ಪ್ಯಾರಾಚೂಟ್ ವಿಫಲ: ವಿಮಾನದಿಂದ ಆಹಾರ ಪೊಟ್ಟಣಗಳು ನೇರವಾಗಿ ಮೈಮೇಲೆ ಬಿದ್ದು ಗಾಜಾದಲ್ಲಿ 5 ಮಂದಿ ಸಾವು

ಗಾಜಾದಲ್ಲಿ ಯುದ್ಧಪೀಡಿತ ಪ್ಯಾಲೆಸ್ತೀನಿಯನ್ನರಿಗೆ ಆಹಾರ, ಸರಬರಾಜು ಮತ್ತು ಔಷಧಗಳನಗನು ವಿಮಾನದಲ್ಲಿ ಸಾಗಿಸುವ ಮೊದಲ ಪ್ರಯತ್ನ ವಿಫಲವಾಗಿದೆ. ವಾಯು ನೆರವು ನೀಡುವಾಗ ಪ್ಯಾರಾಚೂಟ್‌ಗಳು ತೆರೆಯದ ಕಾರಣ ಐದು ಜನರು ಸಾವನ್ನಪ್ಪಿದ್ದಾರೆ. ಇದು ಗಾಜಾದಲ್ಲಿ ಭಯ ಮೂಡಿಸಿದೆ. ಮೃತರು ಯಾವ ದೇಶಕ್ಕೆ ಸೇರಿದವರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಪ್ಯಾರಾಚೂಟ್ ವಿಫಲ: ವಿಮಾನದಿಂದ ಆಹಾರ ಪೊಟ್ಟಣಗಳು ನೇರವಾಗಿ ಮೈಮೇಲೆ ಬಿದ್ದು ಗಾಜಾದಲ್ಲಿ 5 ಮಂದಿ ಸಾವು
ಗಾಜಾImage Credit source: NDTV
Follow us
ನಯನಾ ರಾಜೀವ್
|

Updated on: Mar 09, 2024 | 2:54 PM

ಗಾಜಾದಲ್ಲಿರುವ ಜನರಿಗೆ ಪ್ಯಾರಾಚೂಟ್​ ಮೂಲಕ ಆಹಾರ, ಔಷಧಗಳನ್ನು ವಿತರಿಸುವ ಸಂದರ್ಭದಲ್ಲಿ ಅಪಘಾತವೊಂದು ಸಂಭವಿದೆ. ವಿಮಾನದಿಂದ ಪ್ಯಾರಾಚೂಟ್​ ಮೂಲಕ ಜನರಿಗೆ ಆಹಾರ ವಿತರಿಸುವ ಸಮಯದಲ್ಲಿ ಪೊಟ್ಟಣಗಳು ನೇರವಾಗಿ ಜನರ ಮೇಲೆ ಬಿದ್ದು ಐವರು ಸಾವನ್ನಪ್ಪಿದ್ದಾರೆ.

ಗಾಜಾದ ಅತ್ಯಂತ ವಿನಾಶಕಾರಿ ಭಾಗಗಳಲ್ಲಿ ಒಂದಾದ ಅಲ್-ಶಾತಿ ಎಂದು ಕರೆಯಲ್ಪಡುವ ಕರಾವಳಿ ನಿರಾಶ್ರಿತರ ಶಿಬಿರದ ಬಳಿ ಶುಕ್ರವಾರ ಬೆಳಿಗ್ಗೆ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪ್ಯಾರಾಚೂಟ್ ವಿಫಲಗೊಂಡು ಪರಿಹಾರ ಪೊಟ್ಟಣಗಳು ಕೆಳಗೆ ನಿಂತ ನಾಗರಿಕರ ಮೇಲೆ ಬಿದ್ದು ಸುಮಾರು ಐದು ಮಂದಿ ಮೃತಪಟ್ಟಿದ್ದಾರೆ ಅಲ್ಲದೆ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಗಾಜಾ ನಗರದ ನಿರಾಶ್ರಿತರ ಶಿಬಿರದ ಬಳಿ ನಾಗರಿಕರು ಪರಿಹಾರದ ಪ್ಯಾಕೇಜ್‌ಗಳಿಗಾಗಿ ಕಾಯುತ್ತಿದಾಗ ಈ ಅವಘಡ ಸಂಭವಿಸಿದೆ. ಪ್ಯಾರಾಚೂಟ್ ತೆರೆಯದೇ ರಾಕೆಟ್‌ನಂತೆ ಕೆಳಗೆ ಬಿದ್ದಿದ್ದು ಕೆಳಗೆ ಆಹಾರಕ್ಕಾಗಿ ಕಾಯುತ್ತಿದ್ದ ಐದು ಮಂದಿ ಮೃತಪಟ್ಟಿದ್ದಾರೆ.

ಮತ್ತಷ್ಟು ಓದಿ: ಇಸ್ರೇಲ್​ನಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಕೇರಳ ಮೂಲದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

ಅನೇಕ ದೇಶಗಳು ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ವಿಮಾನವನ್ನು ಆಶ್ರಯಿಸುತ್ತಿದ್ದಾರೆ. ಇದರಿಂದ ಪರಿಹಾರ ಸಾಮಗ್ರಿಗಳಿದ್ದ ಪಾರ್ಸೆಲ್‌ಗಳು ನಾಗರಿಕರ ತಲೆಯ ಮೇಲೆ ಬಿದ್ದಿವೆ. ಗಾಜಾ ನಗರದ ಶತಿ ನಿರಾಶ್ರಿತರ ಶಿಬಿರದ ಬಳಿ ಜನರು ಸಹಾಯ ಪ್ಯಾಕೇಜ್‌ಗಳಿಗಾಗಿ ಸರದಿಯಲ್ಲಿ ನಿಂತಿದ್ದಾಗ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆಯನ್ನು ಗಾಜಾ ಸರ್ಕಾರದ ಮಾಧ್ಯಮ ಕಚೇರಿ ದೃಢಪಡಿಸಿದೆ.

ಗಾಜಾ ಸರ್ಕಾರದ ಮಾಧ್ಯಮ ಕಚೇರಿಯು ಏರ್‌ಡ್ರಾಪ್ ಅನ್ನು ನಿಷ್ಪ್ರಯೋಜಕ ಎಂದು ಕರೆದಿದೆ. ಇಸ್ರೇಲಿ ಪಡೆಗಳು ಗಾಜಾದಲ್ಲಿ ಸಹಾಯ ಬೆಂಗಾವಲು ಪಡೆಯ ಬಳಿ ಗುಂಡಿನ ದಾಳಿ ನಡೆಸಿದಾಗ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಕಾಲ್ತುಳಿತದಲ್ಲಿ ಹೆಚ್ಚಿನ ಜನರು ಸಾವನ್ನಪ್ಪಿದ್ದರು ಎಂದು ಇಸ್ರೇಲ್ ಸೇನೆ ಹೇಳಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್