ಗಾಜಾ: ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಗರ್ಭಿಣಿಗೆ ಹೆರಿಗೆ ಮಾಡಿಸಿದ ವೈದ್ಯರು, ಮಗು ಸುರಕ್ಷಿತ
ಇಸ್ರೇಲ್ ಗಾಜಾದ ಮೇಲೆ ನಡೆಸಿದ ದಾಳಿಯಲ್ಲಿ ಮೃತಪಟ್ಟ ಗರ್ಭಿಣಿಗೆ ವೈದ್ಯರು ಹೆರಿಗೆ ಮಾಡಿಸಿ ಮಗುವನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಅಲ್ಲಿ ತೀವ್ರಗೊಂಡ ದಾಳಿಯಲ್ಲಿ ರಾತ್ರೋರಾತ್ರಿ 19 ಮಂದಿ ಸಾವನ್ನಪ್ಪಿದ್ದರು. ಎರಡು ಮನೆಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 13 ಮಂದಿ ಮಕ್ಕಳು ಮೃತಪಟ್ಟಿದ್ದರು.
ಗಾಜಾ(Gaza)ದ ಮೇಲೆ ಇಸ್ರೇಲ್(Israel) ನಡೆಸಿದ ದಾಳಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಗರ್ಭಿಣಿ ಹಾಗೂ ಆಕೆಯ ಪತಿ, ಮಕ್ಕಳು ಕೂಡ ಮೃತಪಟ್ಟಿದ್ದಾರೆ. ಆದರೆ ತುಂಬು ಗರ್ಭಿಣಿಯಾಗಿದ್ದ ಮಹಿಳೆ ಮೃತಪಟ್ಟ ಬಳಿಕವೂ ವೈದ್ಯರು ಹೆರಿಗೆ ಮಾಡಿಸಿ ಮಗುವನ್ನು ರಕ್ಷಿಸಿ ಮಾನವೀಯತೆ ತೋರಿದ್ದಾರೆ. ಅಲ್ಲಿ ತೀವ್ರಗೊಂಡ ದಾಳಿಯಲ್ಲಿ ರಾತ್ರೋರಾತ್ರಿ 19 ಮಂದಿ ಸಾವನ್ನಪ್ಪಿದ್ದರು. ಎರಡು ಮನೆಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 13 ಮಂದಿ ಮಕ್ಕಳು ಮೃತಪಟ್ಟಿದ್ದರು.
ಗರ್ಭಿಣಿಯ ಕುಟುಂಬ ಕೂಡ ಸಾವನ್ನಪ್ಪಿತ್ತು, ಆದರೆ ಕೂಡಲೇ ವೈದ್ಯರು ಮೃತ ಗರ್ಭಿಣಿಯ ಹೆರಿಗೆ ಮಾಡಿಸಿ 1.4 ಕೆಜಿ ತೂಕದ ಮಗುವನ್ನು ಹೊರತೆಗೆದಿದ್ದರು. ಮಗುವಿನ ಆರೋಗ್ಯ ಸ್ಥಿರವಾಗಿದ್ದು, ಸುಧಾರಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಆಕೆಯ ತಾಯಿ ಸಬ್ರೀನ್ ಅಲ್-ಸಕಾನಿ 30 ವಾರಗಳ ಗರ್ಭಿಣಿಯಾಗಿದ್ದರು.
ಮಗುವನ್ನು ರಾಫಾ ಆಸ್ಪತ್ರೆಯಲ್ಲಿ ಇನ್ಕ್ಯುಬೇಟರ್‌ನಲ್ಲಿ ಮತ್ತೊಂದು ಶಿಶುವಿನ ಜೊತೆಗೆ ಇರಿಸಲಾಯಿತು. ದಾಳಿಯಲ್ಲಿ ಮೃತಪಟ್ಟ ಮಗುವಿನ ಸಹೋದರಿ ತನ್ನ ತಂಗಿಗೆ ರೂಹ್ ಎಂದು ನಾಮಕರಣ ಮಾಡಲು ಬಯಸಿದ್ದಳು ಎಂದು ಮಗುವಿನ ಚಿಕ್ಕಪ್ಪ ಹೇಳಿದ್ದಾರೆ.
