AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳು ಬದುಕುಳಿಯುವ ಸಾಧ್ಯತೆ ಹೆಚ್ಚು : ಅಧ್ಯಯನ

ವೈದ್ಯ ಲೋಕದ ಅಚ್ಚರಿಯ ವರದಿಯನ್ನು ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್‌ ಪ್ರಕಟಿಸಿದೆ. ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳು ಬದುಕುಳಿಯುವ ಸಾಧ್ಯತೆ ಹೆಚ್ಚು ಎಂದು ಈ ಅಧ್ಯಯನ ಹೇಳಿದೆ. ಇದನ್ನು ಅನೇಕ ಆಯಾಮಗಳಿಂದ ಅಧ್ಯಯನ ಮಾಡಲಾಗಿದೆ.  ಪುರುಷ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳಿಗಿಂತ ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳು ಕಡಿಮೆ ಮರಣ ಪ್ರಮಾಣ ಹೊಂದಿದ್ದಾರೆ ಎಂದು ಈ ವರದಿಯ ಅಧ್ಯಯನ ಹೇಳಿದೆ.

ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳು ಬದುಕುಳಿಯುವ ಸಾಧ್ಯತೆ ಹೆಚ್ಚು : ಅಧ್ಯಯನ
ಅಕ್ಷಯ್​ ಪಲ್ಲಮಜಲು​​
|

Updated on: Apr 24, 2024 | 12:41 PM

Share

ವೈದ್ಯರಲ್ಲಿ ಬೇಧವಿಲ್ಲ ಎಲ್ಲರೂ ಒಂದೇ, ಆದರೆ ಅವರ ಕಾರ್ಯವೈಖರಿಯಲ್ಲಿ ವ್ಯತ್ಯಾಸ ಇದೆ. ಇದು ರೋಗಿಗಳ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ವೈದ್ಯರು ರೋಗಿಗಳ ಜತೆಗೆ ನಡೆದುಕೊಳ್ಳವ ರಿತಿ-ನೀತಿ ಅವರ ಸಾವು -ಬದಕನ್ನು ನಿರ್ಧಾರಿಸುತ್ತದೆ. ಇದೀಗ ಈ ಬಗ್ಗೆ ಒಂದು ಅಧ್ಯಯನ ಅಚ್ಚರಿಯ ವರದಿಯನ್ನು ನೀಡಿದೆ. ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳು ಮರಣ ಹೊಂದುವ ಸಾಧ್ಯತೆ ಕಡಿಮೆ ಹಾಗೂ ತಕ್ಷಣಕ್ಕೆ ಚೇತರಿಸಿಕೊಳ್ಳುತ್ತಾರೆ ಎಂದು ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್‌ ಪ್ರಕಟಿಸಿದ ವರದಿಯಲ್ಲಿ ಹೇಳಲಾಗಿದೆ. ಪುರುಷ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳಿಗಿಂತ ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳು ಕಡಿಮೆ ಮರಣ ಪ್ರಮಾಣ ಹೊಂದಿದ್ದಾರೆ ಎಂದು ಈ ವರದಿಯ ಅಧ್ಯಯನ ಹೇಳಿದೆ.

2016 ರಿಂದ 2019 ರವರೆಗೆ ಆಸ್ಪತ್ರೆಗೆ ದಾಖಲಾದ 458,100 ಮಹಿಳಾ ರೋಗಿಗಳು, ಅದರಲ್ಲೂ 318,800 ಕ್ಕೂ ಹೆಚ್ಚು ಪುರುಷ ರೋಗಿಗಳು ಸೇರಿದಂತೆ 776,000 ಜನರನ್ನು ಈ ಅಧ್ಯಯನಕ್ಕೆ ಬಳಸಲಾಗಿದೆ. ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದಾಗ ರೋಗಿಗಳಿಗೆ ಕಡಿಮೆ ಮರಣ ಮತ್ತು ತಕ್ಷಣದಲ್ಲಿ ಚೇತರಿಕೆಗೊಂಡಿದ್ದಾರೆ ಎಂದು ಹೇಳಲಾಗಿದೆ.

ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದ ಮಹಿಳಾ ರೋಗಿಗಳ ಮರಣ ಪ್ರಮಾಣವು 8.15% ರಷ್ಟಿದ್ದರೆ, ಪುರುಷ ವೈದ್ಯರಿಂದ ಚಿಕಿತ್ಸೆ ಪಡೆದು ಮರಣ ಹೊಂದಿದ ರೋಗಿಗಳು 8.38% ರಷ್ಟಿದೆ. ಇನ್ನು ಇದರಲ್ಲಿ ಮರಣ ಹೊಂದದವರ ಪ್ರಮಾಣವನ್ನು ಹೊಂದಾಣಿಕೆ ಮಾಡಿದ್ರೆ, ಪುರುಷ ವೈದ್ಯರಿಂದ ಚಿಕಿತ್ಸೆ ಪಡೆದು ಮರಣ ಹೊಂದದವರು 10.15% ರಷ್ಟು, ಆದರೆ ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದು ಮರಣ ಹೊಂದದವರು 10.23% ದಷ್ಟು ಎಂದು ಹೇಳಲಾಗಿದೆ.

ಈ ಅಧ್ಯಯನದಲ್ಲಿ ಮಹಿಳಾ ವೈದ್ಯರು ಉತ್ತಮ ಗುಣಮಟ್ಟದ ಹಾಗೂ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ ಎಂದು ಹೇಳಲಾಗಿದೆ. ಹೆಚ್ಚಿನ ಮಹಿಳಾ ವೈದ್ಯರು ರೋಗಿಗಳಿಗೆ ಸಾಮಾಜಿಕ ದೃಷ್ಟಿಕೋನದ ಪ್ರಯೋಜನಗಳನ್ನು ತಿಳಿಸುತ್ತಾರೆ ಎಂದು ಈ ವರದಿ ಹೇಳಿದೆ. ಇದರ ಜತೆಗೆ ಮಹಿಳಾ ವೈದ್ಯರು ತಮ್ಮ ರೋಗಿಗಳಿಗೆ ಹೆಚ್ಚಿನ ಸಮಯ ನೀಡುತ್ತಾರೆ. ಹಾಗೂ ಅವರ ಜತೆಗೆ ತಾಳ್ಮೆ ಮತ್ತು ಅತಿಯಾದ ಪ್ರೀತಿಯಿಂದ ಅವರನ್ನು ಮಾತನಾಡಿಸುತ್ತಾರೆ ಎಂದು ಹೇಳಿದೆ.

ಇದನ್ನೂ ಓದಿ: ಇಸ್ರೇಲ್​ ದಾಳಿಯಲ್ಲಿ ಮೃತಪಟ್ಟ ಗರ್ಭಿಣಿಗೆ ಹೆರಿಗೆ ಮಾಡಿಸಿದ ವೈದ್ಯರು, ಮಗು ಸುರಕ್ಷಿತ

ಮಹಿಳಾ ವೈದ್ಯರ ವಾತ್ಸಾಲ್ಯ ರೋಗಿಯಲ್ಲಿ ಹೆಚ್ಚಿನ ಧೈರ್ಯವನ್ನು ತುಂಬುತ್ತದೆ. ಮಹಿಳಾ ವೈದ್ಯರು ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರುತ್ತಾರೆ. ಇದರಲ್ಲೂ ಮಹಿಳಾ ವೈದ್ಯರು ಮಹಿಳಾ ರೋಗಿಗಳಿಗೆ ಸಿಕ್ಕಾಗ ಸೂಕ್ಷ್ಮ ಪರೀಕ್ಷೆಗಳ ಸಮಯದಲ್ಲಿ ರೋಗಿಗಳಿಗೆ ಉಂಟಾಗಬಹುದಾದ ಮುಜುಗರ, ಅಸ್ವಸ್ಥತೆ, ನಿವಾರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಈ ಅಧ್ಯಯನದಿಂದ ಮಹಿಳೆ ಮತ್ತು ಪುರುಷ ವೈದ್ಯರ ಮಧ್ಯೆ ಇರುವ ವ್ಯತ್ಯಾಸವನ್ನು ತಿಳಿಸುತ್ತದೆ. ಅವರ ಆರೈಕೆ, ಕಾಳಜಿ, ಚಿಕಿತ್ಸೆ ಬಗ್ಗೆ ಈ ಅಧ್ಯಯನ ತಿಳಿಸುತ್ತದೆ.

2002 ರ ಪ್ರತ್ಯೇಕ ಅಧ್ಯಯನವು ಪುರುಷ ವೈದ್ಯರಿಗೆ ಹೋಲಿಸಿದರೆ ಮಹಿಳಾ ವೈದ್ಯರು ರೋಗಿಯೊಂದಿಗೆ ಸರಾಸರಿ 23 ನಿಮಿಷಗಳನ್ನು ಕಳೆಯುತ್ತಾರೆ ಎಂದು ಕಂಡುಹಿಡಿದಿದೆ. ಈ ಬಗ್ಗೆ ಅನೇಕ ವಿಭಿನ್ನ ರೀತಿ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!