳೆ ಸಾಬೀತಾಗಿದೆ.
ಕ್ಯಾನ್ಸರ್ ಮತ್ತು ಇತರ ಕ್ಲಿನಿಕಲ್ ಪ್ರಯೋಗಗಳಿಗೆ ಲಸಿಕೆಗಳ ಅಭಿವೃದ್ಧಿಗೆ ಸಂಯುಕ್ತವನ್ನು ಮತ್ತಷ್ಟು ಬಳಸಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