ಮತ್ತಷ್ಟು ಓದಿ: ಗಾಜಾದ ಆಸ್ಪತ್ರೆಯಲ್ಲಿ ಸಾಮೂಹಿಕ ಸಮಾಧಿ, 200ಕ್ಕೂ ಅಧಿಕ ಶವಗಳು ಪತ್ತೆ
ಮಗು ಮೂರ್ನಾಲ್ಕು ವಾರಗಳ ಕಾಲ ಆಸ್ಪತ್ರೆಯಲ್ಲಿಯೇ ಇರುತ್ತದೆ, ಅದಾದ ನಂತರ ಮಗುವನ್ನು ಎಲ್ಲಿಗೆ ಕಳುಹಿಸಬೇಕು ಎಂದು ನಾವು ನೋಡುತ್ತೇವೆ ಎಂದಿದ್ದಾರೆ. ಕಳೆದ 24 ಗಂಟೆಗಳಲ್ಲಿ ಗಾಜಾ ಪಟ್ಟಿಯಾದ್ಯಂತ ಇಸ್ರೇಲಿ ಸೇನಾ ದಾಳಿಗಳು ನಡೆದಿವೆ, 48 ಪ್ಯಾಲೆಸ್ತೀನಿಯರನ್ನು ಕೊಂದು 79 ಮಂದಿ ಗಾಯಗೊಳಿಸಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
ಗಾಜಾದ ಆಸ್ಪತ್ರೆಯಲ್ಲಿ ಸಾಮೂಹಿಕ ಸಮಾಧಿ ಗಾಜಾ(Gaza)ದ ಆಸ್ಪತ್ರೆ(Hospital)ಯೊಂದರಲ್ಲಿ 200ಕ್ಕೂ ಅಧಿಕ ಶವಗಳು ಪತ್ತೆಯಾಗಿವೆ. ಪ್ಯಾಲೆಸ್ತೀನ್ ನಾಗರಿಕ ರಕ್ಷಣಾ ಸಿಬ್ಬಂದಿ ಗಾಜಾದ ಖಾನ್ ಯೂನಿಸ್ನಲ್ಲಿರುವ ನಾಸರ್ ಮೆಡಿಕಲ್ ಕಾಂಪ್ಲೆಕ್ಸ್ನಲ್ಲಿ ಸಾಮೂಹಿಕ ಸಮಾಧಿ ಇರುವುದನ್ನು ಪತ್ತೆಹಚ್ಚಿದ್ದಾರೆ. ಇಸ್ರೇಲ್(Israel) ಆರು ತಿಂಗಳಿಗಿಂತ ಹೆಚ್ಚು ಕಾಲ ಗಾಜಾದ ಮೇಲೆ ನಿರಂತರ ದಾಳಿ ನಡೆಸಿತ್ತು. ಏಪ್ರಿಲ್ 7ರಂದು ಇಸ್ರೇಲಿ ಮಿಲಿಟರಿ ತನ್ನ ಸೇನೆಯನ್ನು ಹಿಂಪಡೆದಿದೆ.
ಬಳಿಕ ಎಲ್ಲೆಡೆ ರಕ್ಷಣಾ ಸಿಬ್ಬಂದಿಗಳು ಜನರನ್ನು ಹುಡುಕುವ ಪ್ರಯತ್ನವನ್ನು ಮುಂದುವರೆಸಿದ್ದಾರೆ, ಆಗ 180ಕ್ಕೂ ಅಧಿಕ ಶವಗಳು ಪತ್ತೆಯಾಗಿವೆ. ಇವುಗಳಲ್ಲಿ ಮಕ್ಕಳು, ಯುವಕರು , ಮಹಿಳೆಯರು ಕೂಡ ಸೇರಿದ್ದಾರೆ.ಇಸ್ರೇಲ್ ಗಾಜಾ ಮೇಲೆ ನಡೆಸಿದ ದಾಳಿಯಲ್ಲಿ 34,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ. ಗಾಜಾದ ಎರಡು ದೊಡ್ಡ ನಗರಗಳನ್ನು ಧ್ವಂಸಗೊಳಿಸಿತ್ತು.
ಕಳೆದ ವರ್ಷ ಗಾಜಾದ ಅತಿದೊಡ್ಡ ಆಸ್ಪತ್ರೆ ಮೇಲೆ ಇಸ್ರೇಲ್ ಪಡೆಗಳು ದಾಳಿ ಮಾಡಿದ ಬಳಿಕ ವಿಶ್ವಸಂಸ್ಥೆಯು ಕಳವಳ ವ್ಯಕ್ತಪಡಿಸಿ ರೋಗಿಗಳನ್ನು ಹಾಗೂ ನಾಗರಿಕರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:26 am, Mon, 22 April 24